• Home
  • »
  • News
  • »
  • sports
  • »
  • Online Cricket: ಡಿಜಿಟಲೀಕರಣದತ್ತ ಕ್ರಿಕೆಟ್ ಲೋಕ, ಪಾಕ್​ ವಿರುದ್ಧ ಬೇಕಿದ್ರೆ ಶತಕ ಸಿಡಿಸಬಹುದು ಕೊಹ್ಲಿ

Online Cricket: ಡಿಜಿಟಲೀಕರಣದತ್ತ ಕ್ರಿಕೆಟ್ ಲೋಕ, ಪಾಕ್​ ವಿರುದ್ಧ ಬೇಕಿದ್ರೆ ಶತಕ ಸಿಡಿಸಬಹುದು ಕೊಹ್ಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Online Cricket: ಆನ್‌ಲೈನ್ ಗೇಮಿಂಗ್‌ನಲ್ಲಿ ನೀವು ನಿಮ್ಮ ಮೆಚ್ಚಿನ ಆಟಗಾರರ ಪರವಾಗಿ ರನ್‌ಗಳನ್ನು ಪೇರಿಸಬಹುದು. ಎದುರಾಳಿ ಆಟಗಾರರನ್ನು ಸೋಲಿಸಬಹುದು. ಸಿಕ್ಸ್, ಫೋರ್‌ಗಳ ದಾಖಲೆಯ ಮಳೆಯನ್ನೇ ಸುರಿಸಬಹುದು.

  • Share this:

ಆಧುನಿಕತೆ ಎಂಬುದು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಪ್ರಭಾವ ಬೀರುತ್ತಿದೆ. ಮನರಂಜನಾ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಉದ್ಯೋಗ ಕ್ಷೇತ್ರದಲ್ಲಿ ಆಧುನಿಕತೆಯ ಗಾಳಿ (Air) ಬೀಸುತ್ತಿದೆ. ಪ್ರತಿಯೊಂದು ಡಿಜಿಟಲೀಕರಣದತ್ತ (Digital) ಮುಖಮಾಡುತ್ತಿದೆ. ನಿಮ್ಮ ಮೆಚ್ಚಿನ ಪಂದ್ಯಾಟಗಳನ್ನು ನೀವು ಮಿಸ್ ಮಾಡದೆಯೇ ಇಂದು ಯೂಟ್ಯೂಬ್‌ನಲ್ಲಿ (YouTube) ವೀಕ್ಷಿಸಬಹುದಾಗಿದೆ. ಹಾಗೆಯೇ ಇನ್ನಿತರ ಮನರಂಜನಾ ಆ್ಯಪ್‌ಗಳಲ್ಲಿ ಸಹ ವೀಕ್ಷಿಸಬಹುದಾಗಿದೆ.


ಆನ್‌ಲೈನ್ ಗೇಮಿಂಗ್​ನ ಹೊಸ ಪರ್ವ:


ಇದೇ ರೀತಿ ಆನ್‌ಲೈನ್ ಗೇಮಿಂಗ್ ಮೂಲಕ ಕ್ರಿಕೆಟ್‌ನಂತಹ ಮೆಚ್ಚಿನ ಆಟಗಳನ್ನು ನೀವೇ ಆಡಬಹುದಾಗಿದೆ. ಇದೆಲ್ಲವೂ ಆಧುನಿಕತೆಯ ಅಂಗವಾಗಿಯೇ ರೂಪುಗೊಂಡಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಬರುವ ಕ್ರಿಕೆಟ್ ಅಲರ್ಟ್‌ಗಳು, ಬಳಕೆದಾರರ ಮೆಚ್ಚಿನ ಯೂಟ್ಯೂಬರ್‌ಗಳು ಅಪ್‌ಲೋಡ್ ಮಾಡುವ ಕ್ರಿಕೆಟ್ ಕಂಟೆಂಟ್‌ಗಳು ಇದೆಲ್ಲವೂ ಬದಲಾವಣೆಯ ಹೊಸ ಪರ್ವ ಎಂದೆನಿಸಿದೆ.


ಆನ್‌ಲೈನ್ ಗೇಮಿಂಗ್‌ನಲ್ಲಿ ನೀವು ನಿಮ್ಮ ಮೆಚ್ಚಿನ ಆಟಗಾರರ ಪರವಾಗಿ ರನ್‌ಗಳನ್ನು ಪೇರಿಸಬಹುದು. ಎದುರಾಳಿ ಆಟಗಾರರನ್ನು ಸೋಲಿಸಬಹುದು. ಸಿಕ್ಸ್, ಫೋರ್‌ಗಳ ದಾಖಲೆಯ ಮಳೆಯನ್ನೇ ಸುರಿಸಬಹುದು.


ಹೊಸ ಕ್ರಾಂತಿಯನ್ನುಂಟು ಮಾಡುತ್ತಿರುವ ಗೇಮಿಂಗ್ ಉದ್ಯಮ:


ಗೇಮಿಂಗ್ ಉದ್ಯಮ ಇಂದು ಕ್ಷಿಪ್ರವಾಗಿ ಬೆಳೆಯುತ್ತಿರುವುದಕ್ಕೆ ಕಾರಣವೇ ಈ ಆನ್‌ಲೈನ್ ಗೇಮ್‌ಗಳಾಗಿವೆ. ಗೇಮಿಂಗ್ ರಚನೆಕಾರರು ವಿಡಿಯೋ ಗೇಮ್‌ಗಳನ್ನು ಆಟಗಳಲ್ಲಿ ಪರಿಚಯಿಸುತ್ತಿದ್ದಾರೆ ಇದರಿಂದ ಮೈದಾನದಲ್ಲಿ ನಿಜವಾದ ಕ್ರಿಕೆಟ್ ಪಟುಗಳೇ ಬಂದು ಆಟವಾಡುತ್ತಿದ್ದಾರೆ ಎಂಬ ಅನಿಸಿಕೆ ಉಂಟಾಗುತ್ತದೆ.


ಇದನ್ನೂ ಓದಿ: ICC Test Rankings: 120 ನಿಮಿಷದಲ್ಲಿ ಟೆಸ್ಟ್​ ನಂಬರ್​ 1 ಪಟ್ಟದಿಂದ ಕೆಳಗಿಳಿದ ಟೀಂ ಇಂಡಿಯಾ, ಐಸಿಸಿ ಮಹಾ ಎಡವಟ್ಟು!


ಒಟ್ಟಿನಲ್ಲಿ ಫ್ಯಾಂಟಸಿ ಗೇಮಿಂಗ್ ಜನಪ್ರಿಯ ಕ್ರಿಕೆಟ್ ಪಂದ್ಯಗಳನ್ನು ಹೊಸ ರೀತಿಯಲ್ಲಿ ರೂಪಿಸುತ್ತಿದೆ ಹಾಗೂ ಲೈವ್ ಸ್ಟ್ರೀಮಿಂಗ್ ಕ್ರಿಕೆಟ್ ಅಭಿಮಾನಿಗಳನ್ನು ಕ್ರಿಕೆಟ್ ಸುದ್ದಿಗಳೊಂದಿಗೆ ಬೆಸೆಯುವಂತೆ ಮಾಡುತ್ತಿದೆ.


ಆನ್‌ಲೈನ್ ಗೇಮಿಂಗ್ ಮನರಂಜನೆ:


ಆನ್‌ಲೈನ್ ಗೇಮಿಂಗ್ ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ. ನಿಮಗಿಷ್ಟ ಬಂದಂತೆ ಆಟಗಾರರು ಇಲ್ಲಿ ಬ್ಯಾಟ್ ಬೀಸುತ್ತಾರೆ ಎಷ್ಟು ಸ್ಕೋರ್ ಬೇಕಾದರೂ ಮಾಡುತ್ತಾರೆ. ಒಟ್ಟಿನಲ್ಲಿ ಫ್ಯಾಂಟಸಿ ಗೇಮಿಂಗ್ ಎಂದರೆ ನಿಮ್ಮ ಕಲ್ಪನೆಗೆ ತಕ್ಕಂತಹ ಆಟಗಳನ್ನಾಡಿ ಆನ್‌ಲೈನ್ ಗೇಮ್ ಅನ್ನು ಇನ್ನಷ್ಟು ಮನರಂಜಕವನ್ನಾಗಿ ಮಾರ್ಪಡಿಸಿಕೊಳ್ಳಬಹುದು.


ಡಿಜಿಟಲ್ ಯುಗದಲ್ಲಿ ಅನೇಕ ಮಾರ್ಪಾಡುಗಳು:


ಟಿವಿಯಲ್ಲಿ ರಿಕ್ಯಾಪ್‌ಗಳಲ್ಲಿ ನೋಡುತ್ತಿದ್ದ ಅದೆಷ್ಟೋ ಮ್ಯಾಚ್‌ಗಳು ಇಂದು ಯೂಟ್ಯೂಬ್‌ನಲ್ಲಿ ಒಂದು ಬಟನ್ ಒತ್ತಿದರೆ ಸಾಕು ಪೂರ್ಣವಾಗಿ ತೆರೆದುಕೊಳ್ಳುತ್ತದೆ. ಎಷ್ಟೇಷ್ಟೋ ಹಳೆಯ ಮ್ಯಾಚ್‌ಗಳನ್ನು ಕೂಡ ಯೂಟ್ಯೂಬ್‌ನಲ್ಲಿ ನೋಡಿ ಸವಿಯಬಹುದಾಗಿದೆ. ಅಂದಿಗೂ ಇಂದಿಗೂ ಡಿಜಿಟಲ್ ಯುಗದಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ.




ಡ್ರೀಮ್ 11 ನಂತರ ಗೇಮಿಂಗ್ ಅಪ್ಲಿಕೇಶನ್‌ಗಳು ಇಂತಹುದೇ ಫ್ಯಾಂಟಸಿ ಗೇಮ್‌ಗಳಿಗೆ ವೇದಿಕೆಯನ್ನೊದಗಿಸುತ್ತಿವೆ. ನಿಮ್ಮದೇ ಕಲ್ಪನೆಯ ತಂಡಗಳನ್ನು ಇಲ್ಲಿ ನಿರ್ಮಿಸಿಕೊಂಡು ನೈಜ ಪಂದ್ಯಾಟಗಳ ಸವಿಯನ್ನು ಕ್ರಿಕೆಟ್ ಅಭಿಮಾನಿ ಪಡೆದುಕೊಳ್ಳಬಹುದು.


ಮೆಚ್ಚಿನ ಕ್ರಿಕೆಟರ್‌ಗಳನ್ನು ವೀಕ್ಷಿಸಬಹುದು:


ಒಟ್ಟಿನಲ್ಲಿ ಟಿವಿಯಲ್ಲಿ ಲೈವ್ ಮ್ಯಾಚ್‌ಗಳನ್ನು ನೋಡುತ್ತಾ ಆನ್‌ಲೈನ್‌ನಲ್ಲಿ ವಿಡಿಯೋ ಕ್ರಿಕೆಟ್ ಗೇಮ್‌ಗಳನ್ನು ಆಡುತ್ತಾ ಯೂಟ್ಯೂಬ್‌ನಲ್ಲಿ ವರ್ಚುವಲ್ ಪಂದ್ಯಾಟಗಳನ್ನು ಇದೀಗ ಪ್ರತಿಯೊಬ್ಬರೂ ಆಡಬಹುದಾಗಿದೆ.


ಆಟಗಾರರ ಭಾವಚಿತ್ರಗಳನ್ನು ಗೋಡೆಗಳಿಗೆ ಅಂಟಿಸುತ್ತಾ ಒಂದೊಮ್ಮೆ ಇವರುಗಳನ್ನು ಭೇಟಿಯಾಗಬೇಕೆಂಬ ಇರಾದೆ ಹೊಂದಿದವರೆಲ್ಲಿ? ಇಂದು ಕ್ಷಣಮಾತ್ರದಲ್ಲಿ ಜಾಲತಾಣಗಳ ಮೂಲಕ ಅವರನ್ನು ಲೈವ್ ಆಗಿ ನೋಡುವ ವರ್ಗವೆಲ್ಲಿ? ಅಂದಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ ಹಾಗೂ ಸಾಕಷ್ಟು ಮಾರ್ಪಾಡು ನಡೆದಿದೆ ಎಂಬುದಕ್ಕೆ ಈ ಬದಲಾವಣೆಯೇ ಸಾಕ್ಷಿಯಾಗಿದೆ.


ಯೂಟ್ಯೂಬ್‌ಗಳಲ್ಲಿ ಲೈವ್ ಪಂದ್ಯಾಟಗಳು


ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಫೇಸ್‌ಬುಕ್‌ಗಳ ಮೂಲಕ ಆಟಗಾರರ ಸಂದರ್ಶನಗಳನ್ನು, ಲೈವ್ ಸಂಭಾಷಣೆಗಳನ್ನು ಇಂದು ಅಭಿಮಾನಿಗಳು ನೋಡಬಹುದಾಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಪಂದ್ಯಾಟಗಳ ಕ್ಷಣಕ್ಷಣದ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.


ಇಂದಿನ ದಿನಗಳಲ್ಲಿ ಯೂಟ್ಯೂಬ್‌ಗಳಲ್ಲಿನ ಲೈವ್ ಮ್ಯಾಚ್‌ಗಳಿಂದ ಅಭಿಮಾನಿಗಳೊಂದಿಗೆ ಇನ್ನಷ್ಟು ನಿಕಟವಾಗಿ ಸಂಪರ್ಕಪಡಲು ಸಾಧ್ಯವಾಗುತ್ತಿದೆ. ಕ್ರಿಕೆಟ್ ಹಾಗೂ ಇತರ ಪಂದ್ಯಾಟಗಳ ಮೇಲೆ ಅಭಿಮಾನಿಗಳು ಹೊಂದಿರುವ ಆಸಕ್ತಿ ಶ್ರದ್ಧೆ ಹಾಗೆಯೇ ಇದೆ ಆದರೆ ಅದನ್ನು ತೋರ್ಪಡಿಸುವ ವಿಧಾನ ಬೇರೆಯಾಗಿದೆ ಎಂಬುದು ಮಾಜಿ ಭಾರತೀಯ ಕ್ರಿಕೆಟ್ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯವಾಗಿದೆ. ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿರುವ ಆಕಾಶ್, ವಿಶ್ಲೇಷಕ ಮತ್ತು ವ್ಯಾಖ್ಯಾನಕಾರರಾಗಿ ಮನ್ನಣೆ ಗಳಿಸಿದ್ದಾರೆ.

First published: