• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Dinesh Karthik: ಇಶಾನ್ ಕಿಶನ್ ದ್ವಿಶತಕಕ್ಕೆ ಕಾರ್ತಿಕ್ ಸೂಪರ್ ಕಾಮೆಂಟ್​, ODI ವಿಶ್ವಕಪ್​ ಕುರಿತು ಭವಿಷ್ಯ ನುಡಿದ RCB ಪ್ಲೇಯರ್​

Dinesh Karthik: ಇಶಾನ್ ಕಿಶನ್ ದ್ವಿಶತಕಕ್ಕೆ ಕಾರ್ತಿಕ್ ಸೂಪರ್ ಕಾಮೆಂಟ್​, ODI ವಿಶ್ವಕಪ್​ ಕುರಿತು ಭವಿಷ್ಯ ನುಡಿದ RCB ಪ್ಲೇಯರ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Dinesh Karthik: ಶನಿವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 227 ರನ್ ಗಳ ಭರ್ಜರಿ ಜಯ ಸಾಧಿಸುವಲ್ಲಿ ಇಶಾಣ್ ಕಿಶನ್ ಪಾತ್ರ ತುಂಬಾನೇ ಇತ್ತು. ಕಿಶನ್ ಅವರು 131 ಎಸೆತಗಳಲ್ಲಿ 210 ರನ್ ಗಳಿಸಿ ಮಿಂಚಿದರು.

  • Trending Desk
  • 5-MIN READ
  • Last Updated :
  • Share this:

ಕ್ರಿಕೆಟ್ ಎಂದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಹಬ್ಬ ಇದ್ದಂತೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಲೇ ಟ್ವೆಂಟಿ20 ವಿಶ್ವಕಪ್ (T20 World Cup) ಮುಗಿದಿದ್ದು, ಬಹುತೇಕ ದೇಶಗಳ ಕ್ರಿಕೆಟ್ ತಂಡಗಳು ತಮ್ಮ ಎಲ್ಲಾ ಗಮನವನ್ನು 2023 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ (ODI World Cup) ನತ್ತ ಹರಿಸಿವೆ. ಇಂದಿನಿಂದ ಸುಮಾರು ಒಂಭತ್ತು ತಿಂಗಳಲ್ಲಿ ಈ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಈಗ ಪ್ರಸ್ತುತ ಆಡುತ್ತಿರುವ ಪ್ರತಿಯೊಂದು ಪಂದ್ಯವು ಪ್ರತಿಯೊಬ್ಬ ಆಟಗಾರನಿಗೂ ವಿಶ್ವಕಪ್ ಗಾಗಿ ತಮ್ಮ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಒಂದು ಒಳ್ಳೆಯ ಅವಕಾಶವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಬಾಂಗ್ಲಾ ವಿರುದ್ಧ ದ್ವಿಶತಕ ಬಾರಿಸಿದ ಇಶಾನ್:


ಶನಿವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 227 ರನ್ ಗಳ ಭರ್ಜರಿ ಜಯ ಸಾಧಿಸುವಲ್ಲಿ ಇಶಾಣ್ ಕಿಶನ್ ಪಾತ್ರ ತುಂಬಾನೇ ಇತ್ತು. ಕಿಶನ್ ಅವರು 131 ಎಸೆತಗಳಲ್ಲಿ 210 ರನ್ ಗಳಿಸಿ ಮಿಂಚಿದರು. ಇವರ ಅಮೋಘವಾದ ಇನ್ನಿಂಗ್ಸ್ ನೋಡಿ ಏಕದಿನ ವಿಶ್ವಕಪ್ ಗಾಗಿ ಭಾರತದ ಸ್ಟಾರ್ ಆಟಗಾರನ ಭವಿಷ್ಯದ ಬಗ್ಗೆ ಭಾರತದ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಏನ್ ಹೇಳಿದ್ದಾರೆ ನೋಡಿ.


ಈ ನಾಲ್ವರಲ್ಲಿ ಯಾರು ಏಕದಿನ ವಿಶ್ವಕಪ್ ನಲ್ಲಿ ಓಪನ್ ಮಾಡ್ತಾರೆ?


ಇಶಾನ್ ಅವರ ಈ ಇನ್ನಿಂಗ್ಸ್ ನೋಡಿದ ನಂತರ, ಭಾರತದ ಏಕದಿನ ತಂಡದಲ್ಲಿ ಎರಡು ಆರಂಭಿಕ ಬ್ಯಾಟರ್ ಗಳ ಸ್ಥಾನಗಳಿಗೆ ನಾಲ್ವರು ಆಟಗಾರರು ಸ್ಪರ್ಧಿಸುತ್ತಿದ್ದಾರೆ ಎಂದಾಗಿದೆ. ಶಿಖರ್ ಧವನ್, ಶುಬ್ಮನ್ ಗಿಲ್ ಮತ್ತು ಇಶಾನ್ ಈ ಮೂವರಲ್ಲಿ ಯಾರು ರೋಹಿತ್ ಶರ್ಮಾ ಅವರೊಡನೆ ಓಪನ್ ಮಾಡುತ್ತಾರೆ ಎನ್ನುವುದು ಸವಾಲಾಗಿದೆ.


ಇದನ್ನೂ ಓದಿ: Arjun Tendulkar: ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಚಿನ್ ಪುತ್ರ, ಮೊದಲ ಪಂದ್ಯದಲ್ಲಿಯೇ ಭರ್ಜರಿ ಬ್ಯಾಟಿಂಗ್​


2019ರ ಬಳಿಕ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿರುವ 37ರ ಹರೆಯದ ಧವನ್, ಐಸಿಸಿ ಟೂರ್ನಮೆಂಟ್ ನಲ್ಲಿ ತಮ್ಮ ದಾಖಲೆಯಿಂದಾಗಿ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದಾರೆ. ಆದಾಗ್ಯೂ, ಬಾಂಗ್ಲಾದೇಶ ಸರಣಿಯಲ್ಲಿ ಅಷ್ಟೊಂದು ರನ್ ಗಳಿಸದ ಕಾರಣ, ಧವನ್ ಅವರನ್ನು ತವರಿನಲ್ಲಿ ನಡೆಯಲಿರುವ ಶ್ರೀಲಂಕಾ ಏಕದಿನ ಸರಣಿಗೆ ಆಯ್ಕೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆ ಇದೀಗ ಕಾರ್ತಿಕ್ ಅವರನ್ನು ಕಾಡುತ್ತಿದೆ.


ಧವನ್ ಅವರ ಮುಂದಿನ ಕರಿಯರ್ ಕಥೆ ಏನು?


ಶ್ರೀಲಂಕಾ ಸರಣಿಗೆ ಧವನ್ ತಂಡದಲ್ಲಿ ಆಯ್ಕೆಯಾ ಆದರೆ ಯಾವ ಸ್ಥಾನದಲ್ಲಿ ಆಡುತ್ತಾರೆ. ಅಲ್ಲದೇ  ಇಶಾನ್ ಕಿಶನ್ ಅವರ ಸ್ಥಾನ ಏನು? ಎಂಬ ಪ್ರಶ್ನೆ ಮೂಡುತ್ತಿದೆ. ಶುಬ್ಮನ್ ಗಿಲ್ ಉತ್ತಮವಾಗಿ ಆಡುತ್ತಿದ್ದಾರೆ. ರೋಹಿತ್ ಶರ್ಮಾ ಆಡಿದರೆ, ಈ ಉಳಿದ ಮೂವರಲ್ಲಿ ಯಾರಾದರೂ ತಂಡದಿಂದ ಹೊರಗುಳಿಯಬೇಕಾಗುತ್ತದೆ.


ಆ ಹೊರಗುಳಿಯುವ ಬ್ಯಾಟರ್ ಧವನ್ ಆಗಿರಬಹುದು. ಹೀಗಾದಲ್ಲಿ ಅದು ಅವರ ಒಂದು ಉತ್ತಮವಾದ ವೃತ್ತಿಜೀವನಕ್ಕೆ ದುಃಖಕರ ಅಂತ್ಯವಾಗಬಹುದು ಎಂದು ಕಾರ್ತಿಕ್  ಹೇಳಿದ್ದಾರೆ. ಗಿಲ್ ಅವರನ್ನು ಏಕದಿನ ತಂಡವು ಉಳಿಸಿಕೊಂಡಿದ್ದರೆ, ರೋಹಿತ್ ಅವರ ಹೆಬ್ಬೆರಳಿನ ಗಾಯದ ನಂತರ ಅವರು ಖಂಡಿತವಾಗಿಯೂ ಓಪನಿಂಗ್ ನಲ್ಲಿ ಆಡುತ್ತಾರೆ ಎಂದು ಕಾರ್ತಿಕ್ ಹೇಳಿದರು. ಆದರೆ ದಾಖಲೆಯ ದ್ವಿಶತಕವನ್ನು ಗಳಿಸುವ ಮೂಲಕ ಇಶಾನ್ ಅವರು ಎರಡು ಕೈಗಳಿಂದ ಅಪರೂಪದ ಅವಕಾಶವನ್ನು ಕಸಿದುಕೊಂಡಿದ್ದಕ್ಕಾಗಿ ಶ್ಲಾಘಿಸಿದರು. ದ್ವಿಶತಕ ಗಳಿಸಿದ್ದು, ಇಶಾನ್ ಅವರ ಆ ರನ್ ಗಳ ಹಸಿವನ್ನು ತೋರಿಸಿದೆ ಮತ್ತು ಈಗ ಅವರು ಆಯ್ಕೆಗಾರರಿಗೆ ತಾನು "ಎಲ್ಲ ರೀತಿಯಿಂದಲೂ ಆಡಲು ಸಿದ್ಧ, ಹಾಗಾಗಿ ನನ್ನನ್ನು ಗಮನಿಸಿ" ಎಂಬ ಸಂದೇಶವನ್ನು ರವಾನಿಸಿದ್ದಾರೆ ಅಂತ ಕಾರ್ತಿಕ್ ಹೇಳಿದರು.

Published by:shrikrishna bhat
First published: