ಚುನಾವಣಾ ಆಯೋಗದ ರಾಯಭಾರಿಯಾದರೂ ಮತದಾನದಿಂದ ವಂಚಿತರಾಗಿದ್ದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್​ಗೆ ಮತ್ತೆ ಸಿಕ್ಕಿದೆ ಮತದಾನದ ಹಕ್ಕು

ರಾಹುಲ್​ ದ್ರಾವಿಡ್​ ಬೆಂಗಳೂರಿನ ಇಂದಿರಾನಗರದಿಂದ ಅಶ್ವತ್ಥನಗರಕ್ಕೆ ಮನೆ ಸ್ಥಳಾಂತರ ಮಾಡಿದ್ದರು. ಈ ವೇಳೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ರಾಹುಲ್​ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿರಲಿಲ್ಲ. 

Latha CG | news18-kannada
Updated:September 20, 2019, 12:24 PM IST
ಚುನಾವಣಾ ಆಯೋಗದ ರಾಯಭಾರಿಯಾದರೂ ಮತದಾನದಿಂದ ವಂಚಿತರಾಗಿದ್ದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್​ಗೆ ಮತ್ತೆ ಸಿಕ್ಕಿದೆ ಮತದಾನದ ಹಕ್ಕು
ರಾಹುಲ್​ ದ್ರಾವಿಡ್​
  • Share this:
ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಚುನಾವಣಾ ಆಯೋಗದ ರಾಯಭಾರಿ ಆಗಿರುವ ರಾಹುಲ್​ ದ್ರಾವಿಡ್​ ಮುಂದಿನ ಚುನಾವಣೆಗಳಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ ರಾಹುಲ್​ ದ್ರಾವಿಡ್​ ಹೆಸರು ಬಿಟ್ಟು ಹೋಗಿದ್ದ ಕಾರಣದಿಂದಾಗಿ ದ್ರಾವಿಡ್​ ಮತ ಚಲಾಯಿಸಿರಲಿಲ್ಲ. ಈಗ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗಿದ್ದು, ಮುಂದಿನ ಚುನಾವಣೆಗಳಲ್ಲಿ ವೋಟ್​ ಹಾಕಬಹುದಾಗಿದೆ.

ರಾಹುಲ್​ ದ್ರಾವಿಡ್​ ಬೆಂಗಳೂರಿನ ಇಂದಿರಾನಗರದಿಂದ ಅಶ್ವತ್ಥನಗರಕ್ಕೆ ಮನೆ ಸ್ಥಳಾಂತರ ಮಾಡಿದ್ದರು. ಈ ವೇಳೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ರಾಹುಲ್​ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿರಲಿಲ್ಲ. ಅಶ್ವತ್ಥನಗರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ.

ನಾಲ್ಕು ಮದುವೆಯಾಗಿ ವಂಚಿಸಿ, ಮತ್ತೊಂದರ ಸಿದ್ದತೆಯಲ್ಲಿದ್ದ ಆರೋಪಿಯ ಬಂಧನ

ಹೀಗಾಗಿ, ಚುನಾವಣಾ ಆಯೋಗದ ರಾಯಭಾರಿಯಾಗಿರುವ ರಾಹುಲ್​ ದ್ರಾವಿಡ್​​ಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ ಹಾಕುವ ಅವಕಾಶ ಸಿಕ್ಕಿರಲಿಲ್ಲ. ಈಗ ಮತದಾರರ ಪಟ್ಟಿಗೆ ದ್ರಾವಿಡ್​ ಹೆಸರು ಸೇರ್ಪಡೆಯಾಗಿದೆ.

ಮುಖ್ಯ ಚುನಾವಣಾಧಿಕಾರಿಗಳ ಆದೇಶದ ಮೇರೆಗೆ ಜುಲೈ ತಿಂಗಳಲ್ಲಿ ಅಧಿಕಾರಿಗಳು ರಾಹುಲ್​ ದ್ರಾವಿಡ್​ ಹೆಸರನ್ನು ವಿಶೇಷ ಪ್ರಕರಣವಾಗಿ ಸೇರ್ಪಡೆ ಮಾಡಿದ್ದಾರೆ. ಟೈಮ್ಸ್​ ಆಫ್​ ಇಂಡಿಯಾ ವರದಿ ಪ್ರಕಾರ, ನವೀಕರಿಸಿದ ಮತದಾರರ ಪಟ್ಟಿಯಲ್ಲಿ ರಾಹುಲ್​ ದ್ರಾವಿಡ್​ ಹಾಗೂ  ಅವರ ಪತ್ನಿ ಹೆಸರು ಇದೆ ಎನ್ನಲಾಗಿದೆ.

First published:September 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading