ಬಾಂಗ್ಲಾದೇಶದ (Bangladesh) ವಿರುದ್ಧದ ಟೆಸ್ಟ್ (Test) ಸರಣಿಯ 2ನೇ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ (R. Ashwin) ಅಮೋಘ ಪ್ರದರ್ಶನ ನೀಡಿದರು. 145 ರನ್ಗಳ ಗುರಿಯನ್ನು (Goal) ಬೆನ್ನಟ್ಟಿದ ಭಾರತ ತಂಡ 74 ರನ್ಗಳಿಗೆ 7 ವಿಕೆಟ್ (Wicket) ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಜೊತೆಯಾದ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ಜೋಡಿ 8ನೇ ವಿಕೆಟ್ಗೆ ಅಜೇಯ 71 ರನ್ ಕಲೆ ಹಾಕುವ ಮೂಲಕ ಭಾರತಕ್ಕೆ 3 ವಿಕೆಟ್ ಜಯ ತಂದುಕೊಟ್ಟರು.
ಅಜೇಯ 42 ರನ್ ಗಳಿಸಿದ ಅಶ್ವಿನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದಲ್ಲಿ 6 ವಿಕೆಟ್ ಪಡೆದು, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಕ್ಕಾಗಿ ಅವರಿಗೆ ಪಂದ್ಯದ ಆಟಗಾರ ಪ್ರಶಸ್ತಿ ಸಹ ನೀಡಲಾಯಿತು.
ಇನ್ನು ಈ ಪಂದ್ಯದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆರ್ ಅಶ್ವಿನ್ ಪ್ರದರ್ಶನವನ್ನು ಸೈಂಟಿಸ್ಟ್ ಎಂದು ಹೇಳುವ ಮೂಲಕ ಹೊಗಳಿದ್ದಾರೆ.
ಬೆಸ್ಟ್ ಆಲ್ರೌಂಡರ್ ಆರ್. ಅಶ್ವಿನ್
ಭಾರತದ ಪರ ಟೆಸ್ಟ್ ಪಂದ್ಯಗಳಲ್ಲಿ 3,000 ರನ್ ಮತ್ತು 400 ಪ್ಲಸ್ ವಿಕೆಟ್ಗಳನ್ನು ಕಲೆ ಹಾಕಿದವರಲ್ಲಿ ಪ್ರಮುಖವಾಗಿ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಆಲ್ರೌಂಡರ್ ಕಪಿಲ್ ದೇವ್ ಮತ್ತು ಇತ್ತೀಚಿನ ಯುವ ಆಟಗಾರ ಅಶ್ವಿನ್ ಪ್ರಮುಖವಾಗಿದ್ದಾರೆ.
2021ರಲ್ಲಿ ಇರುವ ಆಟಗಾರರ ಪೈಕಿ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಶ್ವಿನ್ 4ನೇ ಸ್ಥಾನದಲ್ಲಿದ್ದಾರೆ.
ಆರ್. ಅಶ್ವಿನ್ ಇನ್ನೂ ಟೆಸ್ಟ್ ಆಟದಲ್ಲಿ ಉಪನಾಯಕನಾಗಿಲ್ಲ ಏಕೆ?
ಹತ್ತಾರು ಮ್ಯಾಚ್ಗಳನ್ನು ಗೆಲ್ಲಿಸಕೊಟ್ಟ ಖ್ಯಾತಿ ಕೂಡ ಅಶ್ವಿನ್ ಅವರಿಗೆ ಸಲ್ಲಿದೆ. ರನ್ಗಳು ವಿಕೆಟ್ಗಳು ಕೂಡ ಅವರ ಬತ್ತಳಿಕೆಯಲ್ಲಿ ತುಂಬಿವೆ. ಟೆಸ್ಟ್ನಲ್ಲಿ ಶತಕಗಳು ಸಹ ಅಶ್ವಿನ್ ಬ್ಯಾಟ್ನಲ್ಲಿ ಬಂದಿವೆ.
ಅಶ್ವಿನ್ ಯೋಚಿಸುವ ಕ್ರಿಕೆಟಿಗ ಮತ್ತು ಭವಿಷ್ಯದ ನಾಯಕ ಎಂದು ಭಾವಿಸಲಾಗಿದೆ. ಆದಾಗ್ಯೂ ಧೋನಿ ಟೆಸ್ಟ್ ಕ್ರಿಕೆಟ್ ತ್ಯಜಿಸಿದಾಗ ಮತ್ತು ಕೊಹ್ಲಿ ನಾಯಕತ್ವದಿಂದ ಇಳಿದಾಗ ಅಶ್ವಿನ್ ಅವರನ್ನು ಏಕೆ ನಾಯಕ ಅಥವಾ ಉಪನಾಯಕನನ್ನಾಗಿ ನೋಡಿಲ್ಲ.
ಸ್ಕೋರ್ ಕಾರ್ಡ್ ಇಷ್ಟಿದ್ದರೂ, ನಾಯಕತ್ವದ ಗುಣಗಳಿದ್ದರೂ ಆರ್. ಅಶ್ವಿನ್ ಏಕೆ ಟೆಸ್ಟ್ ತಂಡದಲ್ಲಿ ನಾಯಕ ಅಥವಾ ಉಪನಾಯಕನಾಗಿಲ್ಲ ಎಂಬ ಪ್ರಶ್ನೆ ಈಗ ದೊಡ್ಡದಾಗಿ ಬೆಳೆಯುತ್ತಿದೆ.
ಉಪನಾಯಕನ ಪಟ್ಟಕ್ಕೆ ಅಶ್ವಿನ ಫಿಟ್
ಟೆಸ್ಟ್ ಮ್ಯಾಚ್ಗೆ ಅಶ್ವಿನ್ ಅವರನ್ನು ಕ್ಯಾಪ್ಟನ್ ಮಾಡಲು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಹಿಂದೇಟು ಹಾಕುತ್ತಿದ್ದರು. ಅಶ್ವಿನ್ ಅತಿಯಾಗಿ ಯೋಚಿಸುತ್ತಾರೆ, ಔಟ್ ಆಫ್ ದಿ ಬಾಕ್ಸ್ ಯೋಚಿಸುತ್ತಾರೆ ಎಂಬ ಕಾರಣಕ್ಕಾಗಿ ಅವರಿಗೆ ನಾಯಕತ್ವವನ್ನು ನೀಡಲು ಹಿಂಜರಿಯುತ್ತಿದ್ದರು.
ಆದರೆ, ನಾಯಕ ಅಥವಾ ವೈಸ್ ಕ್ಯಾಪ್ಟನ್ಶಿಫ್ ನೀಡಲು ಅಶ್ವಿನ್ ಸೂಕ್ತ ಆಟಗಾರ ಎಂಬುವುದು ಹಲವರ ಅಭಿಪ್ರಾಯ. ಅದರಲ್ಲೂ ಉಪನಾಯಕತ್ವದಲ್ಲಿ ಅಂತಹ ಯಾವುದೇ ಸಮಸ್ಯೆಗಳಿಲ್ಲ.
ಏಕೆಂದರೆ ಅಶ್ವಿನ್ ನಾಯಕತ್ವದ ಗುಂಪಿನ ಭಾಗವಾಗಲು ಸರಿಯಾದ ಸ್ಥಾನವನ್ನು ಗಳಿಸಿದ್ದಾರೆ ಮತ್ತು ಆಟಗಾರರಿಗೆ ಮಾರ್ಗದರ್ಶನ ನೀಡುವಲ್ಲಿ ಅಶ್ವಿನ್ ಎತ್ತಿದ ಕೈ ಎನ್ನಲಾಗುತ್ತಿದೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ಯಾಪ್ಟನ್ಶಿಪ್ಗೆ ವಿದಾಯ ಹೇಳಿದಾಗಿನಿಂದಲೂ ಅಶ್ವಿನ್ ಅವರನ್ನು ಪ್ರಮುಖ ಬ್ಯಾಟ್ಸ್ಮನ್ ಆಗಿ ಪಂದ್ಯದಲ್ಲಿ ನೋಡಲಾಗುತ್ತಿದೆ.
2021 ರಲ್ಲಿ ದಕ್ಷಿಣ ಆಫ್ರಿಕಾ ಸರಣಿ, ಶ್ರೀಲಂಕಾ, ಬಾಂಗ್ಲಾದೇಶ, ಮತ್ತು ಆಸ್ಟ್ರೇಲಿಯಾ ಪಂದ್ಯದಲ್ಲಿ ಅಶ್ವಿನ್ ಓಪನರ್ ಆಗಿ ಬ್ಯಾಟ್ ಎತ್ತಿಕೊಂಡಿದ್ದರು.
ರೋಹಿತ್ ಸದ್ಯ ಭಾರತದ ಟೆಸ್ಟ್ ತಂಡದ ಸಾರಥಿಯಾಗಿದ್ದು, ವೈಸ್ಕ್ಯಾಪ್ಟನ್ ಆಗಿ ಅಶ್ವಿನ್ ಏಕೆ ಇಲ್ಲ ಎಂಬ ದೊಡ್ಡ ಪ್ರಶ್ನೆ ಮೂಡುತ್ತಿದೆ.
ಆಯ್ಕೆ ಸಮಿತಿಯು ಅಶ್ವಿನ್ ಅವರನ್ನು ಉಪನಾಯಕತ್ವಕ್ಕೆ ಆಯ್ಕೆ ಮಾಡಬಹುದೇ?
ರೋಹಿತ್, ಬುಮ್ರಾ ಫಿಟ್ನೆಸ್ ವಿಚಾರವಾಗಿ ಪಂದ್ಯದಿಂದ ಹೊರಗುಳಿಯುತ್ತಲೇ ಇದ್ದಾರೆ. ಹೀಗಾಗಿ ರಾಹುಲ್, ರೋಹಿತ್ ಅನುಸ್ಥಿತಿಯಲ್ಲಿ ಟೆಸ್ಟ್ ಮ್ಯಾಚ್ ನೇತೃತ್ವ ವಹಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸಂದರ್ಭವನ್ನು ನಿಭಾಯಿಸಲು ಹೊಸ ಆಯ್ಕೆ ಸಮಿತಿಯು ಅಶ್ವಿನ್ ಅವರನ್ನು ಉಪನಾಯಕತ್ವಕ್ಕೆ ಆಯ್ಕೆಯಾಗಿ ನೋಡಬಹುದು.
ವೈಸ್ ಕ್ಯಾಪ್ಟನ್ ವಿಷಯದಲ್ಲಿ ಅಶ್ವಿನ್ ಅವರನ್ನು ಹೊರಗಿಡುವುದು ಅಸಾಧ್ಯದ ಮಾತಾಗಿದೆ. ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮಾ, ರಿಷಭ್ ಪಂತ್, ಜಡೇಜಾ ಇರುವ ತಂಡದಲ್ಲಿ, ಅಶ್ವಿನ್ ಉಪನಾಯಕನ ಸ್ಥಾನಕ್ಕೆ ಬೇಕಿರುವ ಎಲ್ಲಾ ಮಾನದಂಡಗಳನ್ನು ಹೊಂದಿದ್ದಾರೆ.
ಉಪನಾಯಕ ಹುದ್ದೆಗೆ ರಹಾನೆ ಅವರನ್ನು ಸಮರ್ಥವಾಗಿ ಪರಿಗಣಿಸಲಾಗಿತ್ತು. ರಹಾನೆ ನಾಯಕತ್ವದ ಜಿಮ್ ಪ್ರವಾಸದಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು ಮತ್ತು ಉಪನಾಯಕರಾಗುವ ಅವಕಾಶವೂ ಸಿಗಲಿಲ್ಲ.
ಟೆಸ್ಟ್ ಮ್ಯಾಚ್ ನಾಯಕತ್ವದ ಮತ್ತು ಉಪನಾಯಕತ್ವದ ಸ್ಪರ್ಧೆಯಲ್ಲಿ ರಾಹುಲ್, ರಿಷಭ್ ಪಂತ್, ಪೂಜಾರ, ಅಜಿಂಕ್ಯ ರಹಾನೆ ಸಹ ಇದ್ದಾರೆ.
ಇದನ್ನೂ ಓದಿ: R Ashwin- ನಾನು ಕ್ರಿಕೆಟ್ಗೆ ಕಳಂಕವಾ?: ಓವರ್ ಥ್ರೋ ವಿವಾದದ ಬಗ್ಗೆ ಸ್ಪಷ್ಟನೆ ಕೊಟ್ಟ ಆರ್ ಅಶ್ವಿನ್
ಕಳೆದ ವರ್ಷ ಹಿಟ್ಮ್ಯಾನ್ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಉಪನಾಯಕನಾಗಿ ಕೆ.ಎಲ್ ರಾಹುಲ್ ಅವರನ್ನು ಭಾರತೀಯ ಆಯ್ಕೆಗಾರರು ಹೆಸರಿಸಿ ನೇಮಕ ಮಾಡಿದ್ದರು.
ಈ ಸಂದರ್ಭದಲ್ಲೂ ಕೂಡ ಟೆಸ್ಟ್ ಮ್ಯಾಚ್ಗೆ ಆರ್.ಅಶ್ವಿನ್ ಪರಿಪೂರ್ಣ ಉಪನಾಯಕ, ನಾಯಕರಾಗುವ ಸಾಮರ್ಥ್ಯ ಇತ್ತು ಎಂದು ಹಲವರ ಅಭಿಪ್ರಾಯಪಟ್ಟಿದ್ದರೂ, ಈಗಲೂ ಸಹ ಅದೇ ನಿಲುವನ್ನು ತಜ್ಞರು ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ