ಕ್ರಿಕೆಟ್ ಅಂಗಳದ ಸ್ಟೈಲಿಷ್ಟ್ ಆಟಗಾರ ಡ್ವೆನ್ ಬ್ರಾವೊ ಅತ್ಯುತ್ತಮ ಡಿಜೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಪ್ರತಿ ಸೀಸನ್ ಐಪಿಎಲ್ ವೇಳೆ ಹೊಸ ಹಾಡಿನೊಂದಿಗೆ ಎಂಟ್ರಿ ಕೊಡುವ ಬ್ರಾವೊ ಈ ಬಾರಿ ಕೂಡ ಸಾಂಗ್ವೊಂದನ್ನು ರಚಿಸಿದ್ದಾರೆ.
ಆದರೆ ಈ ಬಾರಿ ಹಾಡು ರಚಿಸಿರುವುದು ಕೊರೋನಾ ವೈರಸ್ ವಿರುದ್ಧದ ಜಾಗೃತಿಗಾಗಿ ಎಂಬುದು ವಿಶೇಷ. ರ್ಯಾಪ್ ಶೈಲಿಯಲ್ಲಿರುವ ಈ ಹಾಡನ್ನು ಬ್ರಾವೊ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ.
3 ನಿಮಿಷ 31 ಸೆಕೆಂಡ್ ಇರುವ ಈ ಹಾಡಿನಲ್ಲಿ ಕೈಗಳನ್ನು ಸ್ವಚ್ಛವಾಗಿಡಲು ಕೈಗಳನ್ನು ತೊಳೆಯುತ್ತಿರಿ, ಸೋಂಕು ಹರಡದಂತೆ ತಡೆಯಲು ಮನೆಯಲ್ಲಿಯೇ ಉಳಿಯಿರಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಎಂಬಾರ್ಥದ ಸಾಹಿತ್ಯ ನೀಡಲಾಗಿದೆ.
ಈ ಹಿಂದೆ ಚಾಂಪಿಯನ್ಸ್, ವಿ ಆರ್ ದಿ ಕಿಂಗ್ಸ್, ರನ್ ದಿ ವರ್ಲ್ಡ್, ಏಷ್ಯಾ ಗೀತೆಗಳ ಮೂಲಕ ಮೋಡಿ ಮಾಡಿದ್ದ ಬ್ರಾವೊ ಇದೀಗ ಹಾಡಿನ ಮೂಲಕವೇ ಕೊರೋನಾ ಜಾಗೃತಿ ಮೂಡಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ