Dinesh Karthik Tweet: ಟಿ 20 ವಿಶ್ವಕಪ್​ ಆಯ್ಕೆ ನಂತರ ದಿನೇಶ್​ ಕಾರ್ತಿಕ್ ಮಾಡಿದ ಟ್ವೀಟ್​ ವೈರಲ್, ಅಷ್ಟಕ್ಕೂ ಏನಂದ್ರು ಡಿಕೆ?

Dinesh Karthik Tweet: ಈಗಾಗಲೇ ಬಿಸಿಸಿಐ ಟಿ20 ವಿಶ್ವಕಪ್​ಗೆ ಭಾರತ ತಂಡವನ್ನು ಆಯ್ಕೆ ಮಾಡಿದೆ. ಈ ತಂಡದಲ್ಲಿ ಈ ಬಾರಿ ದಿನೇಶ್​​ ಕಾರ್ತಿಕ್​ ಆಯ್ಕೆ ಆಗಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್

  • Share this:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ICC T20 ವಿಶ್ವಕಪ್ 2022 ಗಾಗಿ 15 ಸದಸ್ಯರ ತಂಡವನ್ನು(India T20 World Cup Squad) ಘೋಷಿಸಿದೆ. ರೋಹಿತ್ ಶರ್ಮಾ (Rohit Sharma) ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್​ಗೆ ಈಗಾಗಲೇ ಭಾರತ ತಂಡ ಭರ್ಜರಿ ಸಿದ್ಧತೆಯಲ್ಲಿ ತೊಡಗಿದೆ. ಅಲ್ಲದೇ ಈ ಬಾರಿ ವಿಶ್ವಕಪ್​ ತಂಡದಲ್ಲಿ ದಿನೇಶ್​ ಕಾರ್ತಿಕ್​ ತಂಡಕ್ಕೆ ಆಯ್ಕೆ ಆಗಿದ್ದಾರೆ. ಅಲ್ಲದೇ ತಂಡಕ್ಕೆ ಆಯ್ಕೆ ಆದ ನಂತರ ಇದೀಗ ದಿನೇಶ್​ ಕಾರ್ತಿಕ್ (Dinesh Karthik)​ ಮಾಡಿರುವ ಟ್ವೀಟ್​ ಇದೀಗ ಸಖತ್​ ವೈರಲ್ ಆಗಿದೆ. ಅಷ್ಟಕ್ಕೂ ಡಿಕೆ ಏನು ಹೇಳಿದ್ದಾರೆ ಎಂದು ನೋಡಿ.

ಕನಸು ನನಸಾಯಿತೆಂದ ಡಿಕೆ:

ಹೌದು, ನಿನ್ನೆ ಬಿಸಿಸಿಐ ಟಿ20 ವಿಶ್ವಕಪ್​ಗೆ ಭಾರತ ತಂಡವನ್ನು ಆಯ್ಕೆ ಮಾಡಿದೆ. ಈ ತಂಡದಲ್ಲಿ ಈ ಬಾರಿ ದಿನೇಶ್​​ ಕಾರ್ತಿಕ್​ ಆಯ್ಕೆ ಆಗಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ 2007ರಲ್ಲಿ ನಡೆದ ಟಿ20 ವಿಶ್ವಕಪ್​ನ ಉದ್ಘಾಟನಾ ಟೂರ್ನಿಯಲ್ಲಿ ಭಾರತ ತಂಡದ ಭಾಗವಾಗಿದ್ದ ದಿನೇಶ್ ಕಾರ್ತಿಕ್ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದರಿಂದಾಗಿ ಅವರು ಮಾಡಿರುವ ಟ್ವೀಟ್​ ಇದೀಗ ಎಲ್ಲಡೆ ಸಖತ್ ವೈರಲ್ ಆಗಿದೆ.

ವಿಶ್ವಕಪ್​ಗೆ ಆಯ್ಕೆ ಆದ ನಂತರ ಡಿಕೆ  ಟ್ವೀಟ್​ ಮಾಡಿದ್ದು, ‘ಕನಸು ನನಸಾಗುತ್ತವೆ‘ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ಟ್ವೀಟ್​ ಎಲ್ಲಡೆ ಸಖತ್ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಕೋರುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಒಮ್ಮೆ, ಭಾರತ ತಂಡಕ್ಕೆ ನಾನು ಕಂಬ್ಯಾಕ್​ ಮಾಡಬೇಕು. ಅಲ್ಲದೇ ಟಿ20 ವಿಶ್ವಕಪ್​ಗೆ ಆಯ್ಕೆ ಆಗಿ ದೇಶಕ್ಕಾಗಿ ಆಡಿ ಕಪ್​ ಗೆಲ್ಲಬೇಕು ಎಂದು ಅವರು ಹೇಳಿಕೊಂಡಿದ್ದರು. ಇದಿಗ ಅವರ ಆಸೆ ಈಡೇರಿದೆ.

ಇದನ್ನೂ ಓದಿ: Veda Krishnamurthy: ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ವೇದಾ ಕೃಷ್ಣಮೂರ್ತಿ, ಲೇಡಿ ಕ್ರಿಕೆಟರ್‌ಗೆ ಬೋಲ್ಡ್ ಆದ ಕರುನಾಡ ಆಟಗಾರ!

ವಿಶ್ವಕಪ್​ನಿಂದ ಜಡ್ಡು ಔಟ್​:

ಏಷ್ಯಾ ಕಪ್​ 2022 ಟೂರ್ನಿಯಲ್ಲಿ ಗಾಯಗೊಂಡು ಅರ್ಧಕ್ಕೆ ಹೊರನಡೆದ ಟೀಂ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ ಅವರು ಇದೀಗ ಶಸ್ತ್ರ ಚಿಕಿತ್ಸೆಗೆ ಒಳಾಗಾಗಿದ್ದಾರೆ. ಇದೇ ಕಾರಣದಿಂದ ಅವರನ್ನು ಈ ಬಾರಿ ಐಸಿಸಿ ಟಿ20 ವಿಶ್ವಕಪ್​ ನಿಂದ ಕೈ ಬಿಡಲಾಗಿದೆ. ಅವರ ಸ್ಥಾನಕ್ಕೆ ಅಕ್ಷರ್​ ಪಟೇಲ್​ ಅವರು ಆಯ್ಕೆ ಆಗಿದ್ದಾರೆ. ಜಡ್ಡು ಅವರ ಅನುಪಸ್ಥಿತಿ ಈ ಬಾರಿ ಭಾರತ ತಂಡಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಮಾಜಿ ಆಟಗಾರರು ಹೇಳುತ್ತಿದ್ದಾರೆ.

ಇದನ್ನೂ ಓದಿ: Team India: ಆಸೀಸ್- ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ, ತಂಡದಿಂದ ಸ್ಟಾರ್​ ಆಲ್​ರೌಂಡರ್​ ಔಟ್​

 ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (WC), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ವೈ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಬಿ. ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಾಂಡ್-ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್
Published by:shrikrishna bhat
First published: