ಧೋನಿ ನಾಯಕತ್ವದ ಬಗ್ಗೆ ಟೀಕೆ: ಕುತೂಹಲ ಹೆಚ್ಚಿಸಿದೆ ಕೂಲ್ ಕ್ಯಾಪ್ಟನ್ ನಡೆ

2012ರ ಸರಣಿಯೊಂದರಲ್ಲಿ ಸೆಹ್ವಾಗ್ ಹಾಗೂ ಸಚಿನ್​ರೊಂದಿಗೆ ನನ್ನನ್ನೂ ಕೂಡ ಆಡಿಸಲು ಸಾಧ್ಯವಿಲ್ಲ ಎಂದು ತಂಡದ ನಾಯಕತ್ವ ವಹಿಸಿಕೊಂಡಿದ್ದ ಧೋನಿ ಹೇಳಿದ್ದರು- ಗೌತಮ್ ಗಂಭೀರ್

Vinay Bhat | news18
Updated:December 13, 2018, 6:25 PM IST
ಧೋನಿ ನಾಯಕತ್ವದ ಬಗ್ಗೆ ಟೀಕೆ: ಕುತೂಹಲ ಹೆಚ್ಚಿಸಿದೆ ಕೂಲ್ ಕ್ಯಾಪ್ಟನ್ ನಡೆ
ಗೌತಮ್ ಗಂಭೀರ್ ಹಾಗೂ ಎಂ. ಎಸ್. ಧೋನಿ
  • News18
  • Last Updated: December 13, 2018, 6:25 PM IST
  • Share this:
ಇತ್ತೀಚೆಗಷ್ಟೆ ಎಲ್ಲ ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ ಗೌತಮ್ ಗಂಭೀರ್ ಅವರು ಎಂ. ಎಸ್. ಧೋನಿ ನಾಯಕತ್ವದ ಬಗ್ಗೆ ಟೀಕಿಸಿದ್ದರು.

'2012ರ ಸರಣಿಯೊಂದರಲ್ಲಿ ಸೆಹ್ವಾಗ್ ಹಾಗೂ ಸಚಿನ್​ರೊಂದಿಗೆ ನನ್ನನ್ನೂ ಕೂಡ ಆಡಿಸಲು ಸಾಧ್ಯವಿಲ್ಲ ಎಂದು ತಂಡದ ನಾಯಕತ್ವ ವಹಿಸಿಕೊಂಡಿದ್ದ ಧೋನಿ ಹೇಳಿದ್ದರು. 2015ರ ವಿಶ್ವಕಪ್​​​ನಲ್ಲಿ ಯುವ ಆಟಗಾರರು ಕಣಕ್ಕಿಳಿಯಬೇಕು, ಹೀಗಾಗಿ ಈ ನಿರ್ಧಾರ ಕೈಕೊಂಡಿದ್ದರು. ಆದರೆ ಈ ಸರಣಿಯಲ್ಲಿ ತಂಡ ಗೆಲುವಿಗಾಗಿ ಪರದಾಡುವಂತಹ ಸಂದರ್ಭ ಬಂದಿದ್ದರಿಂದ ಮತ್ತೆ 3ನೇ ಕ್ರಮಾಂಕದಲ್ಲಿ ನನ್ನನ್ನು ಆಡಲು ತಿಳಿಸಿದ್ದರು' ಎಂದು ಧೋನಿ ನಾಯಕತ್ವದ ನಿರ್ಧಾರದ ಬಗ್ಗೆ ಟೀಕಿಸಿದ್ದರು.

ಇಷ್ಟೆ ಅಲ್ಲದೆ ಮೊನ್ನೆಯಷ್ಟೆ ಸಂದರ್ಶನವೊಂದರಲ್ಲಿ 'ನಿಮ್ಮ ಪ್ರಕಾರ ಭಾರತ ಕ್ರಿಕೆಟ್ ತಂಡದಲ್ಲಿ ಶ್ರೇಷ್ಠ ನಾಯಕ ಯಾರು?' ಎಂಬ ಪ್ರಶ್ನೆ ಗಂಭೀರ್​ಗೆ ಕೇಳಲಾಗಿತ್ತು. ಇದರಲ್ಲಿ ಗಂಭೀರ್ ಅವರು ಧೋನಿ, ಕೊಹ್ಲಿ ಅಥವಾ ಗಂಗೂಲಿ ಹೆಸರು ತೆಗೆದುಕೊಳ್ಳದೆ ಅನಿಲ್ ಕುಂಬ್ಳೆ ನನ್ನ ಮೆಚ್ಚಿನ ನಾಯಕ ಎಂದು ಹೇಳಿದ್ದರು. ಕ್ಯಾಪ್ಟನ್ ಮತ್ತು ಲೀಡರ್ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ನನ್ನ ಕ್ರಿಕೆಟ್ ಜೀವನದಲ್ಲಿ ನಾನು ಅನೇಕ ನಾಯಕರ ಅಡಿಯಲ್ಲಿ ಆಟವಾಡಿದ್ದೇನು. ಆದರೆ, ನಾಯಕನಾಗಿ ನನಗೆ ಇಷ್ಟವಾದ ಹಾಗೂ ಪ್ರಾಮಾಣಿಕ ವ್ಯಕ್ತಿ ಎಂದು ಅನಿಸಿದ್ದು ಕುಂಬ್ಳೆ ಮಾತ್ರ ಎಂದಿದ್ದಾರೆ.

ಇದನ್ನೂ ಓದಿ: ಗಂಗೂಲಿ ಅಲ್ಲ, ಧೋನಿ-ಕೊಹ್ಲಿಯು ಅಲ್ಲ: ಭಾರತದ ಬೆಸ್ಟ್​​ ಕ್ಯಾಪ್ಟನ್ ಪ್ರಶ್ನೆಗೆ 'ಗಂಭೀರ್' ಏನಂದ್ರು..?

ಇಷ್ಟೆಲ್ಲಾ ಆದರು ಧೋನಿ ಮಾತ್ರ ಈವರೆಗೆ ಗಂಭೀರ್ ವಿಚಾರವಾಗಿ ಒಂದು ಮಾತುಕೂಡ ಆಡಿಲ್ಲ. ಅಲ್ಲದೆ ಗಂಭೀರ್ ನಿವೃತ್ತಿ ಘೋಷಿಸಿದ ಬಳಿಕ ಅನೇಕ ಕ್ರಿಕೆಟಿಗರು ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದರು. ಆದರೆ, ಧೋನಿ ಮಾತ್ರ ಗಂಭೀರ್ ವಿಚಾರವಾಗಿ ಈವರೆಗೆ ಯಾವುದೆ ಹೇಳಿಕೆ ನೀಡಿಲ್ಲ. 2007ರ ಚೊಚ್ಚಲ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್​​ ವಿಜೇತ ತಂಡದಲ್ಲಿ ಗಂಭೀರ್ ಕೂಡ ಪ್ರಮುಖ ಪಾತ್ರವಹಿಸಿದ್ದರು. ಈ ಸಂದರ್ಭ ತಂಡದ ನಾಯಕತ್ವ ಸ್ಥಾನದಲ್ಲಿದ್ದಿದ್ದು  ಧೋನಿ. ಇಷ್ಟಿದ್ದರು ಧೋನಿ ಮೌನ ಮುರಿಯದಿರುವುದು ಸದ್ಯ ಹೆಚ್ಚಿನ ಗೊಂದಲಕ್ಕೆ ಕಾರಣವಾಗಿದೆ.

First published:December 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ