ಡೆನ್ಮಾರ್ಕ್ನ ಸ್ಟಾರ್ ಆಟಗಾರ ಕ್ರಿಶ್ಚಿಯನ್ ಎರಿಕ್ಸೆನ್ ಶನಿವಾರ ಆಟದ ಮಧ್ಯೆಯೇ ಮೈದಾನದಲ್ಲಿ ಕುಸಿದು ಬಿದ್ದ ಆಘಾತಕಾರಿ ಘಟನೆ ನಡೆದಿತ್ತು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಯೂರೋ 2020 ಡೆನ್ಮಾರ್ಕ್-ಫಿನ್ಲ್ಯಾಂಡ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿತ್ತು. ಕೂಡಲೇ ಮೆಡಿಕಲ್ ಎಮೆರ್ಜೆನ್ಸಿ ಘೋಷಣೆ ಮಾಡಲಾಗಿತ್ತು. 2 ಗಂಟೆಗಳ ವಿರಾಮದ ಬಳಿಕ ಮತ್ತೆ ಪಂದ್ಯವನ್ನು ಆಡಲಾಗಿತ್ತು.
ಕೋಪನ್ ಹ್ಯಾಗನ್ನಲ್ಲಿರುವ ಟೆಲಿಯಾ ಪಾರ್ಕನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಯೂರೋ 2020 ಮೂರನೇ ಪಂದ್ಯದಲ್ಲಿ ಡೆನ್ಮಾರ್ಕ್ ಮಿಡ್ಫೀಲ್ಡರ್ ಕ್ರಿಶ್ಚಿಯನ್ ಎರಿಕ್ಸೆನ್ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪಂದ್ಯದ ಮೊದಲಾರ್ಧಕ್ಕೆ ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಾಗ 29ರ ಹರೆಯದ ಕ್ರಿಶ್ಚಿಯನ್ ಮೈದಾನದಲ್ಲೇ ಕುಸಿದು ಬಿದ್ದರು. ಕೂಡಲೇ ಅಲ್ಲೇ ಪ್ರಥಮ ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ಸೇರಿಸಲಾಯಿತು.
42 ನಿಮಿಷಗಳ ಪಂದ್ಯದಲ್ಲಿ ಎರಿಕ್ಸೆನ್ ಚೆಂಡನ್ನು ಹಿಡಿಯಲು ಧಾವಿಸಿದಾಗ, ಅವರ ಮಂಡಿಗೆ ಚೆಂಡು ಬಡಿಯಿತು. ಕೂಡಲೇ ಅವರು ನೆಲದ ಮೇಲೆ ಕುಸಿದು ಬಿದ್ದರು. ಕೂಡಲೇ ತಂಡದ ಸದಸ್ಯರಾದ ಮಾರ್ಟಿನ್ ಬ್ರೈತ್ವೇಟ್ ಮತ್ತು ಥಾಮಸ್ ಡೆಲಾನೆಯ್ ಎರಿಕ್ಸೆನ್ ಬಳಿ ಬಂದು ಪ್ರಥಮ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದರು. ರೆಫರಿ ಆಂಟೋನಿ ಟಾಯ್ಲರ್ ತಕ್ಷಣ ಮೆಡಿಕಲ್ ಲಭ್ಯತೆ ಕೊಡುವಂತೆ ಸೂಚನೆ ನೀಡಿದರು.
ಆಟದ ಮೈದಾನದಲ್ಲಿ ಕುಸಿದು ಬಿದ್ದ ಕ್ರಿಶ್ಚಿಯನ್ ಸ್ವಲ್ಪ ಸಮಯದವರೆಗೆ ಚೂರೂ ಅಲುಗಾಡಲೇ ಇಲ್ಲ. ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಸುಮಾರು 16 ಸಾವಿರ ಫುಟ್ಬಾಲ್ ಅಭಿಮಾನಿಗಳು ಈ ದೃಶ್ಯ ನೋಡಿ ಆಘಾತಗೊಂಡರು. ಎರಿಕ್ಸೆನ್ ಶೀಘ್ರ ಗುಣಮುಖರಾಗಲೆಂದು ಕ್ರೀಡಾ ಪ್ರೇಮಿಗಳು ಪ್ರಾರ್ಥಿಸುತ್ತಿದ್ದಾರೆ. ಮೂಲಗಳ ಪ್ರಕಾರ ಕ್ರಿಶ್ಚಿಯನ್ಗೆ ಪ್ರಜ್ಞೆ ಬಂದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
ಕ್ರಿಶ್ಚಿಯನ್ ಎರಿಕ್ಸೆನ್ಗೆ ಪ್ರಜ್ಞೆ ಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ತಪಾಸಣೆಗಳನ್ನು ನಡೆಸಲಾಗಿದೆ ಎಂದು ರಿಗ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ