ಮಹಿಳಾ ಐಸಿಸಿ ವಿಶ್ವಕಪ್ ಟಿ-20ಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಐರ್ಲೆಂಡ್ ವನಿತೆಯರು 38 ರನ್ಗಳ ಸೋಲು ಅನುಭವಿಸಿದ್ದಾರೆ. ಪಂದ್ಯ ಮುಗಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೋಲಿನ ವಿಚಾರವಾಗಿ ಐರ್ಲೆಂಡ್ ತಂಡದ ನಾಯಕಿ ಲೌರಾ ಡೆಲಾನಿ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಜವೇರಿಯ ಖಾನ್ ಅವರ ಅಜೇಯ 74 ರನ್ಗಳ ನೆರವಿನಿಂದ ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಕಲೆಹಾಕಿತು. ಈ ಸಾಧಾರಣ ಗುರಿ ಬೆನ್ನತ್ತಿದ ಐರ್ಲೆಂಡ್ ಕೇವಲ 101 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಕ್ಲೇರ್ ಫಿಲ್ಲಿಂಗ್ಟನ್ 27 ಹಾಗೂ ಇಸೋಬೆಲ್ ಜಾಯ್ಸ್ 30 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್ಮನ್ಗಳ ಸ್ಕೋರ್ ಎರಡಂಕಿ ದಾಟಲಿಲ್ಲ. ಪರಿಣಾಮ ಐರ್ಲೆಂಡ್ ವನಿತೆಯರು 38 ರನ್ಗಳ ಸೋಲು ಕಂಡರು.
ಇದನ್ನೂ ಓದಿ: 6 ತಿಂಗಳ ಬಳಿಕ ಕಣಕ್ಕಿಳಿದ ಎಬಿಡಿ; ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಮಿ. 360
ಈ ಸೋಲಿನಿಂದ ಬೇಸರಗೊಂಡು ಪ್ರತ್ರಿಕಾಗೋಷ್ಠಿಯಲ್ಲಿ ಐರ್ಲೆಂಡ್ ತಂಡದ ನಾಯಕಿ ಲೌರಾ ಡೆಲಾನಿ ಅವರು ಕಣ್ಣೀರಿಟ್ಟಿದ್ದಾರೆ. 'ನಾವು ವೃತ್ತಿಪರ ಕ್ರಿಕೆಟಿಗರಾಗಿ 140 ರನ್ಗಳನ್ನು ಚೇಸ್ ಮಾಡಲು ಸಾಧ್ಯವಾಗಿಲ್ಲ. 40 ರನ್ಗಳಿಂದ ಸೋಲು ಅನುಭವಿಸಿದೆವು. 20 ಓವರ್ನ ಪಂದ್ಯವಾಗಿದ್ದರಿಂದ ಈ ಫಾರ್ಮೇಟ್ನಲ್ಲಿ ಬೇಗನೆ ರನ್ ಕಲೆಹಾಕಬೇಕು. ಇದಕ್ಕಾಗಿ ತುಂಬಾನೆ ಪರಿಶ್ರಮ ಪಟ್ಟಿದ್ದೆ. ಈ ಪಂದ್ಯದಲ್ಲಿ ನಾವು ಸುಲಭವಾಗಿ ಗೆಲುವು ಕಾಣಬಹುದಿತ್ತು. ಆದರೆ ಉತ್ತಮ ಜೊತೆಯಾಟ ಆಡುವಲ್ಲಿ ನಾವು ಎಡವಿದೆವು. ಇದೇ ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು' ಎಂದು ಹೇಳಿ ಕಣ್ಣೀರಿಟ್ಟರು.
"If we were professional I wonder what the score would have been out there."@IrishWomensCric's captain Laura Delany was understandably quite emotional after her team's loss to Pakistan.
Watch👇 pic.twitter.com/25tjIeMMOR
— ICC World Twenty20 (@WorldT20) November 14, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ