ಆಸ್ಟ್ರೇಲಿಯಾ ಓಪನ್: ನಡಾಲ್​ಗೆ ಸೋಲುಣಿಸಿ 7ನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಜೊಕೊವಿಕ್

ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದ ಜೊಕೊವಿಕ್​​​ ನಡಾಲ್​​ಗೆ ಅವಕಾಶ ನೀಡಲೇಯಿಲ್ಲ.

Vinay Bhat | news18
Updated:January 27, 2019, 5:12 PM IST
ಆಸ್ಟ್ರೇಲಿಯಾ ಓಪನ್: ನಡಾಲ್​ಗೆ ಸೋಲುಣಿಸಿ 7ನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಜೊಕೊವಿಕ್
ನೊವಾಕ್ ಜೊಕೊವಿಕ್
  • News18
  • Last Updated: January 27, 2019, 5:12 PM IST
  • Share this:
ಸಿಡ್ನಿ: 2019ರ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್​​​ಸ್ಲಾಮ್​​ ಟೆನಿಸ್ ಟೂರ್ನಮೆಂಟ್​ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರು ಪ್ರಶಸ್ರಿಗೆ ಮುತ್ತಿಕ್ಕಿದ್ದಾರೆ.

ಇಂದು ನಡೆದ ಪುರುಷರ ಸಿಂಗಲ್ಸ್​​ ವಿಭಾಗದ ಫೈನಲ್ ಕಾದಾಟದಲ್ಲಿ ಸ್ಪೇನ್​​ನ ರಾಫೆಲ್ ನಡಲ್​​​ರನ್ನು 6-3, 6-2, 6-3 ಸೆಟ್​​ಗಳ ಅಂತರದಿಂದ ಜೊಕೊವಿಕ್ ಗೆದ್ದು ಬೀಗಿದ್ದು, 15ನೇ ಬಾರಿ ಗ್ರ್ಯಾನ್​​​ಸ್ಲಾಮ್​​​​​ ಪ್ರಶಸ್ತಿಯನ್ನು ತನ್ನ ಖಾತೆಗೆ ಸೇರಿಕೊಂಡ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ದಾಖಲೆ ಎಂಬಂತೆ ಒಟ್ಟು ಏಳು ಬಾರಿ ಆಸ್ಟ್ರೇಲಿಯಾನ್ ಓಪನ್ ಪ್ರಶಸ್ತಿ ತಮ್ಮದಾಗಿಸಿದ್ದಾರೆ.

ಮತ್ತೊಬ್ಬ ಶ್ರೇಷ್ಠ ಆಟಗಾರ ನಡಾಲ್ ಬೇಸರದಿಂದ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟರು. ಇಬ್ಬರು ಸ್ಟಾರ್ ಆಟಗಾರರ ನಡುವಣ ಹೋರಾಟ ಸಾಕಷ್ಟು ಕುತೂಹಲ ಮೂಡಿಸಿತ್ತು.

 


ಇದನ್ನೂ ಓದಿ: Indonesia Masters Final: ಪ್ರಶಸ್ತಿ ಮುಡಿಗೇರಿಸಿಕೊಂಡ ಸೈನಾ ನೆಹ್ವಾಲ್: ಕಣ್ಣೀರಿಟ್ಟ ಮರಿನ್

ಆದರೆ, ಇಲ್ಲಿ ಆಗಿದ್ದೆಬೇರೆ. ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದ ಜೊಕೊವಿಕ್​​​ ನಡಾಲ್​​ಗೆ ಅವಕಾಶ ನೀಡಲೇಯಿಲ್ಲ. ಪರಿಣಾಮ ಸರ್ಬಿಯಾದ ನಂಬರ್ 1 ಆಟಗಾರ ತನ್ನ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದ್ದಾರೆ.

First published:January 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ