ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದದಲ್ಲಿ ಭಾರತ ಉತ್ತಮ ಪ್ರದರ್ಶನ ತೋರುತ್ತಿದ್ದು, ಭಾರತ ಸ್ಪರ್ಧಿಗಳು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಪದಕಗಳನ್ನು ಮುಡಿಗೇರಿಸಿಕೊಳ್ಳುತ್ತಿದ್ದಾರೆ. . ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಅವರು ಬೆಳ್ಳಿ ಪದಕ ಪಡೆದರೆ ,ನಿಶದ್ ಕುಮಾರ್ ಅವರು ಪುರುಷರ ಹೈಜಂಪ್ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದು ಬೆಳ್ಳಿ ಜಯಿಸಿದರು. ಪುರುಷರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾರತದ ವಿನೋದ್ ಕುಮಾರ್ ಕಂಚಿನ ಪದಕ ಗಿಟ್ಟಿಸಿದರು. ಇನ್ನು ಪ್ಯಾರಾ-ಶೂಟರ್ ಅವನಿ ಲೇಖರಾ ಮಹಿಳಾ 10 ಮೀ ರೈಫಲ್ ನಲ್ಲಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ.
ಇದರ ನಡುವೆ ಸೋಮವಾರ ಭಾರತ ಮತ್ತೊಂದು ಪದಕವನ್ನು ಜಯಿಸಿದೆ. 2018 ರಲ್ಲಿ ಬರ್ಲಿನ್‌ನಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ತನ್ನ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿಯೇ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದ ಯೋಗೀಶ್ ಕಥುನಿಯ ಅವರು ಟೋಕಿಯೋ ಒಲಂಪಿಕ್ನ ಡಿಸ್ಕಸ್ ಥ್ರೋ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಪಟ್ಟಿಯನ್ನು ಹೆಚ್ಚಿಸಿದ್ದಾರೆ.
ಇನ್ನು ಭಾರತಕ್ಕೆ ಬೆಳ್ಳಿ ಪದಕ ಗೆದ್ದ ಯೋಗೀಶ್ ಭಾವುಕರಾಗಿದ್ದು, ನನಗೆ ಪದಕ ಗೆದ್ದಿದ್ದು ಬಹಳ ಸಂತೋಷವಾಗಿದೆ. ನನಗೆ ಏನು ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ಇದು ನನ್ನ ಮೊದಲ ಒಲಂಪಿಕ್, ಇದರಲ್ಲಿ ಪದಕ ವಿಜೇತನಾಗಿದ್ದು ನನಗೆ ಸಂತಸವನ್ನುಂಟು ಮಾಡಿದೆ ಎಂದಿದ್ದಾರೆ.
ಸುದ್ದಿ ಸಂಸ್ಥೆ ANI ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಮಾತನಾಡಿರುವ ಯೋಗೀಶ್ ನಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
#WATCH | Tokyo: Discus thrower Yogesh Kathuniya got emotional after winning a silver medal in class F56 in paralympics
"I am exalted on winning the silver medal. I want to thank SAI, PCI (Paralympic Committee of India), & especially my mother for their support," he says pic.twitter.com/OlKhLSxkAC
— ANI (@ANI) August 30, 2021
ವಿಡಿಯೋದಲ್ಲಿ ವ್ಯಕ್ತಿಯೊಬ್ಬರ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ಬೆಳ್ಳಿ ಪದಕ ಗೆದ್ದ ಮೇಲೆ ಹೆಮ್ಮೆಯಾಗುತ್ತಿದೆ. ನಾನು SAI, PCI (ಭಾರತದ ಪ್ಯಾರಾಲಿಂಪಿಕ್ ಕಮಿಟಿ), ಮತ್ತು ವಿಶೇಷವಾಗಿ ನನ್ನ ತಾಯಿ ನನಗೆ ಬಹಳ ಬೆಂಬಲ ನೀಡಿದ್ದಾರೆ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಕೆಎಂಸಿಯಲ್ಲಿ ಅವರು ತರಬೇತಿ ಪಡೆಯುತ್ತಿದ್ದ ಸಮಯದಲ್ಲಿ ಅವರ ಸಾಮರ್ಥ್ಯವನ್ನು ಹಲವಾರು ತರಬೇತುದಾರರು ಗಮನಿಸಿ ಅವರಿಗೆ ಶೀಘ್ರದಲ್ಲೇ ಜವಹಾರ ಲಾಲ್ ನೆಹರು ಕ್ರೀಡಾಂಗಣದಲ್ಲಿ ಸತ್ಯಪಾಲ್ ಸಿಂಗ್ ಅವರ ಮಾರ್ಗದರ್ಶನ ಸಿಗುವಂತೆ ಅವಕಾಶ ಮಾಡಿಕೊಟ್ಟರು. ಕೆಲವು ವರ್ಷಗಳ ನಂತರ, ಅವರು ನವಲ್ ಸಿಂಗ್ ಅವರ ಬಳಿ ತರಬೇತಿ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ