ಡಿಸ್ನಿ ವರ್ಲ್ಡ್‌ನಲ್ಲಿ ಚಿತಾ ಭಸ್ಮ ಬಿಡುವ ಪ್ರವಾಸಿಗರು..! ತರ್ಪಣ ಹರಡುವುದನ್ನು ತಡೆಯಲು ರಹಸ್ಯ ಹೋರಾಟ

ಚದುರಿಸಲು ಪ್ರವಾಸಿಗರು ದಿ ಹಾಂಟೆಡ್ ಮ್ಯಾನ್ಷನ್, ಫ್ಲವರ್‌ ಪಾಟ್‌ಗಳು, ಮ್ಯಾಜಿಕ್ ಕಿಂಗ್‌ಡಮ್‌ ಹೂವಿನ ಹಾಸಿಗೆ, ಪೈರೇಟ್ಸ್ ಆಫ್ ದಿ ಕೆರಿಬಿಯನ್ ರೈಡ್‌ ಅಥವಾ ಇತರ ತಾಣಗಳಲ್ಲಿ ಪ್ರವಾಸಿಗರು ಚಿತಾಭಸ್ಮವನ್ನು ಚದುರಿಸುತ್ತಾರೆ.

ಡಿಸ್ನಿ

ಡಿಸ್ನಿ

 • Share this:

  ಡಿಸ್ನಿ ಥೀಮ್ ಪಾರ್ಕ್‌ಗಳನ್ನು ಭೂಮಿಯ ಮೇಲಿನ ಅತ್ಯಂತ ಸಂತೋಷದ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಆದರೆ, ಇದೇ ಖುಷಿಯ ಸ್ಥಳದಲ್ಲಿ ತಮ್ಮ ಮೃತಪಟ್ಟ ಪ್ರೀತಿಪಾತ್ರರ ಚಿತಾಭಸ್ಮವನ್ನು ಬಿಡಲು ಜನರು ಅಲ್ಲಿಗೆ ಹೋಗುತ್ತಾರೆ ಎಂದರೆ ನೀವು ನಂಬುತ್ತೀರಾ..! ಹೌದು, ಇದನ್ನು ನೀವು ನಂಬ್ಲೇಬೇಕು..! ಮೃತಪಟ್ಟ ವ್ಯಕ್ತಿಗಳ ಚಿತಾಭಸ್ಮವನ್ನು ಬಿಡಲೆಂದೇ ಹಲವರು ಡಿಸ್ನಿ ವರ್ಲ್ಡ್‌ಗೆ ಭೇಟಿ ನೀಡುತ್ತಾರಂತೆ. ಹಾಗೂ, ಇದು ಜನಪ್ರಿಯ ಆಯ್ಕೆಯಾಗಿದೆ. ಈ ಮನೋರಂಜನಾ ಉದ್ಯಾನವನಗಳು ಪ್ರತಿವರ್ಷ ವಿಶ್ವಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೆಲವರು ಒಮ್ಮೆ ಜೀವಿತಾವಧಿಯ ಅನುಭವಕ್ಕಾಗಿ ಈ ಉದ್ಯಾನವನಕ್ಕೆ ಭೇಟಿ ನೀಡಿದರೆ, ಇತರರು ತಮ್ಮ ಪ್ರೀತಿಪಾತ್ರರ ಕೊನೆಯ ಆಸೆ ಈಡೇರಿಸಲು ಹಾಗೆ ಮಾಡುತ್ತಾರೆ.


  ತರ್ಪಣ ಬಿಡಲು ಡಿಸ್ನಿ ವರ್ಲ್ಡ್‌ನಲ್ಲಿ ಅನುಮತಿ ನೀಡಿಲ್ಲವಾದರೂ ಜನರು ಕದ್ದುಮುಚ್ಚಿ ಹೀಗೆ ಮಾಡುತ್ತಾರಂತೆ. ಯಾವುದೇ ವ್ಯಕ್ತಿಯು ಈ ಕೃತ್ಯದಲ್ಲಿ ಸಿಕ್ಕಿಬಿದ್ದಾಗ ಈ ಘಟನೆಗಳನ್ನು ಮಾಸಿಕ ಆಧಾರದ ಮೇಲೆ ಹಲವು ವರ್ಷಗಳಿಂದ ವರದಿ ಮಾಡಲಾಗುತ್ತಿದೆ. ಹೆಚ್ಚಾಗಿ ನಗರದ ಜನತೆಯೇ ಇಲ್ಲಿಗೆ ಭೇಟಿ ನೀಡಿದರೂ ಈ ಘಟನೆಗಳು ಸಂಭವಿಸುತ್ತಿದೆ. ಅಲ್ಲದೆ, ಚಿತಾಭಸ್ಮವನ್ನು ಎಸೆಯಲು ಉದ್ಯಾನದೊಳಗೆ ಕೆಲವು ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ.


  ವಾಲ್ಟ್ ಡಿಸ್ನಿ ಕಂಪನಿಯ ಸಿಬ್ಬಂದಿ ಈ ಸಮಸ್ಯೆಗಳನ್ನು ನಿಭಾಯಿಸಲು ಕೋಡ್ ವರ್ಡ್‌ಗಳನ್ನು ಬಳಸುತ್ತಾರೆ ಎಂದು 2018 ರಲ್ಲಿ ಪ್ರಕಟವಾದ ವಾಲ್ ಸ್ಟ್ರೀಟ್ ಜರ್ನಲ್‌ನ ವರದಿಯು ಇದನ್ನು ದೃಢಪಡಿಸಿತ್ತು. ಬೂದಿ ಶೇಷದಂತಹ ಸೂಕ್ಷ್ಮ ಕಣಗಳನ್ನು ಹೀರುವಂತೆ ವಿನ್ಯಾಸಗೊಳಿಸಲಾದ ವಿಶೇಷ ನಿರ್ವಾತ ಫಿಲ್ಟರ್ ಅಗತ್ಯವಿದ್ದಾಗ ಅಂತಹ ಘಟನೆಗಳಿಗೆ ಬಳಸುವ ಸಂಕೇತವೇ ‘HEPA cleanup'.


  ಚಿತಾಭಸ್ಮವನ್ನು ಚದುರಿಸಲು ಪ್ರವಾಸಿಗರು ದಿ ಹಾಂಟೆಡ್ ಮ್ಯಾನ್ಷನ್, ಫ್ಲವರ್‌ ಪಾಟ್‌ಗಳು, ಮ್ಯಾಜಿಕ್ ಕಿಂಗ್‌ಡಮ್‌ ಹೂವಿನ ಹಾಸಿಗೆ, ಪೈರೇಟ್ಸ್ ಆಫ್ ದಿ ಕೆರಿಬಿಯನ್ ರೈಡ್‌ ಅಥವಾ ಇತರ ತಾಣಗಳಲ್ಲಿ ಪ್ರವಾಸಿಗರು ಚಿತಾಭಸ್ಮವನ್ನು ಚದುರಿಸುತ್ತಾರೆ. ಅಂತಹ ಪ್ರಕರಣ ಪತ್ತೆಯಾದಾಗ ತಾಂತ್ರಿಕ ತೊಂದರೆಗಳಿಂದಾಗಿ ಉದ್ಯಾನವನ್ನು ಮುಚ್ಚಲಾಗುತ್ತದೆ. ತಮ್ಮ ಸವಾರಿಯ ವೇಳೆ ತರ್ಪಣ ಬಿಡುವ ಮೂಲಕ, ತಮ್ಮ ಪ್ರೀತಿ ಪಾತ್ರರು ದೆವ್ವ - ಭೂತಗಳನ್ನು ಸೇರಿಕೊಳ್ಳುತ್ತಾರೆ ಮತ್ತು ಥೀಮ್ ಪಾರ್ಕ್‌ನಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ ಎಂದು ಜನರು ನಂಬುತ್ತಾರೆ ಎಂದು ದಿ ಹಾಂಟೆಡ್ ಮ್ಯಾನ್ಷನ್ ಸವಾರಿಯ ಕತೆಯೊಂದು ಹೇಳುತ್ತದೆ.

  ಇದನ್ನೂ ಓದಿ: Kalyan Singh| ಉತ್ತರಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ತೀವ್ರ ಅನಾರೋಗ್ಯದಿಂದಾಗಿ ನಿಧನ!

  ಏಪ್ರಿಲ್ 2019 ರಲ್ಲಿ, ಅಮೆರಿಕದ ಕ್ಯಾಲಿಫೋರ್ನಿಯಾದ ಅನಾಹೈಮ್‌ನಲ್ಲಿರುವ ಡಿಸ್ನಿಲ್ಯಾಂಡ್ ರೆಸಾರ್ಟ್‌ನಲ್ಲಿ ಪೈರೇಟ್ಸ್ ಆಫ್ ದಿ ಕೆರಿಬಿಯನ್ ರೈಡ್‌ನಲ್ಲಿ ಮಹಿಳೆಯೊಬ್ಬರು ಗುರುತಿಸಲಾಗದ ಪುಡಿ ಪದಾರ್ಥವನ್ನು ನೀರಿನಲ್ಲಿ ಹರಡಿದರು. ಬಳಿಕ, ರೈಡ್‌ ಅನ್ನು ಮುಚ್ಚಲಾಯಿತು ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆದರೂ, ಶಂಕಿತನ ಬಗ್ಗೆ ಸರಿಯಾದ ವಿವರಣೆಯ ಕೊರತೆಯಿಂದಾಗಿ ವರದಿಯನ್ನು ಸಲ್ಲಿಸಲಾಗಿಲ್ಲ ಎಂದು ಲಾಸ್ ಏಂಜಲೀಸ್ ಟೈಮ್ಸ್ ವರದಿ ಮಾಡಿದೆ.


  ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ನಾಮಪತ್ರ ಸಲ್ಲಿಸಲು ತೆರಳಿದ್ದ ಸಮಾಜವಾದಿ ಪಕ್ಷದ ಕಾರ್ಯಕರ್ತೆಯ ಸೀರೆ ಎಳೆದ ದುಷ್ಕರ್ಮಿಗಳು

  ಇನ್ನೊಂದೆಡೆ, ಅನೇಕ ಪ್ರವಾಸಿಗರು ಆವರಣದಲ್ಲಿ ಚಿತಾಭಸ್ಮವನ್ನು ಬಿಡಲು ಪೂರ್ವ ಅನುಮತಿ ಕೇಳುತ್ತಾರೆ. ಇದಕ್ಕೆ ಸಾಮಾನ್ಯವಾಗಿ ನಾವು ನಿರಾಕರಿಸುತ್ತೇವೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಹಾಗೂ, ಹಲವು ವರ್ಷಗಳಿಂದ ಕಂಡುಬರುತ್ತಿರುವ ಈ ಸಮಸ್ಯೆಯನ್ನು ಪರಿಹರಿಸುತ್ತಿದ್ದೇವೆ ಎಂದೂ ತಿಳಿಸಿದ್ದಾರೆ. ಇನ್ನು, ತರ್ಪಣ ಬಿಡಲು ನಿಷೇಧವಿದ್ದರೂ ಸಹ ಹಲವರು ಚಿತಾಭಸ್ಮವನ್ನು ಔಷಧಿ ಬಾಟಲಿಗಳಲ್ಲಿ, ಪರ್ಸ್‌ ಕೆಳಭಾಗ ಅಥವಾ ಮೇಕಪ್‌ ಕಾಂಪ್ಯಾಕ್ಟ್‌ಗಳಲ್ಲಿ ಅಡಗಿಸಿಕೊಂಡು ಉದ್ಯಾನವನಕ್ಕೆ ಹೋಗುತ್ತಾರೆ. ಮತ್ತು ಒಳಗೆ ಹೋದ ಬಳಿಕ, ಅವರು ತರ್ಪಣ ಬಿಡಲು ಸರಿಯಾದ ಸ್ಥಳ ಕಂಡುಕೊಳ್ಳುತ್ತಾರೆ ಎಂದೂ ತಿಳಿದುಬಂದಿದೆ.


  ಪೂರ್ವ ಅನುಮತಿಯಿಲ್ಲದೆ ಈ ರೀತಿ ಮಾಡುವುದು ಆರೋಗ್ಯ ಮತ್ತು ಸುರಕ್ಷತಾ ಸಂಹಿತೆಯನ್ನು ಉಲ್ಲಂಘಿಸುತ್ತದೆ ಮತ್ತು ಅಂತಹ ಘಟನೆಗಳನ್ನು ಸಹಿಸುವುದಿಲ್ಲ ಅಥವಾ ಅನುಮತಿಸಲಾಗುವುದಿಲ್ಲ ಎಂದು ಡಿಸ್ನಿ ಸ್ಪಷ್ಟಪಡಿಸಿದೆ.

  First published: