MS Dhoni: ಮತ್ತೆ ಟೀಂ ಇಂಡಿಯಾಗೆ ಕಂಬ್ಯಾಕ್​ ಮಾಡ್ತಾರಾ ಧೋನಿ? BCCI ಮಾಸ್ಟರ್ ಪ್ಲಾನ್

ಏಷ್ಯಾ ಕಪ್​ 2022 ಟೂರ್ನಿಗೆ ಭಾರತ ತಂಡದ ಕೋಚ್​ ಆಘಿ ಆಯ್ಕೆ ಆಗಿದ್ದ ರಾಹುಲ್ ದ್ರಾವಿಡ್​ ಅವರಿಗೆ ಕೊರೋನಾ ದೃಢಪಟ್ಟಿದೆ. ಹೀಗಾಗಿ ಅವರ ಸ್ಥಾನಕ್ಕೆ ಯಾರು ಆಯ್ಕೆ ಆಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.

ಧೋನಿ

ಧೋನಿ

  • Share this:
ಏಷ್ಯಾ ಕಪ್ 2022 (Asia Cup 2022) ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಆಗಸ್ಟ್ 27ರಿಂದ ಏಷ್ಯಾಕಪ್​ 2022 ಪ್ರಾರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ಎದುರು ಆಡಲಿದ್ದು, ಈ ಪಂದ್ಯದ ಮೇಲೆ ಎಲ್ಲರಲ್ಲಿಯೂ ಹೆಚ್ಚಿನ ನಿರೀಕ್ಷೆಯಿದೆ. ಈಗಾಗಲೇ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ರೋಹಿತ್​ ಶರ್ಮಾ (Rohit Sharma) ಅವರನ್ನು ತಂಡದ ನಾಯಕರನ್ನಾಗಿ ಮತ್ತು ಕೆಎಲ್​ ರಾಹುಲ್ (KL Rahul)​ ಅವರನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಿದೆ. ಅಲ್ಲದೇ ಭಾರತ ತಂಡದ ಪ್ರಮುಖ ಕೋಚ್​ ಆಗಿದ್ದ ರಾಹುಲ್ ದ್ರಾವಿಡ್​ (Rahul Dravid) ಅವರಿಗೆ ಇದೀಗ ಕೋವಿಡ್-19 (Covid 19) ಪಾಸಿಟಿವ್ ದೃಢಪಟ್ಟಿದ್ದು, ಮುಂಬರುವ ಏಷ್ಯಾ ಕಪ್ 2022ರಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನವಾಗಿದೆ. ಹೀಗಾಗಿ ಅವರ ಸ್ಥಾನಕ್ಕೆ ಯಾರು ಆಯ್ಕೆ ಆಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.

ಟೀಂ ಇಂಡಿಯಾ ಜೊತೆ ಕೈ ಜೋಡಿಸುತ್ತಾರಾ ಧೋನಿ?:

ಹೌದು, ಏಷ್ಯಾಕಪ್​ ಒಂದು ಮಹತ್ವದ ಟೂರ್ನಿಯಾಗಿದ್ದು, ಈ ಸರಣಿಗಾಗಿ ರಾಹುಲ್ ದ್ರಾವಿಡ್ ಕೋಚ್​ ಆಗಿ ಆಯ್ಕೆ ಆಗಿದ್ದರು. ಆದರೆ ಅವರಿಗೆ ಕೊರೋನಾ ಆದ ಕಾರಣ ಅವರು ಇದೀಗ ಏಷ್ಯಾಕಪ್​ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನವಾಗಿದೆ. ಹೀಗಾಗಿ ಅವರ ಬದಲಿಗೆ ತಂಡದ ಮುಖ್ಯ ಕೋಚ್​ ಆಗಿ ಬಿಸಿಸಿಐ ಯಾರನ್ನು ಆಯ್ಕೆ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಕಾಡುತ್ತಿದೆ. ಇದರ ನಡುವೆ ಸದ್ಯ ಮುಗಿದಿರುವ ಜಿಂಬಾಬ್ವೆ ಸರಣಿಯಿಂದ ದ್ರಾವಿಡ್ ಹೊರಗುಳಿದಿದಕ್ಕೆ ವಿವಿಎಸ್​ ಲಕ್ಷ್ಮಣ್ ತಂಡದ ಕೋಚ್​ ಆಗಿದ್ದರು. ಇದೀಗ ಏಷ್ಯಾಕಪ್​ಗೂ ಅವರೇ ಕೋಚ್​ ಆಗಲಿದ್ದಾರೆ ಎನ್ನಲಾಗುತ್ತಿದೆ.

ಆದರೆ ಇಂತಹ ಮಹತ್ವದ ಟೂರ್ನಿಗೆ ಕೇವಲ ವಿವಿಎಸ್​ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡುವುದು ಅನುಮಾನವಾಗಿದೆ. ಹೀಗಾಗಿ ಮಹೇಂದ್ರ ಸಿಂಗ್​ ಧೋನಿ ಅವರನ್ನು ಪ್ರಮುಖ ಕೋಚ್​ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಟಿ20 ವಿಶ್ವಕಪ್​ ವೇಳೆ ಧೋನಿ ತಂಡದ ಮೆಂಟರ್​ ಆಗಿ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ: Rahul Dravid: ಟೀಂ ಇಂಡಿಯಾಗೆ ಬಿಗ್​ ಶಾಕ್, ಏಷ್ಯಾ ಕಪ್‌ಗೆ ರಾಹುಲ್ ದ್ರಾವಿಡ್ ಅನುಮಾನ?

ದುಬೈಗೆ ಹೋಗಲಿದ್ದಾರಾ ಎಂಎಸ್​ಡಿ?:

ದ್ರಾವಿಡ್​ ಇಲ್ಲದ ಕಾರಣ ಮಹತ್ವದ ಟೂರ್ನಿಗಾಗಿ ಬಿಸಿಸಿಐ ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಅವರನ್ನು ದುಬೈಗೆ ಕಳುಹಿಸುವ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇನ್ನು, ಈಗಾಗಲೇ ಧೋನಿ ಇಂತಹ ಅನೇಕ ಸರಣಿಗಳಲ್ಲಿ ಯಶಸ್ವಿಯಾಗಿ ನಾಯಕತ್ವವನ್ನು ನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಅಲ್ಲದೇ ಈ ಮೊದಲು ಅವರು ಟಿ20 ವಿಶ್ವಕಪ್​ ವೇಳೆ ಭಾರತ ತಂಡದ ಮೆಂಟರ್​ ಆಗಿ ಸಹ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಇದೀಗ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಬಿಸಿಸಿಐ ಚಿಂತಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: India vs Zimbabwe: ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದು ಭರ್ಜರಿ ಡ್ಯಾನ್ಸ್ ಮಾಡಿದ ಟೀಂ ಇಂಡಿಯಾ, ವಿಡಿಯೋ ವೈರಲ್

ಏಷ್ಯಾ ಕಪ್​ 2022 ಭಾರತ​ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
Published by:shrikrishna bhat
First published: