ನಾಯಿ (Dog) ಎಂದರೆ ಒಂದು ಮುದ್ದು ಪ್ರಾಣಿ (Animal) ಎಂಬ ಕಲ್ಪನೆ ಎಲ್ಲರ ಮನದಲ್ಲೂ ಮೂಡುತ್ತದೆ. ನಾಯಿಗಳೆಂದರೆ ಪ್ರಾಮಾಣಿಕತೆಗೆ (Honest), ಪ್ರೀತಿ(Love)ಗೆ ಮತ್ತು ಶಿಸ್ತಿಗೆ (Discipline)ಹೆಸರಾಗಿವೆ. ಸಾಕುಪ್ರಾಣಿಯಾಗಿ ನಾಯಿ(Pet Dog)ಯನ್ನು ಮನೆಯಲ್ಲಿ ಹೊಂದಿರುವುದು ನಿಜವಾಗಿಯೂ ಅದ್ಭುತ ಅನುಭವ ನೀಡುತ್ತದೆ. ಸಾಕು ನಾಯಿಗಳು ನಿಮ್ಮ ಸಂತೋಷ ಮತ್ತು ದುಃಖಗಳನ್ನು ಸಹ ಹಂಚಿಕೊಳ್ಳುತ್ತವೆ. ಮನುಷ್ಯರಂತೆ ನಾಯಿಗಳು ಸಹ ನಮ್ಮ ಭಾವನೆ(Feelings)ಯನ್ನು ಅರ್ಥೈಸಿಕೊಳ್ಳುತ್ತವೆ. ನಿಮ್ಮ ಬಳಿ ಒಂದು ನಾಯಿ ಇದ್ದರೆ ನಿಮಗೆ ಒಂಟಿ ಭಾವನೆಯೇ (Alone Feel) ಬರುವುದಿಲ್ಲ. ಏಕೆಂದರೆ ಅದು ನಿಮ್ಮನ್ನು ಅದರ ಮುದ್ದಾದ ಅಭಿವ್ಯಕ್ತಿಗಳಿಂದ ಖುಷಿ ಪಡಿಸುತ್ತದೆ ಮತ್ತು ಪ್ರೀತಿ ತೋರುತ್ತದೆ.
ನೀವು ಈಗಾಗಲೇ ಶ್ವಾನಗಳ ಅನೇಕ ಮುದ್ದಾದ ವಿಡಿಯೋಗಳನ್ನು ನೋಡಿರಬಹುದು. ನಾಯಿಗಳ ಮೋಜಿನ ವಿಡಿಯೋಗಳು ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅವುಗಳ ತುಂಟಾಟ, ತರಲೆ, ಅತ್ತಿಂದಿತ್ತ ಓಡಾಟ - ಹೀಗೆ ಅವುಗಳ ವಿಡಿಯೋ ನೋಡುವುದು ಸಹ ಒಂದು ರೀತಿಯ ಹಬ್ಬವೇ ಸರಿ, ಅಷ್ಟು ಮುದ್ದಾಗಿರುತ್ತವೆ ನಾಯಿಗಳು.
ನಾಯಿಯ ಡ್ಯಾನ್ಸ್ ವಿಡಿಯೋ ವೈರಲ್
ಕೆಲವೊಮ್ಮೆ ನಾಯಿಗಳು ನಿಜವಾಗಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತವೆ, ಮತ್ತು ಅದು ಮನುಷ್ಯರನ್ನು ಬೆರಗುಗೊಳಿಸುತ್ತದೆ. ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಿದ ನಾಯಿಯ ಡ್ಯಾನ್ಸ್ ಒಂದು ಸದ್ಯ ಸಖತ್ ವೈರಲ್ ಆಗ್ತಿದೆ.
ಇದನ್ನೂ ಓದಿ: Viral Dance: ಬಾದ್ ಶಾ ಜಗ್ನು ಬೀಟ್ಗೆ ಪುಟ್ಟ ಪೋರಿಯ ಸಖತ್ ಡ್ಯಾನ್ಸ್
ಮ್ಯೂಸಿಕ್ ಬೀಟ್ಸ್ ಕೇಳಿದರೆ ಯಾರಿಗಾದರೂ ಸಹ ನಿಂತಲ್ಲೇ ಡಾನ್ಸ್ ಮಾಡಬೇಕು ಅನಿಸುತ್ತಲ್ಲವೇ..? ಹಾಗೆ ಇಲ್ಲೊಂದು ಮುದ್ದು ನಾಯಿ ಸಹ ಮಾಲೀಕ ನುಡಿಸಿದ ಬೀಟ್ಸ್ಗೆ ಮಸ್ತ್ ಸ್ಟೆಪ್ ಹಾಕಿದೆ.
ನಾಯಿಯು ತಾಳಕ್ಕೆ ತಕ್ಕ ಹಾಗೆ ತನ್ನ ದೇಹವನ್ನು ಎಷ್ಟು ಅದ್ಭುತವಾಗಿ ಚಲಿಸುವಂತೆ ಮಾಡುತ್ತದೆ ಎಂದರೆ ಈ ವಿಡಿಯೋ ನೋಡಿದ ಮೇಲೆ ನೀವು ಖಂಡಿತವಾಗಿಯೂ 'ಅಯ್ಯೋ' ಎಷ್ಟು ಮುದ್ದು ನಾಯಿ ಎನ್ನುತ್ತೀರಾ.
1.9 ಮಿಲಿಯನ್ ವೀಕ್ಷಣೆ
ಮೂರು ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಇದುವರೆಗೆ 1.9 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. "ಅವನು ಸ್ವಲ್ಪ ಕ್ಯಾಮೆರಾಗೆ ನಾಚಿಕೆಪಡುತ್ತಾನೆ" ಎಂದು ವಿಡಿಯೊದಲ್ಲಿನ ಟೈಟಲ್ ಹೇಳುತ್ತದೆ.
ನಾಯಿ ಮಾಲೀಕ ತಾನು ಮ್ಯೂಸಿಕ್ ಬೀಟ್ ನುಡಿಸುತ್ತಿದ್ದಂತೆ, ಅದಕ್ಕೆ ತಕ್ಕಂತೆ ನಾಯಿ ಕೂಡ ಡ್ಯಾನ್ಸ್ ಮೂವ್ ಮಾಡಿದೆ. ಮೊದಲಿಗೆ ನಾಯಿ ಬೀಟ್ ಅನ್ನು ಕಂಡುಹಿಡಿಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಂತರ ತಾಳಕ್ಕೆ ತನ್ನದೇ ಆದ ರೀತಿ ಬಾಡಿ ಮೂವ್ ಮಾಡುವ ಮೂಲಕ ಸಂಗೀತಕ್ಕೆ ಡಾನ್ಸ್ ಮಾಡುತ್ತದೆ. ಅಲ್ಲದೇ ಬೀಟ್ಸ್ ಸೌಂಡಿಗೆ ನಾಯಿಯು ತನ್ನ ತಲೆಯನ್ನು ಸಹ ಅಲ್ಲಾಡಿಸುತ್ತದೆ.
ಈ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಆಗಿದ್ದು, ಮನಸ್ಸಿಗೆ ಮುದ ನೀಡುವುದರ ಜೊತೆ ಮುಖದಲ್ಲಿ ನಗು ತರಿಸುತ್ತಿದೆ. "ಅವನು ಕೆಲವು ಚಲನೆಗಳನ್ನು ಹೊಂದಿದ್ದಾನೆ. ಅದನ್ನು ನಿರೀಕ್ಷಿಸಿ, ”ಎಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋದ ಶೀರ್ಷಿಕೆ ಹೇಳುತ್ತದೆ.
ಈ ವಿಡಿಯೋ ಪೋಸ್ಟ್ಗೆ ಸಾಕಷ್ಟು ಕಾಮೆಂಟ್ಗಳು ಬಂದಿದ್ದು, ನಾಯಿಯ ನೃತ್ಯದ ಚಲನೆಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ ಶ್ವಾನ ಪ್ರಿಯರು ಇದಕ್ಕೆ ಅನೇಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಈ ವಿಡಿಯೋ ನನ್ನನ್ನು ಖುಷಿಗೊಳಿಸಿತು, ಎಂತಹಾ ಸುಂದರವಾದ ವಿಡಿಯೋ ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಕಚ್ಚಾ ಬದಾಮ್ ಬಳಿಕ ವೈರಲ್ ಆಗ್ತಿದೆ ದ್ರಾಕ್ಷಿ ಮಾರಾಟಗಾರನ ವಿಡಿಯೋ
ಉತ್ತಮ ಡ್ಯಾನ್ಸರ್ ಅಂತ ಹೇಳಿದ ಜನರು
ವಿಡಿಯೋ ಟೈಟಲ್ ಉಲ್ಲೇಖಿಸಿ "ಸರಿ, ಇದು ಖಂಡಿತವಾಗಿಯೂ ಕಾಯಲು ಯೋಗ್ಯವಾಗಿದೆ" ಎಂದು ಇನ್ಸ್ಟಾಗ್ರಾಮ್ ಬಳಕೆದಾರರು ನಗುವ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ. "ಅಂತಿಮವಾಗಿ, ಕಾಯುವಿಕೆ ನಿಜವಾಗಿಯೂ ಯೋಗ್ಯವಾಗಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ನಾಯಿ ಉತ್ತಮ ಡ್ಯಾನ್ಸರ್ ಎಂದು ಸಹ ಕಾಮೆಂಟ್ ಮಾಡಿದ್ದಾರೆ.
ನಾಯಿಯ ಚಲನೆಯ ಈ ವಿಡಿಯೋ ಕೃಪೆ ಆ್ಯಂಟೋನಿಯೊ ಸ್ಯಾಂಡರ್ಸ್ ಮತ್ತು ಶಿಲೀ ಹೆಸ್ಮನ್ ಅವರಿಗೆ ಸಲ್ಲುತ್ತದೆ. ನೀವು ನಾಯಿ ಸಾಕಿದ್ದರೆ ನಿಮ್ಮ ನಾಯಿಗೂ ಕೆಲವು ಮ್ಯೂಸಿಕ್ ಹಾಕಿ ಡ್ಯಾನ್ಸ್ ಕಲಿಸಿಬಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ