ಇಂಟರ್​​​​ನೆಟ್​​ನಲ್ಲಿ ಹರಿದಾಡುತ್ತಿದೆ ದಿನೇಶ್ ಕಾರ್ತಿಕ್​​ರ ಈ ವಿಡಿಯೋ..!

ಭಾರತದ ಸರಣಿ ಗೆಲ್ಲುವ ಕನಸು ಮೆಲ್ಬರ್ನ್​​ನ ಎಂಸಿಜಿ ಮೈದಾನದಲ್ಲಿ ಹರಿದ ಮಳೆ ನೀರಿನಲ್ಲೇ ಕೊಚ್ಚಿ ಹೋಗಿದೆ. ಆದರೆ, ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುವ ಮಧ್ಯೆ ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಅವರ ಸ್ಪೆಷಲ್ ವಿಡಿಯೋ ಒಂದು ಸದ್ಯ ಭಾರೀ ವೈರಲ್ ಆಗುತ್ತಿದೆ.

Vinay Bhat | news18
Updated:November 24, 2018, 12:27 PM IST
ಇಂಟರ್​​​​ನೆಟ್​​ನಲ್ಲಿ ಹರಿದಾಡುತ್ತಿದೆ ದಿನೇಶ್ ಕಾರ್ತಿಕ್​​ರ ಈ ವಿಡಿಯೋ..!
ಕ್ರಿಕೆಟ್ ವೆಬ್​ಸೈಟ್​​ವೊಂದಕ್ಕೆ ನೀಡಿದ ಇಂಟರ್​ವ್ಯೂನಲ್ಲಿ ದಿನೇಶ್ ಕಾರ್ತಿಕ್, ವಿಶ್ವಕಪ್ ಸೆಮಿಫೈನಲ್​ನಲ್ಲಿ ನನ್ನ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ ಬಗ್ಗೆ ಯಾವುದೇ ಮುನ್ಸೂಚನೆ ಇರಲಿಲ್ಲ.
  • News18
  • Last Updated: November 24, 2018, 12:27 PM IST
  • Share this:
ಮೆಲ್ಬರ್ನ್​​: ಕಾಂಗರೂ ನಾಡಲ್ಲಿ ಶುಭಾರಂಭ ಮಾಡಬೇಕು ಅಂದುಕೊಂಡಿದ್ದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು. ನಿನ್ನೆ ನಡೆದ ಎರಡನೇ ಟಿ-20 ಪಂದ್ಯವೂ ಮಳೆಗೆ ಆಹುತಿಯಾಗಿ ಪಂದ್ಯವನ್ನು ರದ್ದು ಮಾಡಲಾಯಿತು. ಇದರೊಂದಿಗೆ ಭಾರತದ ಸರಣಿ ಗೆಲ್ಲುವ ಕನಸು ಮೆಲ್ಬರ್ನ್​​ನ ಎಂಸಿಜಿ ಮೈದಾನದಲ್ಲಿ ಹರಿದ ಮಳೆ ನೀರಿನಲ್ಲೇ ಕೊಚ್ಚಿ ಹೋಗಿದೆ.

ಆದರೆ, ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುವ ಮಧ್ಯೆ ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಅವರ ಸ್ಪೆಷಲ್ ವಿಡಿಯೋ ಒಂದು ಸದ್ಯ ಭಾರೀ ವೈರಲ್ ಆಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಮಳೆಯ ಜೊತೆ ಜೋರಾಗಿ ಚಳಿಯಿದ್ದುದರಿಂದ ಆಟಗಾರರು ಮೈದಾನದಲ್ಲಿ ಸ್ವೆಟರ್ ತೊಟ್ಟಿದ್ದರು. ಆದರೆ, ದಿನೇಶ್ ಕಾರ್ತಿಕ್ ಅವರು ವಿಭಿನ್ನವಾಗಿ ಬೀನಿ ಕ್ಯಾಪ್ ಹಾಕಿದ್ದು, ಅದರಲ್ಲು ಬೀನಿ ಕ್ಯಾಪ್​​ನಲ್ಲಿ ಕಾರ್ತಿಕ್ ಹಿಡಿದ ಕ್ಯಾಚ್ ಸದ್ಯ ಇಂಟರ್​ನೆಟ್​ನಲ್ಲಿ ಹರಿದಾಡುತ್ತಿದೆ.

 


ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಮಾರ್ಕಸ್ ಸ್ಟೋಯಿನಿಸ್ ಅವರು ನಿನ್ನೆಯ ಪಂದ್ಯದಲ್ಲಿ ಕೇವಲ 4 ರನ್​ಗೆ ಇನ್ನಿಂಗ್ಸ್​ ಕೊನೆಗೊಳಿಸಿದರು. ಬುಮ್ರಾ ಬೌಲಿಂಗ್​​ನಲ್ಲಿ ದಿನೇಶ್ ಕಾರ್ತಿಕ್​ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಬಿಟ್ಟರು. ಬೀನಿ ಕ್ಯಾಪ್​​ನಲ್ಲಿ ದಿನೇಶ್ ಕಾರ್ತಿಕ್ ಹಿಡಿದ ಈ ಕ್ಯಾಚ್​ಗೆ ಸಾಕಷ್ಟು ಕಮೆಂಟ್​​ಗಳು ಬಂದಿವೆ. ಜೊತೆಗೆ ಬೀನಿ ಕ್ಯಾಪ್ ತೊಟ್ಟು ಕ್ರಿಕೆಟ್ ಆಡಿದವರ ಕೆಲವೇ ಕೆಲವು ಆಟಗಾರರ ಪೈಕಿ ಸದ್ಯ ದಿನೇಶ್ ಕಾರ್ತಿಕ್ ಕೂಡ ಒಬ್ಬರಾಗಿದ್ದಾರೆ. ಅಷ್ಟೆ ಅಲ್ಲದೆ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಬೀನಿ ಕ್ಯಾಪ್ ತೊಟ್ಟು ಕ್ಯಾಚ್ ಹಿಡಿದ ಮೊದಲ ಆಟಗಾರ ದಿನೇಶ್ ಕಾರ್ತಿಕ್ ಎಂದು ಹೇಳಲಾಗುತ್ತಿದೆ.

  19 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿದ್ದ ಆಸೀಸ್ ಟೀಂ, ಭಾರೀ ಒತ್ತಡಕ್ಕೆ ಸಿಲುಕಿತ್ತು. ಆದರೆ, ಇಂತಹ ವೇಳೆಯಲ್ಲೇ ಶುರುವಾಗಿದ್ದು ಮಳೆರಾಯನ ಆಟ. ಮೊದಲ ಪಂದ್ಯದಲ್ಲೂ ಟೀಂ ಇಂಡಿಯಾಕ್ಕೆ ಕಾಟ ಕೊಟ್ಟು ಸೋಲಿಗೆ ಪರೋಕ್ಷ ಕಾರಣವಾಗಿದ್ದ ಮಳೆರಾಯ,  2ನೇ ಪಂದ್ಯವನ್ನ ಅರ್ಧದಲ್ಲೇ ನಿಲ್ಲಿಸಿಬಿಟ್ಟ. ಎಷ್ಟು ಹೊತ್ತು ಕಾದರೂ ಮಳೆ ನಿಲ್ಲಲಿಲ್ಲ. ಪರಿಣಾಮ ಮ್ಯಾಚ್ ಅಫೀಶಿಯಲ್ಸ್ ಪಂದ್ಯವನ್ನ ಮೊಟಕುಗೊಳಿಸಿದರು. ಫಲಿತಾಂಶವಿಲ್ಲದೆ 2ನೇ ಟಿ-20 ಪಂದ್ಯ ಮುಕ್ತಾಯವಾಯಿತು.

First published: November 24, 2018, 11:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading