ಚೆನ್ನೈ ಸೂಪರ್ ಕಿಂಗ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ನ (IPL) ಮುಂದಿನ ಋತುವಿನಲ್ಲಿ ಡ್ವೇನ್ ಬ್ರಾವೋ (Dwayne Bravo) ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿದೆ. ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಸಿಎಸ್ಕೆ ಅವರನ್ನು ಐಪಿಎಲ್ 2023ರ ಮೊದಲು ನಡೆಯಲಿರುವ ಮಿನಿ ಹರಾಜಿಗೂ ಮೊದಲು ಬಿಡುಗಡೆ ಮಾಡಿದೆ. ಇದಾದ ನಂತರ ಬ್ರಾವೋ ಹರಾಜಿಗೆ ತಮ್ಮ ಹೆಸರನ್ನು ನೀಡಿರಲಿಲ್ಲ. ಇದೀಗ ಅವರು ಐಪಿಎಲ್ನಿಂದ ನಿವೃತ್ತಿಯಾಗಿದ್ದು, ಮುಂದಿನ ಸೀಸನ್ನಿಂದ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ, ಕೀರನ್ ಪೊಲಾರ್ಡ್ (Kieron Pollard) ಕೂಡ ನಿವೃತ್ತಿ ಹೊಂದಿದ್ದರು ಮತ್ತು ಮುಂದಿನ ಋತುವಿನಲ್ಲಿ ತಂಡದೊಂದಿಗೆ ಬ್ಯಾಟಿಂಗ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬೌಲಿಂಗ್ ಕೋಚ್ ಆದ ಬ್ರಾವೋ:
ಬ್ರಾವೋ ಮೊದಲು ಲಕ್ಷ್ಮೀಪತಿ ಬಾಲಾಜಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದ ಒಂದು ವರ್ಷ ವಿರಾಮ ತೆಗೆದುಕೊಂಡಿದ್ದಾರೆ. ಆದಾಗ್ಯೂ, ಅವರು ಅಕಾಡೆಮಿ ಆಫ್ ಸೂಪರ್ ಕಿಂಗ್ಸ್ಗೆ ಲಭ್ಯವಿರುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಹೇಳಿಕೆಯಲ್ಲಿ ಡ್ವೇನ್ ಬ್ರಾವೋ, 'ನಾನು ಈ ಹೊಸ ಪ್ರಯಾಣಕ್ಕಾಗಿ ಎದುರು ನೋಡುತ್ತಿದ್ದೇನೆ. ಏಕೆಂದರೆ ಇದು ನನ್ನ ಕ್ರಿಕೆಟ್ ವೃತ್ತಿಜೀವನ ಮುಗಿದ ನಂತರದ ಹೊಸ ಜವಬ್ದಾರಿಯಾಗಿದೆ.
Official Statement 🔗🔽 @DJBravo47
— Chennai Super Kings (@ChennaiIPL) December 2, 2022
ಇದನ್ನೂ ಓದಿ: IND vs BAN 2022: ಶ್ರೀಲಂಕಾ ಸರಣಿಯಿಂದ ಟೀಂ ಇಂಡಿಯಾ ತ್ರಿಮೂರ್ತಿಗಳು ಔಟ್? ಹಿಟ್ಮ್ಯಾನ್ ಕೈ ತಪ್ಪುತ್ತಾ ಕ್ಯಾಪ್ಟನ್ಸಿ?
ಬ್ರಾವೋ ಐಪಿಎಲ್ ವೃತ್ತಿ ಜೀವನ:
ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಅವರು 161 ಪಂದ್ಯಗಳಲ್ಲಿ 183 ವಿಕೆಟ್ಗಳನ್ನು ಪಡೆದಿದ್ದಾರೆ. ಈ ಆಲ್ರೌಂಡರ್ ಕೂಡ 130 ಸ್ಟ್ರೈಕ್ ರೇಟ್ನಲ್ಲಿ 1560 ರನ್ ಗಳಿಸಿದ್ದಾರೆ ಮತ್ತು ಚೆನ್ನೈ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗುವಲ್ಲಿ ಈ ಆಟಗಾರ ಪ್ರಮುಖ ಪಾತ್ರ ವಹಿಸಿದ್ದಾರೆ. ಬ್ರಾವೋ 2011 ರಿಂದ ಚೆನ್ನೈ ಸೂಪರ್ ಕಿಂಗ್ಸ್ನ ಪ್ರಮುಖ ಭಾಗವಾಗಿದ್ದಾರೆ. ಅವರು 2011, 2018 ಮತ್ತು 2021 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಈ ಫ್ರಾಂಚೈಸಿಯೊಂದಿಗೆ ಅವರು 2014 ರಲ್ಲಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದಿದ್ದಕ್ಕಾಗಿ ಎರಡು ಬಾರಿ (2013, 2015) ಪರ್ಪಲ್ ಕ್ಯಾಪ್ ಕೂಡ ಗೆದ್ದರು. ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ ಪರ 1556 ರನ್ ಗಳಿಸಿ ಒಟ್ಟು 144 ಪಂದ್ಯಗಳಲ್ಲಿ 168 ವಿಕೆಟ್ ಕಬಳಿಸಿದ್ದಾರೆ.
ಐಪಿಎಲ್ 2023ರಲ್ಲಿ ಹೊಸ ನಿಯಮ:
ಇನ್ನು, ಮುಂಬರುವ ಐಪಿಎಲ್ 2023ರಲ್ಲಿ ಬಿಸಿಸಿಐ ಹೊಸ ನಿಯಮ ಜಾರಿಗೆ ತರಲು ಸಿದ್ಧವಾಗಿದೆ. ಈ ಹೊಸ ನಿಯಮಕ್ಕೆ ಈಗಾಗಲೇ ಎಲ್ಲಾ ಪ್ರಾಂಚೈಸಿಗಳೂ ಸಹ ಒಪ್ಪಿಗೆ ನೀಡಿದೆ ಎಂದು ಬಿಸಿಸಿಐ ತಿಳಿಸಿದೆ. ಇದರಿಂದಾಗಿ ಮುಂದಿನ ಸೀಸನ್ ಇನ್ನಷ್ಟು ಮಜ ನೀಡುವಲ್ಲಿ ಅನುಮಾನವಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹರಾಜಿನ ನಂತರ ಯಾವೆಲ್ಲಾ ಆಟಗಾರರು ಯಾವ ತಂಡ ಸೇರಲಿದ್ದಾರೆ ಎನ್ನುವುದನ್ನು ಕಾದು ನೊಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ