ಸಿಂಗಾಪುರದಲ್ಲಿ ಆರಂಭವಾಗಿದೆ ಧೋನಿ ಕ್ರಿಕೆಟ್ ಅಕಾಡೆಮಿ

news18
Updated:January 22, 2018, 8:11 PM IST
ಸಿಂಗಾಪುರದಲ್ಲಿ ಆರಂಭವಾಗಿದೆ ಧೋನಿ ಕ್ರಿಕೆಟ್ ಅಕಾಡೆಮಿ
news18
Updated: January 22, 2018, 8:11 PM IST
ನ್ಯೂಸ್ 18 ಕನ್ನಡ
ನವದೆಹಲಿ (ಜ.22) : ಟೀಮ್ ಇಂಡಿಯಾ ಮಾಜಿ ನಾಯಕ, ಕೂಲ್​ ಪ್ಲೇಯರ್​​​ ಮಹೇಂದ್ರ ಸಿಂಗ್ ಧೋನಿ ಸಿಂಗಾಪುರ್​​ನಲ್ಲಿ ಕ್ರಿಕೆಟ್​ ಅಕಾಡೆಮಿ ತೆರೆದಿದ್ದಾರೆ.

ಕಳೆದ ವರ್ಷವಷ್ಟೇ ದುಬೈನಲ್ಲಿ ಕ್ರಿಕೆಟ್​ ಅಕಾಡೆಮಿಯನ್ನ ಓಪನ್ ಮಾಡಿದ್ದ ದೋನಿ ಇದೀಗ ಸಿಂಗಾಪುರ್​​ನಲ್ಲೂ ತನ್ನ 2ನೇ ಕ್ರಿಕೆಟ್ ಅಕಾಡೆಮಿಯನ್ನ ಪ್ರಾರಂಭಿಸಿದ್ದಾರೆ.

ಸಿಂಗಾಪುರ್​ನ ಸೈಂಟ್ ಪ್ಯಾಟ್ರಿಕ್​ ಸ್ಕೂಲ್​​​ನಲ್ಲಿ ತನ್ನ ಹೊಸ ಹೆಜ್ಜೆ ಇಟ್ಟಿರುವ ಮಹೇಂದ್ರ ಸಿಂಗ್ ದೋನಿ ರಿಬ್ಬನ್ ಕಟ್ ಮಾಡುವ ಮೂಲಕ ತನ್ನ ಅಕಾಡೆಮಿಯನ್ನ ಲೋಕಾರ್ಪಣೆಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿನ ಮಕ್ಕಳ ಜೊತೆ ಕಾಲ ಕಳೆಯೋದರ ಜೊತೆಗೆ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಟೀಮ್ ಇಂಡಿಯಾವನ್ನ ಬೆಂಬಲಿಸಿದ್ದಾರೆ.

ಭಾರತ-ದಕ್ಷಿಣ ಆಪ್ರಿಕಾ ಟೆಸ್ಟ್ ಸರಣಿ ಮುಗಿದ ಬಳಿಕ ದೋನಿ ನಿಗದಿತ ಓವರ್​​ಗಳ ಕ್ರಿಕೆಟ್​​​​​ ಆಡಲು ಟೀಮ್ ಇಂಡಿಯಾವನ್ನ ಸೇರಿಕೊಳ್ಳಲಿದ್ದಾರೆ.
First published:January 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ