ಅಂತರಾಷ್ಟ್ರೀಯ Cricket ನಲ್ಲಿರುವ ಈ ಸಹೋದರರ ಬಗ್ಗೆ ಗೊತ್ತಾ? ಇಲ್ಲಿದೆ ಫುಲ್ ಡೀಟೇಲ್ಸ್

ಒಂದೇ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಂಡಿರುವ ಅನೇಕ ಸಹೋದರ ಜೋಡಿಗಳನ್ನು ನಾವು ಬಹುತೇಕವಾಗಿ ಎಲ್ಲಾ ಕ್ಷೇತ್ರದಲ್ಲಿಯೂ ನೋಡುತ್ತೇವೆ. ಇದಕ್ಕೆ ಕ್ರಿಕೆಟ್ ಜಗತ್ತು ಹೊರತೇನಲ್ಲ. ಈ ರಾಷ್ಟ್ರೀಯ ಸಹೋದರರ ದಿನದಂದು, ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಮಾಡಿದಂತಹ ಆ ಒಡಹುಟ್ಟಿದವರ ಜೋಡಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಪಾಂಡ್ಯ ಬ್ರದರ್ಸ್

ಪಾಂಡ್ಯ ಬ್ರದರ್ಸ್

  • Share this:
ಒಡಹುಟ್ಟಿದವರ ನಡುವಿನ ವಿಶೇಷ ಬಂಧವನ್ನು(Relationship)  ಗುರುತಿಸಲು ಪ್ರತಿ ವರ್ಷ ಮೇ 24ನೇ ತಾರೀಖನ್ನು ರಾಷ್ಟ್ರೀಯ ಸಹೋದರರ ದಿನವಾಗಿ (Brothers Day) ಆಚರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ಅಮೆರಿಕದಲ್ಲಿ (America) ಆಚರಿಸಲಾಗುತ್ತದೆ, ಈ ದಿನವನ್ನು ಭಾರತ, ಆಸ್ಟ್ರೇಲಿಯಾ, ರಷ್ಯಾ, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಸಹ ಆಚರಿಸಲಾಗುತ್ತದೆ. ಒಂದೇ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಂಡಿರುವ ಅನೇಕ ಸಹೋದರ (Brother) ಜೋಡಿಗಳನ್ನು ನಾವು ಬಹುತೇಕವಾಗಿ ಎಲ್ಲಾ ಕ್ಷೇತ್ರದಲ್ಲಿಯೂ ನೋಡುತ್ತೇವೆ. ಇದಕ್ಕೆ ಕ್ರಿಕೆಟ್ (Cricket) ಜಗತ್ತು ಹೊರತೇನಲ್ಲ. ಈ ರಾಷ್ಟ್ರೀಯ ಸಹೋದರರ ದಿನದಂದು, ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಮಾಡಿದಂತಹ ಆ ಒಡಹುಟ್ಟಿದವರ ಜೋಡಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

1. ಕೃನಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ
ಈ ಇಬ್ಬರೂ ಸಹೋದರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಭಾರತೀಯ ರಾಷ್ಟ್ರೀಯ ತಂಡಕ್ಕಾಗಿ ಒಟ್ಟಿಗೆ ಆಡಿದ್ದಾರೆ. ಹಾರ್ದಿಕ್ 2016 ರಲ್ಲಿ ಮತ್ತು ಕೃನಾಲ್ 2018 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಹಾರ್ದಿಕ್ ಒಂದೇ ಐಪಿಎಲ್ ಋತುವಿನಲ್ಲಿ 400ಕ್ಕೂ ಹೆಚ್ಚು ರನ್ ಗಳನ್ನು ಗಳಿಸಿದ ಮತ್ತು 10ಕ್ಕಿಂತಲೂ ಹೆಚ್ಚು ವಿಕೆಟ್ ಗಳನ್ನು ಪಡೆದ ದಾಖಲೆಯನ್ನು 2019ರಲ್ಲಿ ಮಾಡಿದ್ದಾರೆ. ಕೃನಾಲ್ ಅವರು ಸಹ 87 ಪಂದ್ಯಗಳಲ್ಲಿ 1170 ರನ್ ಗಳಿಸಿದ್ದಾರೆ.

ಕೃನಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ


2. ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್
ಇವರಿಬ್ಬರು ತಮ್ಮ ಕ್ರಿಕೆಟ್ ವೃತ್ತಿಜೀವನದ ಹೆಚ್ಚಿನ ಭಾಗವನ್ನು ಒಟ್ಟಿಗೆ ಆಡಿದ್ದಾರೆ. ಯೂಸುಫ್ 2007ರಲ್ಲಿ ಭಾರತ ಹಾಗೂ 2003ರಲ್ಲಿ ಇರ್ಫಾನ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇಬ್ಬರೂ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ಈಗ ನಿವೃತ್ತರಾಗಿದ್ದಾರೆ.

ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್


ಇದನ್ನೂ ಓದಿ:  Sara Tendulkar: ಸಾರಾ ತೆಂಡೂಲ್ಕರ್ ಲುಕ್​ಗೆ ಮನಸೋತ ಖ್ಯಾತ ಕ್ರಿಕೆಟಿಗನ ಪತ್ನಿ, ರಾಜಕುಮಾರಿ ಹಾಗಿದ್ದಾರಂತೆ ಸಾರಾ!

ಯೂಸುಫ್ 15 ಎಸೆತಗಳಲ್ಲಿ ಅತಿ ವೇಗವಾಗಿ 50 ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಇರ್ಫಾನ್ ಅವರು 2005 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಎರಡು ಟೆಸ್ಟ್ ಪಂದ್ಯಗಳಲ್ಲಿ 21 ವಿಕೆಟ್ ಪಡೆದು, ಕೇವಲ 2 ಪಂದ್ಯಗಳಲ್ಲಿ ಇಷ್ಟೊಂದು ವಿಕೆಟ್ ಗಳನ್ನು ಪಡೆದ ಮೂರನೇ ಆಟಗಾರರಾಗಿದ್ದಾರೆ.

3. ಸ್ಟೀವ್ ವ್ಹಾ ಮತ್ತು ಮಾರ್ಕ್ ವ್ಹಾ
ಈ ಜೋಡಿ ಅವಳಿಗಳು ಆಗಿದ್ದು, ಆಸ್ಟ್ರೇಲಿಯಾ ತಂಡದ ಪರ ಆಡಿದ್ದಾರೆ ಮತ್ತು ತಂಡಕ್ಕಾಗಿ ನಿರ್ಣಾಯಕ ಪಾತ್ರಗಳನ್ನು ವಹಿಸಿದ್ದಾರೆ. 1999ರ ವಿಶ್ವಕಪ್ ಗೆಲುವಿಗೆ ನೀಡಿದ ಕೊಡುಗೆಗಾಗಿ ಸ್ಟೀವ್ ಅವರನ್ನು ವಿಶೇಷವಾಗಿ ಆಸ್ಟ್ರೇಲಿಯಾದ ಅತ್ಯಂತ ಅಪ್ರತಿಮ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ಆಸ್ಟ್ರೇಲಿಯಾದ ಕ್ರಿಕೆಟ್ ಹಾಲ್ ಆಫ್ ಫೇಮ್ ಗೂ ಸೇರ್ಪಡೆಗೊಂಡ 30ನೇ ಕ್ರಿಕೆಟಿಗರಾಗಿದ್ದಾರೆ. ಮಾರ್ಕ್ ಮತ್ತು ಸ್ಟೀವ್ ಇಬ್ಬರೂ ಕ್ರಿಕೆಟ್ ಗೆ ಸಂಬಂಧಿಸಿದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.

4. ಕಮ್ರಾನ್ ಅಕ್ಮಲ್ ಮತ್ತು ಉಮರ್ ಅಕ್ಮಲ್
ಪಾಕಿಸ್ತಾನ ಕ್ರಿಕೆಟ್ ನ ಆಟಗಾರರಾದ ಕಮ್ರಾನ್ ಮತ್ತು ಉಮರ್ ಇಬ್ಬರೂ ಸಹೋದರರು. ಕಮ್ರಾನ್ 2002 ರಲ್ಲಿ ಜಿಂಬಾಬ್ವೆ ವಿರುದ್ಧ ಮತ್ತು ಉಮರ್ 2008 ರಲ್ಲಿ ಮಲೇಷ್ಯಾದಲ್ಲಿ ನಡೆದ 19 ವರ್ಷ ವಯಸ್ಸಿನೊಳಗಿನ ವಿಶ್ವಕಪ್ ನಲ್ಲಿ ಪಾದಾರ್ಪಣೆ ಮಾಡುವುದರೊಂದಿಗೆ ಕ್ರಿಕೆಟ್ ಜಗತ್ತಿಗೆ ಪರಿಚಯವಾದರು. ಕಮ್ರಾನ್ ಟ್ವೆಂಟಿ20 ಪಂದ್ಯದಲ್ಲಿ 150 ರನ್ ಗಳಿಸಿದ ಮೊದಲ ಪಾಕಿಸ್ತಾನಿ ಕ್ರಿಕೆಟಿಗರಾಗಿದ್ದಾರೆ. ಉಮರ್ 2016ರ ಪಿಎಸ್ಎಲ್ ಋತುವಿನಲ್ಲಿ ಅಗ್ರ ಸ್ಕೋರರ್ ಆಗಿದ್ದರು.

5. ಟಾಮ್ ಕರ್ರನ್ ಮತ್ತು ಸ್ಯಾಮ್ ಕರ್ರನ್
ಕರ್ರನ್ ಸಹೋದರರು ಇಂಗ್ಲೆಂಡ್ ಕ್ರಿಕೆಟ್ ತಂಡದ ಪರ ಆಡಿದ ಆರನೇ ಜೋಡಿ ಸಹೋದರರು ಎಂದು ಹೇಳಲಾಗುತ್ತಿದೆ. ಇತ್ತೀಚಿನ ಪ್ರವಾಸದಲ್ಲಿ ಇಬ್ಬರೂ ಏಕದಿನ ಸರಣಿಯಲ್ಲಿ ಭಾರತದ ವಿರುದ್ಧ ಆಡುವ ತಂಡದ ಭಾಗವಾಗಿದ್ದರು.

6. ಮೈಕೆಲ್ ಹಸ್ಸಿ ಮತ್ತು ಡೇವಿಡ್ ಹಸ್ಸಿ
ಈ ಸಹೋದರರಿಬ್ಬರೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ ಮತ್ತು ಇವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತರಬೇತುದಾರರೂ ಸಹ ಆಗಿದ್ದಾರೆ. 45 ವರ್ಷದ ಮೈಕೆಲ್ ಈ ಜೋಡಿಯಲ್ಲಿ ಹಿರಿಯ ಸಹೋದರರಾಗಿದ್ದಾರೆ.

7. ಶಾನ್ ಮಾರ್ಷ್ ಮತ್ತು ಮಿಚೆಲ್ ಮಾರ್ಷ್
ಶಾನ್ ಟೆಸ್ಟ್ ಮತ್ತು ಏಕದಿನ ಅಂತಾರಾಷ್ಟ್ರೀಯ ಸ್ವರೂಪಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದರೆ, ಮಿಚೆಲ್ ಎಲ್ಲಾ ಸ್ವರೂಪದ ಕ್ರಿಕೆಟ್ ಆಟಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ್ದಾರೆ.

8. ಬ್ರೆಟ್ ಲೀ ಮತ್ತು ಶೇನ್ ಲೀ
ಶೇನ್ 1999 ರಲ್ಲಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು, ಆದರೆ ಇವರು 1995 ರಿಂದ 2000ರವರೆಗೆ ಕೇವಲ 5 ವರ್ಷಗಳ ಅಲ್ಪಾವಧಿಯ ವೃತ್ತಿಜೀವನವನ್ನು ಹೊಂದಿದ್ದರು. ಮತ್ತೊಂದೆಡೆ ಬ್ರೆಟ್ ಲೀ ಅವರು ಟೆಸ್ಟ್ ಮಾದರಿಯಲ್ಲಿ 310 ವಿಕೆಟ್ ಮತ್ತು ಏಕದಿನದಲ್ಲಿ 380 ವಿಕೆಟ್ ಗಳೊಂದಿಗೆ ಅತ್ಯುತ್ತಮ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಆಸ್ಟ್ರೇಲಿಯಾದ ಅತ್ಯಂತ ಮಾರಕ ಬೌಲರ್ ಗಳಲ್ಲಿ ಒಬ್ಬರಾಗಿದ್ದರು.

ಇದನ್ನೂ ಓದಿ:  Shikhar Dhawan: ಬಾಲಿವುಡ್​ಗೆ ಎಂಟ್ರಿ ನೀಡಲಿದ್ದಾರೆ ಗಬ್ಬರ್ ಸಿಂಗ್, ಈ ವರ್ಷವೇ ಫಿಲ್ಮ್ ಬಿಡುಗಡೆಯಂತೆ

ಇವರಷ್ಟೇ ಅಲ್ಲದೆ ಇನ್ನೂ ಕೆಲವು ಸಹೋದರರ ಜೋಡಿಗಳಿವೆ ನೋಡಿ. ದಕ್ಷಿಣ ಆಫ್ರಿಕಾ ತಂಡದ ಅಬಿ ಮೊರ್ಕೆಲ್ ಮತ್ತು ಮೊರ್ನೆ ಮೊರ್ಕೆಲ್, ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕಲಮ್ ಮತ್ತು ನೇಥನ್ ಮೆಕಲಮ್. ಅದೇ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರರಾದ ಮಾರ್ಟಿನ್ ಕ್ರೋವ್ ಮತ್ತು ಜೆಫ್ ಕ್ರೋವ್ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಛಾಪು ಮೂಡಿಸಿದ ಇತರ ಕೆಲವು ಸಹೋದರ ಜೋಡಿಗಳು ಎಂದು ಹೇಳಬಹುದು.
Published by:Ashwini Prabhu
First published: