ಭಾರತದ ನಂಬರ್ ಒನ್ ಸ್ಪ್ರಿಂಟರ್ (ಓಟಗಾರ್ತಿ) ದ್ಯುತಿ ಚಂದ್ ಅವರನ್ನು ತಾತ್ಕಾಲಿಕ ನಿಷೇಧಕ್ಕೆ ಒಳಪಡಿಸಲಾಗಿದೆ. ದ್ಯುತಿ ಚಂದ್ (Dutee Chand) ಅವರು ನಿಷೇಧಿತ ಅನಾಬೋಲಿಕ್ ಸ್ಟೆರಾಯ್ಡ್ ಬಳಸಿದ ತಪ್ಪಿತಸ್ಥರೆಂದು ಪರೀಕ್ಷೆಯ ಮೂಲಕ ಸಾಬೀತಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. 2018ರ ಏಷ್ಯನ್ ಗೇಮ್ಸ್ನಲ್ಲಿ (Asian Games) 100 ಮತ್ತು 200 ಮೀಟರ್ಗಳಲ್ಲಿ ಎರಡನೇ ಸ್ಥಾನ ಪಡೆದಿದ್ದ ದ್ಯುತಿ ಪ್ರಸ್ತುತ 100 ಮೀಟರ್ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಆದರೆ ಅವರು ನಿಷೇಧಿತ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆ ತಾತ್ಕಾಲಿಕವಾಗಿ ಕ್ರೀಡಾ ಲೋಕದಿಂದ ದೂರವಿರಲಿದ್ದಾರೆ.
ದ್ಯುತಿಗೆ ತಾತ್ಕಾಲಿಕ ಅಮಾನತು:
ಇನ್ನು, ನ್ಯಾಷನಲ್ ಆ್ಯಂಟಿ ಡೋಪಿಂಗ್ ಏಜೆನ್ಸಿ (ನಾಡಾ) ಹೊರಡಿಸಿದ ಅಧಿಸೂಚನೆಯಲ್ಲಿ, "ಅಂಡರಿನ್, ಒಸ್ಟರಿನ್ ಮತ್ತು ಲಿಗಾಂಡ್ರೋಲ್ ಸೇವಿಸಿದ ದ್ಯುತಿ ಚಂದ್ ತಪ್ಪಿತಸ್ಥರೆಂದು ಕಂಡುಬಂದಿದೆ" ಎಂದು ಹೇಳಿದೆ. ದ್ಯುತಿಗೆ ಬರೆದ ಪತ್ರದಲ್ಲಿ, ಎಎಎಫ್ ಅಧಿಸೂಚನೆಯು, ವಾಡಾ (ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿ) ಕಾರ್ಯವಿಧಾನದ ಪ್ರಕಾರ ನಿಮ್ಮ ಮಾದರಿಯನ್ನು ಎನ್ಡಿಟಿಎಲ್ (ನ್ಯಾಷನಲ್ ಡೋಪ್ ಟೆಸ್ಟ್ ಲ್ಯಾಬೊರೇಟರಿ) ನಲ್ಲಿ ಪರೀಕ್ಷಿಸಲಾಗಿದೆ ಮತ್ತು ಫಲಿತಾಂಶವು ಸಕಾರಾತ್ಮಕವಾಗಿದೆ ಎಂದು ವರದಿಯ ಮೂಲಕ ತಿಳಿಸಿದ್ದಾರೆ.
Dutee Chand has been temporarily suspended following a positive analytical finding by WADA. The sample B test and hearing have not yet been released. pic.twitter.com/de0Blbsdnm
— Doordarshan Sports (@ddsportschannel) January 18, 2023
ಏನಿದು ನಿಷೇಧಿತ ಡ್ರಗ್ಸ್?:
ಇನ್ನು, ಅನೇಕರಿಗೆ ಈ ನಿಷೇಧಿತ ಡ್ರಗ್ಸ್ ಬಗ್ಗೆ ತಿಳಿದಿರುವುದಿಲ್ಲ. ಅನಾಬೋಲಿಕ್ ಸ್ಟೀರಾಯ್ಡ್ಗಳು ಮತ್ತು SARMS ನಡುವೆ ಅನೇಕ ವ್ಯತ್ಯಾಸಗಳಿವೆ. SARMS ನಿರ್ದಿಷ್ಟ ಅಂಗಾಂಶಗಳಿಗೆ ಮಾತ್ರ ಅಂಟಿಕೊಳ್ಳುತ್ತದೆ ಆದರೆ ಅನಾಬೋಲಿಕ್ ಸ್ಟೀರಾಯ್ಡ್ಗಳು ದೇಹದ ಅನೇಕ ಭಾಗಗಳಲ್ಲಿ ಆಂಡ್ರೊಜೆನ್ ಗ್ರಾಹಕಗಳಿಗೆ ನೇರವಾಗಿ ಸೇರುತ್ತದೆ. ವೈದ್ಯಕೀಯ ಸೆಟ್ಟಿಂಗ್ಗಳಲ್ಲಿ, ಸ್ನಾಯು ಮತ್ತು ಮೂಳೆಯಂತಹ ನಿರ್ದಿಷ್ಟ ಅಂಗಾಂಶಗಳ ಬೆಳವಣಿಗೆಯನ್ನು ಉತ್ತೇಜಿಸಲು ಇದು ತುಂಬಾ ಉಪಯುಕ್ತವಾಗಿದೆ. ಯಕೃತ್ತು ಅಥವಾ ಚರ್ಮದಂತಹ ಇತರ ಅಂಗಾಂಶಗಳಲ್ಲಿ ಅನಗತ್ಯ ಅಡ್ಡ ಪರಿಣಾಮಗಳನ್ನು ತಪ್ಪಿಸುತ್ತದೆ ಎಂದು USADA ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ಗೆಳತಿಯನ್ನೇ ಮದುವೆಯಾದ ದ್ಯುತಿ:
ಭಾರತದ ಅಥ್ಲೀಟ್ ದ್ಯುತಿ ಚಂದ್ ತನ್ನ ಮಹಿಳಾ ಸ್ನೇಹಿತ ಮೊನಾಲಿಸಾ ಅವರೊಂದಿಗೆ ಮದುವೆಯಾಗಿದ್ದಾರೆ. ದ್ಯುತಿ ಮತ್ತು ಮೋನಾ ಜೊತೆಗಿನ ಮದುವೆಯ ಫೋಟೋಗಳ ಕಳೆದ ಕೆಲ ದಿನಗಳ ಹಿಂದೆ ಸಖತ್ ವೈರಲ್ ಆಗಿತ್ತು. ದ್ಯುತಿ ಚಂದ್ ಅವರು ತಮ್ಮ ಲೆಸ್ಬಿಯನ್ ಜೊತೆಗಾರ್ತಿ ಮೊನಾಲಿಸಾ ಅವರನ್ನು ವಿವಾಹವಾಗಿದ್ದಾರೆ. ಆದರೆ ಈ ವಿಚಾರವನ್ನು ಬಹಳ ಹಿಂದೆಯೇ ಬಹಿರಂಗಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ