• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಮೈದಾನಕ್ಕೆ ನುಗ್ಗಿ ಪಂದ್ಯ ನಿಲ್ಲಿಸಿದ ಮುದ್ದಾದ ಶ್ವಾನವನ್ನು ದತ್ತು ತೆಗೆದುಕೊಂಡ ಫುಟ್​​ಬಾಲ್​ ಆಟಗಾರ! ವಿಡಿಯೋ ವೈರಲ್​

ಮೈದಾನಕ್ಕೆ ನುಗ್ಗಿ ಪಂದ್ಯ ನಿಲ್ಲಿಸಿದ ಮುದ್ದಾದ ಶ್ವಾನವನ್ನು ದತ್ತು ತೆಗೆದುಕೊಂಡ ಫುಟ್​​ಬಾಲ್​ ಆಟಗಾರ! ವಿಡಿಯೋ ವೈರಲ್​

Photo: Twitter

Photo: Twitter

Trending Video: ಮೈದಾನಲ್ಲಿ ಕಾಣಿಸಿಕೊಂಡ ಶ್ವಾನ ಫುಟ್​ಬಾಲ್​ ಶೂವೊಂದನ್ನು ಕಚ್ಚಿಕೊಂಡು ಎಲ್ಲೆಂದರಲ್ಲಿ ಓಡಾಡಿದೆ. ಏನೆ ಮಾಡಿದರು ನಾಯಿ ಮೈದಾನ ಬಿಟ್ಟು ತೆರಳಲಿಲ್ಲ. ಇದರಿಂದಾಗಿ ಆಟವನ್ನು ನಿಲ್ಲಿಸಬೇಕಾಗಿದೆ.

  • Share this:

    ರೋಚಕ ಫುಟ್​ಬಾಲ್​ ಪಂದ್ಯದ ವೇಳೆ ಮುದ್ದಾದ ಶ್ವಾನವೊಂದು ಮೈದಾನದೊಳಕ್ಕೆ ಪ್ರವೇಶಿಸಿ ಆಟ ನಿಲ್ಲಿಸಿದೆ. ಈ ಶ್ವಾನವನ್ನು ಕಂಡು ಫುಟ್​​ಬಾಲ್​ ಆಟಗಾರರೊಬ್ಬರು ದತ್ತು ಪಡೆದುಕೊಂಡಿದ್ದಾರೆ. ಸದ್ಯ ನಾಯಿ ಮೈದಾನದೊಳಕ್ಕೆ ನುಗ್ಗಿ ತುಂಟಾಟ ಆಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.


    ದಕ್ಷಿಣ ಆಮೆರಿಕದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಬೊಲಿವಿಯಾದಲ್ಲಿ ಫುಟ್​ಬಾಲ್​ ಪಂದ್ಯ ನಡೆಯುತ್ತಿದೆ. ಡಿಸೆಂಬರ್​ 29 ರಂದು ‘ದಿ ಸ್ಟ್ರಾಂಗೆಸ್ಟ್’ ಹಾಗೂ ‘ ನ್ಯಾಷನಲ್​ ಪೊಟೋಸಿ‘ ತಂಡಗಳ ನಡುವೆ ಪಂದ್ಯ ಏರ್ಪಟ್ಟಿತ್ತು. ಬಹಳ ಕುತೂಹಲಕಾರಿಯಾಗಿದ್ದ ಈ ಪಂದ್ಯದ ನಡುವಲ್ಲಿ ಮುದ್ದಾದ ಶ್ವಾನವೊಂದು ಮೈದಾನದೊಳಕ್ಕೆ ಎಂಟ್ರಿ ನೀಡಿದೆ.


    ಮೈದಾನಲ್ಲಿ ಕಾಣಿಸಿಕೊಂಡ ಶ್ವಾನ ಫುಟ್​ಬಾಲ್​ ಶೂವೊಂದನ್ನು ಕಚ್ಚಿಕೊಂಡು ಎಲ್ಲೆಂದರಲ್ಲಿ ಓಡಾಡಿದೆ. ಏನೆ ಮಾಡಿದರು ನಾಯಿ ಮೈದಾನ ಬಿಟ್ಟು ತೆರಳಲಿಲ್ಲ. ಇದರಿಂದಾಗಿ ಆಟವನ್ನು ನಿಲ್ಲಿಸಬೇಕಾಗಿದೆ. ನಂತರ ಆಟಗಾರರೊಬ್ಬರು ನಾಯಿಯನ್ನು ಎತ್ತಿಕೊಂಡು ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋದರು. ಅಲ್ಲಿದ್ದ ಕ್ಯಾಮೆರಾ ಮ್ಯಾನ್​ಗಳು ನಾಯಿಯ ತುಂಟಾವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.







    ದಿ ಸ್ಟ್ರಾಂಗರ್​ ತಂಡದ ಆಟಗಾರರಾದ ರೌಲ್​​ ಕ್ಯಾಸ್ಟ್ರೋ ಅವರಿಗೆ ಶ್ವಾನದ ತುಂಟಾಟ ಇಷ್ಟವಾಗಿದ್ದು, ಮೈದಾನದಲ್ಲಿ ಶೂ ಕಚ್ಚಿಕೊಂಡು ಆಟ ನಿಲ್ಲಿಸಿದ ನಾಯಿಯನ್ನು ದತ್ತು ಪಡೆದುಕೊಂಡಿದ್ದಾರೆ. ಆಟದ ಸಮಯದಲ್ಲಿ ಮೈದಾನಕ್ಕೆ ಬಂದ ಈ ಶ್ವಾನವನ್ನು ಫುಟ್​​ಬಾಲ್​ ಪ್ರಿಯನೇ ಇರಬೇಕು ಎಂದು ತಮಾಷೆ ಮಾಡಿದ್ದಾರೆ.


    ಗಾರ್ಡಿಯನ್​ ಸ್ಪೋರ್ಟಸ್​ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಶ್ವಾನ ತುಂಟಾಟ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

    First published: