'ಅಂತಹ ಮೇರು ಪ್ರತಿಭೆಯನ್ನು ಹಾರ್ದಿಕ್ ಪಾಂಡ್ಯಾ ಜತೆ ಹೋಲಿಸಬೇಡಿ'; ಸುನಿಲ್ ಗವಾಸ್ಕರ್

news18
Updated:August 7, 2018, 10:29 PM IST
'ಅಂತಹ ಮೇರು ಪ್ರತಿಭೆಯನ್ನು ಹಾರ್ದಿಕ್ ಪಾಂಡ್ಯಾ ಜತೆ ಹೋಲಿಸಬೇಡಿ'; ಸುನಿಲ್ ಗವಾಸ್ಕರ್
news18
Updated: August 7, 2018, 10:29 PM IST
ನ್ಯೂಸ್ 18 ಕನ್ನಡ

ಟೀಂ ಇಂಡಿಯಾದ ಆಲ್​ರೌಂಡರ್​ ಆಟಗಾರ ಹಾರ್ದಿಕ್​ ಪಾಂಡ್ಯ ಅವರನ್ನು ಮಾಜಿ ಕ್ರಿಕೆಟಿಗ ವಿಶ್ವಕಪ್ ವಿಜೇತ ಕಪಿಲ್​ ದೇವ್​ ಅವರಿಗೆ ಹೋಲಿಸುವುದರ ಕುರಿತು ಲಿಟ್ಲ್ ಮಾಸ್ಟರ್​​ ಸುನಿಲ್ ಗವಾಸ್ಕರ್ ಕಿಡಿ ಕಾರಿದ್ದಾರೆ.

ಇತ್ತೀಚೆಗೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರೊಂದಿಗೆ ಹೋಲಿಸಲಾಗುತ್ತಿತ್ತು. ಇದು ಸುನಿಲ್ ಗವಾಸ್ಕರ್ ಅವರನ್ನು ಕೆರಳಿಸಿದ್ದು, ಕಪಿಲ್ ದೇವ್ ಶತಮಾನದ ಆಟಗಾರ, ಅಂತಹ ಮೇರು ಪ್ರತಿಭೆಯನ್ನು ಹಾರ್ದಿಕ್ ಪಾಂಡ್ಯಾ ಜತೆ ಹೋಲಿಸಬೇಡಿ ಎಂದು ಗವಾಸ್ಕರ್ ಹೇಳಿದ್ದಾರೆ. ಈ ರೀತಿಯ ಹೇಳಿಕೆ ಮೂರ್ಖತನದ್ದು, ಅವರು ಅಪರೂಪದ ವ್ಯಕ್ತಿ. ಸಚಿನ್ ತೆಂಡೂಲ್ಕರ್, ಡ್ರಾನ್ ಬ್ರಾಡ್ಮನ್ ಅವರನ್ನು ಹೇಗೆ ಬೇರೆಯವರೊಂದಿಗೆ ಹೋಲಿಸಲು ಸಾಧ್ಯವಿಲ್ಲವೋ ಅದೇರೀತಿ ಕಪಿಲ್ ಅವರನ್ನು ಯಾರೊಂದಿಗೂ ಕೂಡ ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...