• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Dinesh Karthik: ಭಾರತ ತಂಡದಲ್ಲಿ ಉಮೇಶ್‌ ಸೈಡ್‌ಲೈನ್‌ ಆಟಗಾರ, ಹೀಗ್ಯಾಕ್ ಹೇಳಿದ್ರು ದಿನೇಶ್​ ಕಾರ್ತಿಕ್?

Dinesh Karthik: ಭಾರತ ತಂಡದಲ್ಲಿ ಉಮೇಶ್‌ ಸೈಡ್‌ಲೈನ್‌ ಆಟಗಾರ, ಹೀಗ್ಯಾಕ್ ಹೇಳಿದ್ರು ದಿನೇಶ್​ ಕಾರ್ತಿಕ್?

ದಿನೇಶ್​ ಕಾರ್ತಿಕ್

ದಿನೇಶ್​ ಕಾರ್ತಿಕ್

Dinesh Karthik About Umesh Yadav: ಬೌಲರ್‌ಗಳ ಬಗ್ಗೆ ಸಂದರ್ಶನದ ಒಂದರಲ್ಲಿ ಮಾತನಾಡಿದ ಭಾರತದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ವಿದರ್ಭ ಎಕ್ಸ್‌ಪ್ರೆಸ್ ಉಮೇಶ್‌ ಯಾದವ್‌ ಬಗ್ಗೆ ಮಾತನಾಡಿದ್ದಾರೆ. ಉಮೇಶ್‌ ಯಾದವ್ ಯಾವಾಗಲೂ ಭಾರತೀಯ ತಂಡದಲ್ಲಿ ಸೈಡ್‌ಲೈನ್‌ ಆದ ಆಟಗಾರ ಅಂತಾ ಹೇಳಿದ್ದಾರೆ.‌

ಮುಂದೆ ಓದಿ ...
  • Share this:

ಕ್ರಿಕೆಟ್‌ನಲ್ಲಿ (Cricket) ಫಾರ್ಮ್‌ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ ಎನ್ನಬಹುದು. ಶತಕ ವೀರ, ದಾಖಲೆಗಳ ಸರದಾರರಿಗೂ ಈ ಫಾರ್ಮ್‌ (Farm) ಸಂಕಷ್ಟ ತಪ್ಪಿದ್ದಲ್ಲ. ಒಮ್ಮೆ ಒಬ್ಬ ಆಟಗಾರನು ತನ್ನ ಭರ್ಜರಿ ಆಟವನ್ನು ಮುಂದುವರೆಸಲು ಸಾಧ್ಯವಾಗದಿದ್ದರೇ, ಪಂದ್ಯದಿಂದ (Game) ಗೇಟ್‌ಪಾಸ್‌ ಕೂಡ ಸಿಕ್ಕಿ ಬಿಡುತ್ತದೆ. ಅದರಲ್ಲೂ ಈ ಬೌಲಿಂಗ್‌ (Bowling) ವಿಭಾಗಕ್ಕೆ ಬಂದರೆ ಫಾರ್ಮ್‌ ಕಾಪಾಡಿಕೊಳ್ಳಲೇಬೇಕು.


ಭಾರತೀಯ ಕ್ರಿಕೆಟ್ ತಂಡದಲ್ಲಿ ಉಳಿಯುವುದು, ಸ್ಥಿರವಾಗಿ, ದೀರ್ಘಕಾಲದವರೆಗೆ, ವಿಶೇಷವಾಗಿ ಬೌಲರ್‌ಗಳಿಗೆ ಹೆಚ್ಚು ಕಷ್ಟಕರವಾಗಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಚಾಹಲ್‌, ಇಶಾಂತ್ ಶರ್ಮಾ, ಸಿರಾಜ್‌ನಂತಹ ಬೌಲರ್‌ ನಡುವೆ ಪ್ರಸ್ತುತ ಪೈಪೋಟಿಗಿಳಿದು ಫಾರ್ಮ್‌ ಕಾಪಾಡಿಕೊಳ್ಳಲೇಬೇಕಾದ ಅಗತ್ಯತೆ ಉಳಿದ ಬೌಲರ್‌ಗಳಿಗಿದೆ.


ವಿದರ್ಭ ಎಕ್ಸ್‌ಪ್ರೆಸ್ ಬಗ್ಗೆ ಏನಂದ್ರು ದಿನೇಶ್ ಕಾರ್ತಿಕ್‌ ?


ಹೀಗೆ ಬೌಲರ್‌ಗಳ ಬಗ್ಗೆ ಸಂದರ್ಶನದ ಒಂದರಲ್ಲಿ ಮಾತನಾಡಿದ ಭಾರತದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ವಿದರ್ಭ ಎಕ್ಸ್‌ಪ್ರೆಸ್ ಉಮೇಶ್‌ ಯಾದವ್‌ ಬಗ್ಗೆ ಮಾತನಾಡಿದ್ದಾರೆ. ಉಮೇಶ್‌ ಯಾದವ್ ಯಾವಾಗಲೂ ಭಾರತೀಯ ತಂಡದಲ್ಲಿ ಸೈಡ್‌ಲೈನ್‌ ಆದ ಆಟಗಾರ ಅಂತಾ ಹೇಳಿದ್ದಾರೆ.‌


"ಭಾರತೀಯ ತಂಡದಲ್ಲಿ ಉಮೇಶ್‌ ಸೈಡ್‌ಲೈನ್‌ ಆದ ಆಟಗಾರ"


ಭಾರತ ಕ್ರಿಕೆಟ್ ತಂಡದಲ್ಲಿ ವಿಶ್ವಶ್ರೇಷ್ಠ ಬೌಲಿಂಗ್ ಪಡೆ ಇದೆ. ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್ ಮತ್ತು ಈಗ ಮೊಹಮ್ಮದ್ ಸಿರಾಜ್ ತಂಡದಲ್ಲಿ ಛಾಪು ಮೂಡಿಸುತ್ತಿದ್ದಾರೆ. ಆದರೆ, ಈ ಆಯ್ಕೆಗಳ ಪಟ್ಟಿಯಲ್ಲಿ ಉಮೇಶ್ ಯಾದವ್ ಕಡೆಗಣಿಸಲ್ಪಟ್ಟ ಆಟಗಾರ ಎಂದು ದಿನೇಶ್‌ ಹೇಳಿದ್ದಾರೆ.


'ರೈಸ್ ಆಫ್ ನ್ಯೂ ಇಂಡಿಯಾ' ಕಾರ್ಯಕ್ರಮದಲ್ಲಿ ಕ್ರಿಕ್‌ಬಜ್‌ನೊಂದಿಗೆ ಮಾತನಾಡುತ್ತಾ, ಕಾರ್ತಿಕ್, ಭಾರತೀಯ ಕ್ರಿಕೆಟ್‌ನಲ್ಲಿ ಉಮೇಶ್ ಯಾದವ್ ಅವರ ಪ್ರಯಾಣವನ್ನು ನೆನಪಿಸಿಕೊಂಡರು.


ಉಮೇಶ್‌ ಯಾದವ್‌ ಕ್ರಿಕೆಟ್‌ ಲೋಕಕ್ಕೆ ಕಾಲಿಟ್ಟಾಗಿನಿಂದ ಹಲವು ದಾಖಲೆ, ಉತ್ತಮ ಪ್ರದರ್ಶನ ನೀಡಿ ಭಾರತೀಯ ತಂಡದ ಭರವಸೆ ಬೌಲರ್‌ ಆಗಿದ್ದಾರೆ. ಆದಾಗ್ಯೂ ಉಮೇಶ್ ಅವರನ್ನು ಕಡೆಗಣಿಸಲಾಗಿದೆ ಎಂದು ಕಾರ್ತಿಕ್‌ ಹೇಳಿದರು.
"ನೀವು ಉಮೇಶ್‌ ನಡೆದು ಬಂದ ಹಾದಿಯನ್ನು ಅರ್ಥಮಾಡಿಕೊಳ್ಳಬೇಕು. ಅವರು ಓರ್ವ ಕಲ್ಲಿದ್ದಲು ಗಣಿಗಾರನ ಮಗ, ಪೊಲೀಸ್ ಇಲಾಖೆಗೆ ಸೇರಬೇಕೆಂದು ಬಯಸಿದ್ದರು, ಆದರೆ ನಮ್ಮ ಅದೃಷ್ಟ ಅವರು ಭಾರತದ ತಂಡಕ್ಕೆ ಸೇರ್ಪಡೆಯಾದರು.


ವಿದರ್ಭ ತಂಡದ ಪರವಾಗಿ ಆಡುತ್ತಿದ್ದ ಉಮೇಶ್‌ 2010ರಲ್ಲಿ ಭಾರತದ ಪರ ಚೊಚ್ಚಲ ಪ್ರದರ್ಶನ ನೀಡಿದರು. ನಂತರದ ದಿನಗಳಲ್ಲಿ ಉಮೇಶ್‌ ಯಾದವ್‌ ತಂಡದಿಂದ ಕಡೆಗಣಿಸಲ್ಪಟ್ಟರು. ಇದು ನಿಜಕ್ಕೂ ಅವರಿಗೆ ಬೇಸರ ತಂದಿರುತ್ತದೆ" ಎಂದು ಕಾರ್ತಿಕ್‌ ಹೇಳಿದರು.


ಇದನ್ನೂ ಓದಿ: ಲೆಜೆಂಡ್ಸ್​​ಗಳನ್ನು ಒಟ್ಟಿಗೆ ನೋಡೋದೇ ಒಂದು ಮಜಾ, ಕ್ರಿಕೆಟ್​ ದಿಗ್ಗಜರ ಫೋಟೋ ವೈರಲ್!


"2022ರ ಐಪಿಎಲ್ ಹರಾಜಿನಲ್ಲಿ ಮೊದಲು ಆಯ್ಕೆ ಆಗಿರಲಿಲ್ಲ ಉಮೇಶ್"


ತಂಡದಲ್ಲಿ ಬುಮ್ರಾ ಮತ್ತು ಶಮಿಗೆ ಮೊದಲ ಆದ್ಯತೆ, ನಂತರ ಯಾವಾಗಲೂ ಇಶಾಂತ್ ಮತ್ತು ಉಮೇಶ್ ಇರುತ್ತಾರೆ. ಆದಾಗ್ಯೂ ಕೆಲವೊಮ್ಮೆ ಇಶಾಂತ್‌ ಮತ್ತು ಶಮಿಗೆ ಆದ್ಯತೆ ನೀಡಲಾಗಿದ್ದು, ಆ ಸ್ಥಾನದಲ್ಲಿ ಉಮೇಶ್‌ ಹಿಂದಿರುತ್ತಾರೆ.


ಉತ್ತಮ ಪ್ರದರ್ಶನಗಳನ್ನು ಪ್ರದರ್ಶಿಸಿದರೂ, ಉಮೇಶ್ ಅವರನ್ನು ಭಾರತ ತಂಡ ಅಥವಾ ಐಪಿಎಲ್ ಫ್ರಾಂಚೈಸಿಗಳು ಹೆಚ್ಚಾಗಿ ಕಡೆಗಣಿಸಿವೆ.


2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಉಮೇಶ್ ಯಾದವ್ ಮೊದಲ ಎರಡು ಸುತ್ತುಗಳಲ್ಲಿ ಮಾರಾಟವಾಗದ ಆಟಗಾರನಾಗಿ ಉಳಿದರು. ಆದರೆ ಕೆಕೆಆರ್ ಮೂರನೇ ಸುತ್ತಿನಲ್ಲಿ ಅವರನ್ನು ಖರೀದಿಸಿತು. ಈ ವೇಳೆ ಕೂಡ ಅವರಿಗೆ ನೋವಾಗಿತ್ತು ಎಂದು ದಿನೇಶ್‌ ಹೇಳಿದರು.


ಉಮೇಶ್‌ ಯಾದವ್‌ ತಂಡದಲ್ಲಿ ಯಾವಾಗಲೂ ಸೈಡ್‌ಲೈನ್‌ ಆಗುತ್ತಿದ್ದ ಆಟಗಾರ. ಈ ತಿರಸ್ಕಾರ ಅವರಿಗೆ ನೋವುಂಟು ಮಾಡಿತ್ತು. ಪಂದ್ಯದಲ್ಲಿ ಒಂದೆರೆಡು ವಿಕೆಟ್‌ ಪಡೆದರೂ ಸ್ಥಾನ ಗಟ್ಟಿಮಾಡಲು ಈ ಪ್ರದರ್ಶನ ಸಾಲುತ್ತಿರಲಿಲ್ಲ.


ಇದನ್ನೂ ಓದಿ: Virat Kohli ಬಗ್ಗೆ ರಿಕಿ ಪಾಂಟಿಂಗ್​ ಹೇಳಿದ್ದೇನು? ಇಲ್ಲಿದೆ ನೋಡಿ ಕುತೂಹಲಕಾರಿ ಸ್ಟೇಟ್ಮೆಂಟ್​


"ಐಪಿಎಲ್‌ ಹರಾಜಿನಲ್ಲಿ ಉಮೇಶ್‌ ಮಾರಾಟವಾಗದೇ ಇರುವುದು ಅತ್ಯಂತ ಕಷ್ಟಕರವಾದ ಸಮಯ ಎಂದು ನಾನು ಭಾವಿಸುತ್ತೇನೆ. ಅದು ಅವನಿಗೆ ತುಂಬಾ ನೋವುಂಟು ಮಾಡಿರಬೇಕು, ”ಎಂದು ದಿನೇಶ್‌ ಹೇಳಿದರು.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು