Dwayne Bravo: ಯುವರಾಜ್‌ ಸಿಂಗ್‌ಗೆ ಹಾಕಿದ ಒಂದು ಬಾಲ್ ಬ್ರಾವೋ ಕ್ರಿಕೆಟ್ ಜೀವನವನ್ನೇ ಬದಲಾಯಿಸಿತಂತೆ..!

ವೆಸ್ಟ್ ಇಂಡೀಸ್ ಆಟಗಾರ ಬ್ರಾವೊ ಇತ್ತೀಚೆಗೆ ತಮ್ಮ ಕ್ರಿಕೆಟ್ ಜೀವನವನ್ನು ಬದಲಾಯಿಸಿದ ಒಂದು ಎಸೆತದ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ.

ಡ್ವೆನ್ ಬ್ರಾವೋ

ಡ್ವೆನ್ ಬ್ರಾವೋ

  • Share this:
ವೆಸ್ಟ್ ಇಂಡೀಸ್ (West Indies) ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಡ್ವೇನ್ ಬ್ರಾವೊ (Dwayne Bravo) ಅವರು ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ ಸಹ ಕ್ರಿಕೆಟ್ ಅಭಿಮಾನಿಗಳು ಅವರನ್ನು ವೆಸ್ಟ್ ಇಂಡೀಸ್ ಬೌಲರ್ ಎನ್ನುವುದಕ್ಕಿಂತಲೂ ಹೆಚ್ಚಾಗಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅದ್ಬುತವಾದ ಪ್ರದರ್ಶನ ನೀಡಿದ್ದಕ್ಕಾಗಿ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಪ್ರಸ್ತುತ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ (Cricket) ಆಡದೆ ಇದ್ದರೂ ಸಹ ಅವರು ತಮ್ಮ ಹಳೆಯ ಕ್ರಿಕೆಟ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ಹೇಗೆ ಅನೇಕ ಸಂಗತಿಗಳ ನಡುವೆ ಅವರಿಗೆ ಮರೆಯಲು ಸಾಧ್ಯವಾಗದ ಮತ್ತು ಎಂದಿಗೂ ನೆನಪಿನಲ್ಲಿ ಉಳಿಯುವಂತಹ ಒಂದು ಘಟನೆಯನ್ನು ಅವರೇ ಹಂಚಿಕೊಂಡಿದ್ದಾರೆ ನೋಡಿ.

2006ರ ಭಾರತ ಪ್ರವಾಸ:

ಅಂತಹ ಘಟನೆಗಳಲ್ಲಿ ಒಂದನ್ನು ನೆನಪಿಸಿಕೊಂಡ ಬ್ರಾವೊ ಇತ್ತೀಚೆಗೆ ತಮ್ಮ ಕ್ರಿಕೆಟ್ ಜೀವನವನ್ನು ಬದಲಾಯಿಸಿದ ಒಂದು ಎಸೆತದ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ಅದು 2006 ರಲ್ಲಿ ಭಾರತವು ಐದು ಏಕದಿನ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಒಳಗೊಂಡ ಸರಣಿಗೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಾಗ. ಭಾರತವು ಏಕದಿನ ಪಂದ್ಯಗಳಲ್ಲಿ ಭಯಾನಕವಾಗಿ ಸೋಲನ್ನು ಅನುಭವಿಸಿದ್ದು ಬಹುತೇಕವಾಗಿ ಕ್ರಿಕೆಟ್ ಅಭಿಮಾನಿಗಳಿಗೆ ನೆನಪಿನಲ್ಲಿ ಇರುತ್ತದೆ.

ಅದೊಂದು ಎಸೆತ ನನ್ನ ವೃತ್ತಿ ಜೀವನವನ್ನು ಬದಲಾಯಿಸಿತು:

ಏಕದಿನ ಸರಣಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸಿದ ಹೊರತಾಗಿಯೂ ಭಾರತವು 1-4 ರಿಂದ ಏಕದಿನ ಪಂದ್ಯಗಳ ಸರಣಿಯಲ್ಲಿ ಸೋಲನ್ನು ಅನುಭವಿಸಬೇಕಾಯಿತು. ಆದರೂ, ಅಭಿಮಾನಿಗಳು ಇನ್ನೂ ನೆನಪಿಸಿಕೊಳ್ಳುವ ಒಂದು ಪಂದ್ಯವಿದೆ ಮತ್ತು ಇದು ಏಕದಿನ ಸರಣಿಯ ಎರಡನೇ ಪಂದ್ಯವಾಗಿದೆ ಎಂದು ಹೇಳಬಹುದು. ಭಾರತ ತಂಡವು ಕೇವಲ ಒಂದು ರನ್‌ನಿಂದ ಆ ಪಂದ್ಯವನ್ನು ಕಳೆದುಕೊಂಡಿತ್ತು ಮತ್ತು ಆ ಪಂದ್ಯದಲ್ಲಿ ಬ್ರಾವೊ ಅವರು ಭಾರತದ ಬ್ಯಾಟರ್‌ ಆದ ಯುವರಾಜ್ ಸಿಂಗ್ ಅವರನ್ನು ಬೌಲ್ಡ್ ಮಾಡಿದರು, ಆಗ ಆ ಪಂದ್ಯವು ಭಾರತದ ಕೈಯಿಂದ ಜಾರಿತು.

ಇದನ್ನೂ ಓದಿ: IPL 2022: ಗೆಲುವಿನ ಖಾತೆ ತೆರೆದ ಲಕ್ನೋ, ಚೆನ್ನೈಗೆ ಸತತ 2ನೇ ಸೋಲು

ಆ ಒಂದು ಎಸೆತ ಇಡೀ ಜಗತ್ತೇ ನನ್ನತ್ತ ನೋಡುವಂತೆ ಮಾಡಿತು ಮತ್ತು ಅದು ನನ್ನ ಟಿ20 ಕ್ರಿಕೆಟ್ ವೃತ್ತಿ ಜೀವನವನ್ನು ರೂಪಿಸಿತು ಎಂದು ಡ್ವೇನ್ ಬ್ರಾವೊ ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡುತ್ತಾ ಹೇಳಿದರು.

ಸತತ ಬೌಂಡರಿಗಳನ್ನು ಹೊಡೆಸಿಕೊಂಡಿದ್ದರು:

ಆ ಎಸೆತಕ್ಕೆ ಸ್ವಲ್ಪ ಮೊದಲು, ಯುವರಾಜ್ ಸಿಂಗ್ ಅವರು ಬ್ರಾವೊ ಅವರ ಎಸೆತಗಳಿಗೆ ಸತತ ಎರಡು ಬೌಂಡರಿಗಳನ್ನು ಹೊಡೆದಿದ್ದರು ಮತ್ತು ಕೊನೆಯ ಮೂರು ಎಸೆತಗಳಲ್ಲಿ ಕೇವಲ ಎರಡು ರನ್‌ಗಳ ಅಗತ್ಯವಿತ್ತು. ಆದರೂ, ಆ ಓವರ್‌ನ ನಾಲ್ಕನೇ ಎಸೆತದಲ್ಲಿ ಭಾರತೀಯ ಆಲ್‌ರೌಂಡರ್ ಕೆರಿಬಿಯನ್ ವೇಗದ ಬೌಲರ್‌ನ ವಿಭಿನ್ನವಾದ ಚೆಂಡನ್ನು ಸರಿಯಾಗಿ ತಿಳಿದುಕೊಳ್ಳದೆ ಹೋದಾಗ, ಚೆಂಡು ಲೆಗ್ ಸ್ಟಂಪ್‌ಗೆ ಬಡಿಯಿತು. ಇದರೊಂದಿಗೆ ಭಾರತ ತಂಡವು ಆ ಪಂದ್ಯದಲ್ಲಿ ಕೇವಲ ಒಂದು ರನ್‌ನಿಂದ ಪರಭಾವಗೊಂಡಿತ್ತು.

ಯುವರಾಜ್‌ಗೆ ಹಾಕಿದ ಆ ಚೆಂಡು ನನ್ನ ಜೀವನವನ್ನು ಬದಲಾಯಿಸಿತು:

ಆ ಎಸೆತಕ್ಕೆ ಸ್ವಲ್ಪ ಮೊದಲು ಆಗಿನ ನಾಯಕ ಬ್ರಿಯಾನ್ ಲಾರಾ ಅವರು ಫೀಲ್ಡ್ ಸೆಟಪ್ ಬಗ್ಗೆ ತಮ್ಮೊಂದಿಗೆ ಮಾತನಾಡಿದರು ಎಂದು ಬ್ರಾವೊ ಅವರು ನೆನಪಿಸಿಕೊಂಡರು. ಆದರೆ ಅವರು ತಮ್ಮ ರನ್-ಅಪ್ ಮುಗಿಸುವವರೆಗೂ ಅವರಿಗೆ ಯಾವ ರೀತಿಯ ಚೆಂಡನ್ನು ಬೌಲ್ ಮಾಡಬೇಕು ಎಂದು ತಿಳಿದಿರಲಿಲ್ಲವಂತೆ ಎಂದು ಹೇಳಿದರು.

ಇದನ್ನೂ ಓದಿ: IPL 2022 Record: ಟಿ20 ಅಲ್ಲಿ ಹೊಸ ದಾಖಲೆ ಬರೆದ ಧೋನಿ, ಬ್ರಾವೋ ಈಗ ನಂಬರ್ ಒನ್ ಬೌಲರ್

ಯಾವ ಚೆಂಡನ್ನು ಬೌಲ್ ಮಾಡಬೇಕು ಎಂದು ನಾನು ಇನ್ನೂ ನಿಜವಾಗಿಯೂ ಯೋಚಿಸಿರಲಿಲ್ಲ. ನಾನು ನನ್ನ ರನ್-ಅಪ್ ಮುಗಿಸಿ ಅಂಪೈರ್ ಬಳಿಗೆ ಹೋಗುವ ಮೊದಲು, ನಾನು ಆ ಡಿಪ್ಪರ್ ಅನ್ನು ಬೌಲ್ ಮಾಡಿದೆ. ಒಂದು ಚೆಂಡನ್ನು ಫೇವರಿಟ್ ಆಗಿ ಆಯ್ಕೆ ಮಾಡಲು ಸಾಧ್ಯವಿಲ್ಲ, ಯುವರಾಜ್‌ಗೆ ಹಾಕಿದ ಆ ಚೆಂಡು ನನ್ನ ಜೀವನವನ್ನು ಬದಲಾಯಿಸಿತು ಎಂದು ಬ್ರಾವೊ ತಮ್ಮ ನೆಚ್ಚಿನ ಎಸೆತದ ಬಗ್ಗೆ ಕೇಳಿದಾಗ ಮುಕ್ತವಾಗಿ ಹೇಳಿದರು.
Published by:shrikrishna bhat
First published: