VIRAL VIDEO: ಧೋನಿಯ ದೇಶಾಭಿಮಾನಕ್ಕೆ ಭಾರತೀಯರು ಫುಲ್ ಫಿದಾ..!

ಭಾನುವಾರ ನಡೆದ ಅಂತಿಮ ಟಿ20 ಪಂದ್ಯದ ವೇಳೆ ಅಭಿಮಾನಿಯೊಬ್ಬ ಭದ್ರತೆಯನ್ನು ಬೇಧಿಸಿ ಮೈದಾನಕ್ಕೆ ನುಗ್ಗಿದ್ದರು.

zahir | news18
Updated:February 11, 2019, 5:58 PM IST
VIRAL VIDEO: ಧೋನಿಯ ದೇಶಾಭಿಮಾನಕ್ಕೆ ಭಾರತೀಯರು ಫುಲ್ ಫಿದಾ..!
ಧೋನಿ
zahir | news18
Updated: February 11, 2019, 5:58 PM IST
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದೇಶಾಭಿಮಾನ ಮತ್ತೊಮ್ಮೆ ಸಾಬೀತಾಗಿದೆ. ನ್ಯೂಜಿಲೆಂಡ್​ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಧೋನಿ ರಾಷ್ಟ್ರ ಧ್ವಜಕ್ಕೆ ನೀಡಿದ ಗೌರವಕ್ಕೆ ಅಭಿಮಾನಿಗಳು ತಲೆಬಾಗಿದ್ದಾರೆ. ಕಿವೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತ 4 ರನ್​ಗಳ ವಿರೋಚಿತ ಸೋಲನುಭವಿಸಿತು. ಈ ಪಂದ್ಯದ ವೇಳೆ ಧೋನಿ ತ್ರಿವರ್ಣ ಧ್ವಜ ನೆಲಕ್ಕೆ ಬೀಳದಂತೆ ಎಚ್ಚರಿಕೆ ವಹಿಸಿದ್ದರು. ಧೋನಿಯ ಈ ನಡೆಗೆ ಈಗ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಭಾನುವಾರ ನಡೆದ ಅಂತಿಮ ಟಿ20 ಪಂದ್ಯದ ವೇಳೆ ಅಭಿಮಾನಿಯೊಬ್ಬ ಭದ್ರತೆಯನ್ನು ಬೇಧಿಸಿ ಮೈದಾನಕ್ಕೆ ನುಗ್ಗಿದ್ದರು. ಅಲ್ಲದೆ ಸೀದಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಳಿ ತೆರಳಿದ ಅಭಿಮಾನಿ, ತನ್ನ ನೆಚ್ಚಿನ ಆಟಗಾರನ ಪಾದ ನಮಸ್ಕಾರಕ್ಕೆ ಮುಂದಾಗಿದ್ದರು. ಅಭಿಮಾನವನ್ನು ಕಣ್ತುಂಬಿಕೊಳ್ಳುತ್ತಿದ್ದ ಧೋನಿ ಅದೇ ವೇಳೆ ಅಭಿಮಾನಿಯ ಕೈಯಲ್ಲಿದ್ದ ಭಾರತ ಧ್ವಜವನ್ನು ಗಮನಿಸಿದ್ದಾರೆ.

ದೇಶದ ಧ್ವಜದೊಂದಿಗೆ ಕಾಲಿಗೆರುಗುತ್ತಿದ್ದ ಅಭಿಮಾನಿಯ ಕೈಯಿಂದ ತ್ರಿವರ್ಣ ಧ್ವಜವನ್ನು ಕಿತ್ತು, ರಾಷ್ಟ್ರೀಯ ಪತಾಕೆಗೆ ಚ್ಯುತಿ ಬರದಂತೆ ಧೋನಿ ನೋಡಿಕೊಂಡರು. ಧೋನಿಯ ಈ ನಡೆಗೆ ಇದೀಗ ಟ್ವಿಟರ್​ನಲ್ಲಿ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ರಾಷ್ಟ್ರ ಧ್ವಜಕ್ಕೆ ಗೌರವ ನೀಡಿದ ಮಹಿಯ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಹೇಂದ್ರ ಸಿಂಗ್​ ಧೋನಿ ಕ್ಷೀಪ್ರ ಸ್ಟಪಿಂಗ್​ನಲ್ಲಿ ಮಾತ್ರವಲ್ಲ, ದೇಶಕ್ಕೆ ಗೌರವ ಕೊಡುವುದರಲ್ಲೂ ಸಖತ್ ಸ್ಪೀಡ್​ ಎಂಬ ಮಾತುಗಳು ಕೇಳಿ ಬಂದಿದೆ.


ಇನ್ನು ಕೆಲವರು ಮಹೇಂದ್ರ ಸಿಂಗ್ ಧೋನಿಯ ಈ ಗೌರವಯುತ ನಡೆಯು ಕಿವೀಸ್​ ವಿರುದ್ಧದ ಸೋಲಿನ ಕಹಿಯನ್ನು ಮರೆಸಿದೆ ಎಂದಿದ್ದಾರೆ. ಒಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ಪ್ರತಿ ಬಾರಿಯು ತನೇಕೆ ಲೆಜೆಂಡ್​ ಆಟಗಾರ ಎಂಬುದನ್ನು ನಿರೂಪಿಸುತ್ತಲೇ ಬರುತ್ತಿರುವುದು ಗೌರವದ ವಿಷಯ.

Loading...


First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...