ಭಾರತದ ಕೀರ್ತಿ ಪತಾಕೆ ಹಾರಿಸಿದ ಹದಿಯರೆಯದ ಶೂಟರ್ಸ್; ಐಎಸ್ಎಸ್ಎಫ್ ವಿಶ್ವಕಪ್ ಫೈನಲ್​ನಲ್ಲಿ ಭಾರತೀಯರಿಗೆ 3 ಚಿನ್ನ

ಶೂಟಿಂಗ್ ಕ್ರೀಡಾಪಟುಗಳಾದ ದಿವ್ಯಾಂಶ್ ಸಿಂಗ್ ಪನ್ವರ್, ಇಳಾವೇನಿಲ್ ವಲಾರಿವನ್ ಮತ್ತು ಮನು ಭಾಕೆರ್ ಅವರು ವಿಶ್ವಕಪ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. 17 ವರ್ಷದ ದಿವ್ಯಾಂಶ್ ಅವರು ಒಲಿಂಪಿಕ್ಸ್​ಗೂ ಅರ್ಹತೆ ಪಡೆದಿದ್ದಾರೆ.

Vijayasarthy SN | news18
Updated:November 21, 2019, 11:21 PM IST
ಭಾರತದ ಕೀರ್ತಿ ಪತಾಕೆ ಹಾರಿಸಿದ ಹದಿಯರೆಯದ ಶೂಟರ್ಸ್; ಐಎಸ್ಎಸ್ಎಫ್ ವಿಶ್ವಕಪ್ ಫೈನಲ್​ನಲ್ಲಿ ಭಾರತೀಯರಿಗೆ 3 ಚಿನ್ನ
ದಿವ್ಯಾಂಶ್ ಸಿಂಗ್ ಪನ್ವರ್
  • News18
  • Last Updated: November 21, 2019, 11:21 PM IST
  • Share this:
ನವದೆಹಲಿ(ನ. 21): ಯುವ ಪ್ರತಿಭೆಗಳಿಂದ ತುಂಬಿ ತುಳುಕುತ್ತಿರುವ ಭಾರತೀಯ ಶೂಟಿಂಗ್ ಕ್ರೀಡೆಗೆ ಇಂದು ಶುಭದಿನ. ಐಎಸ್​ಎಸ್​ಎಫ್ ವಿಶ್ವಕಪ್ ಫೈನಲ್ಸ್ ಶೂಟಿಂಗ್ ಟೂರ್ನಿಯಲ್ಲಿ ನಿನ್ನೆ ಒಂದು ಚಿನ್ನದ ಪದ ಗೆದ್ದಿದ್ದ ಭಾರತೀಯರು ಇವತ್ತು ಇನ್ನೆರಡು ಸ್ವರ್ಣ ಜಯಿಸಿದ್ದಾರೆ. ಚೀನಾದ ಪುಟಿಯಾನ್​ನಲ್ಲಿ ನಡೆಯುತ್ತಿರುವ ಈ ವಿಶ್ವಕಪ್​ನಲ್ಲಿ 20 ವರ್ಷದ ಎಲಾವೇನಿಲ್ ಮತ್ತು 17 ವರ್ಷದ ದಿವ್ಯಾಂಶ್ ಸಿಂಗ್ ಪನ್ವರ್ ಚಿನ್ನ ಜಯಿಸಿದರು.

ಮಹಿಳೆಯರ 10 ಮೀಟರ್ ಏರ್ ರೈಫಲ್ ಇವೆಂಟ್​ನಲ್ಲಿ ಇಳಾವೇನಿಲ್ ವಲಾರಿವನ್ ಅವರು ಅಂತಿಮ ಸುತ್ತಿನಲ್ಲಿ 250.8 ಅಂಕ ಕಲೆಹಾಕಿ ಮೊದಲ ಸ್ಥಾನ ಗಳಿಸಿದರು. ತೈವಾನ್ ಮತ್ತು ರೊಮೇನಿಯಾದ ಸ್ಪರ್ಧಿಗಳು ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು. ಇದೇ ಇವೆಂಟ್​ನಲ್ಲಿ ಮತ್ತೊಬ್ಬ ಭಾರತೀಯೆ ಮೆಹುಲಿ ಘೋಷ್ 6ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಹಾಗೆಯೇ, ಅಂಜುಮ್ ಮೌಡ್ಗೀಲ್ ಮತ್ತು ಚಾಂಡೇಲಾ ಅವರು ನಿರಾಸೆಯ ಪ್ರದರ್ಶನ ನೀಡಿ ಬೇಗನೇ ನಿರ್ಗಮಿಸಿದರು.

ಇದನ್ನೂ ಓದಿ: ಮಂಗಳ ಗ್ರಹದಲ್ಲಿ ಕ್ರಿಮಿ ಕೀಟ, ಉರಗ ಪತ್ತೆ? ವಿಜ್ಞಾನಿಗಳಿಗೆ ಶಾಕ್ ಕೊಟ್ಟ ಆಕ್ಸಿಜನ್ ಏರಿಕೆ; ಭೂಮಿಯಾಚೆಗಿನ ಜೀವಾನ್ವೇಷಣೆಗೆ ಹೊಸ ಜೀವ

ಆದರೆ, 17 ವರ್ಷದ ದಿವ್ಯಾಂಶ್ ಸಿಂಗ್ ಪನ್ವರ್ ಇವತ್ತಿನ ಸ್ಟಾರ್ ಎನಿಸಿದರು. ಪುರುಷರ 10 ಮೀಟರ್ ಏರ್ ರೈಫಲ್ ಇವೆಂಟ್​ನಲ್ಲಿ ಅವರು 250.1 ಅಂಕಗಳೊಂದಿಗೆ ಚಿನ್ನ ಗೆದ್ದರು. ಭಾರತದವರೇ ಆದ ಜೇನಿ ಪಾತ್ರಿಕ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ದಿವ್ಯಾಂಶ್ ಅವರು ಬೀಜಿಂಗ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಈಗಾಗಲೇ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿದ್ದಾರೆ.

ಮತ್ತೊಬ್ಬ 17 ವರ್ಷದ ಉಜ್ವಲ ಪ್ರತಿಭೆ ಮನು ಭಾಕೆರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಇವೆಂಟ್​ನಲ್ಲಿ ಚಿನ್ನ ಜಯಿಸಿದ್ದಲ್ಲದೇ, ಜೂನಿಯರ್ ವರ್ಲ್ಡ್ ರೆಕಾರ್ಡ್ ಸ್ಥಾಪಿಸಿದ್ದಾರೆ. ಇದರೊಂದಿಗೆ ಐಎಸ್​ಎಸ್​ಎಫ್ ವಿಶ್ವಕಪ್​ನಲ್ಲಿ ಭಾರತಕ್ಕೆ ಈವರೆಗೆ 3 ಚಿನ್ನ ಸಿಕ್ಕಿದಂತಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 21, 2019, 11:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading