Pro Kabaddi: ದಬಾಂಗ್ ಡೆಲ್ಲಿ ವಿರುದ್ಧ ಸೋತ ಬೆಂಗಳೂರು ಬುಲ್ಸ್; ಫೈನಲ್ ಕನಸು ಭಗ್ನ

Bengaluru Bulls: ಕಬ್ಬಡಿ ಲೀಗ್ ನಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದ ದಬಾಂಗ್ ಡೆಲ್ಲಿ ಹಾಗೂ ಪಾಟ್ನಾ ಪೈರೇಟ್ಸ್ ಅಂತಿಮವಾಗಿ ಫೈನಲ್ ಪ್ರವೇಶಿಸಿವೆ.. ಶುಕ್ರವಾರ ನಡೆಯುವ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಹಾಗೂ ಪಾಟ್ನಾ ಪೈರೇಟ್ಸ್ ಪ್ರೊ ಕಬಡ್ಡಿ ಸೀಸನ್ 8ರ ಪ್ರಶಸ್ತಿ ಗೆಲ್ಲಲು ಕಾದಾಟ ನಡೆಸಲಿದೆ

ದಬಾಂಗ್ ಡೆಲ್ಲಿ-ಬೆಂಗಳೂರು ಬುಲ್ಸ್

ದಬಾಂಗ್ ಡೆಲ್ಲಿ-ಬೆಂಗಳೂರು ಬುಲ್ಸ್

 • Share this:
  ಪ್ರೊ ಕಬ್ಬಡಿ ಸೀಸನ್ 8ರಲ್ಲಿ(Pro Kabaddi Season-8) ದಬಾಂಗ್ ಡೆಲ್ಲಿ(Dabang Delhi) ವಿರುದ್ಧ ಸೋಲುವ ಮೂಲಕ  ಫೈನಲ್ ಗೆ(Final) ಲಗ್ಗೆ ಹಾಕುವ ಬೆಂಗಳೂರು ಬುಲ್ಸ್(Bengaluru Bulls) ತಂಡದ ಕನಸು ಛಿದ್ರ ಛಿದ್ರವಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ(Hotel) ನಡೆದ ಪ್ರೋ ಕಬ್ಬಡಿಯ ಸೆಮಿಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಬೆಂಗಳೂರು ಬುಲ್ಸ್ ಪವನ್​ ಶೆರಾವತ್​ರ ಹೋರಾಟದ ಮಧ್ಯೆಯೂ 40-35 ಅಂತರದಿಂದ ಡೆಲ್ಲಿ ದಬಾಂಗ್​ ವಿರುದ್ಧ ಸೋಲು ಕಂಡು ಸೆಮಿಫೈನಲ್​ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಯುಪಿ ಯೋಧ ವಿರುದ್ಧ ಗೆಲುವು ಸಾಧಿಸುವ ಮೂಲಕ ಪಾಟ್ನಾ ಪೈರೇಟ್ಸ್ ಫೈನಲ್ ಗೆ ಲಗ್ಗೆ ಇಟ್ಟಿದೆ.

  ಮೊದಲ ಅವಧಿಯಲ್ಲಿ ಸಮಬಲದ ಹೋರಾಟ

  ಮೊದಲ ಅವಧಿಯ ಆಟದಲ್ಲಿ ಕೇವಲ 4 ಅಂಕ ಸಂಪಾದನೆ ಮಾಡಿದರು. ಆದರೆ, ಈ ಅವಧಿಯಲ್ಲಿ ಅವರು ಕಾಲಿನ ಪಾದಕ್ಕೆ ಗಾಯ ಮಾಡಿಕೊಂಡಿದ್ದು ಡೆಲ್ಲಿ ತಂಡದ ಆತಂಕಕ್ಕೆ ಕಾರಣವಾಗಿತ್ತು. ಹಾಗಿದ್ದರೂ ಬೆಂಗಳೂರು ಬುಲ್ಸ್ 17-16ರೊಂದಿಗೆ ಒಂದು ಅಂಕದ ಮುನ್ನಡೆ ಕಂಡುಕೊಳ್ಳುವಲ್ಲಿ ಯಶ ಕಂಡಿತ್ತು.

  ಮೊದಲ ಅವಧಿಯಲ್ಲಿ ರೇಡ್ ಪಾಯಿಂಟ್ ಮೂಲಕವೇ ಬೆಂಗಳೂರು ಬುಲ್ಸ್ 11 ಅಂಕ ಸಂಪಾದನೆ ಮಾಡಿದರೆ, ದಬಾಂಗ್ ತಂಡ ರೇಡ್ ಮೂಲಕ 7 ಅಂಕ ಸಂಪಾದನೆ ಮಾಡಿತ್ತು. ಅಲ್ಲದೆ, ಬೆಂಗಳೂರು ತಂಡವನ್ನು ಒಮ್ಮೆ ಆಲೌಟ್ ಮಾಡುವಲ್ಲೂ ದಬಾಂಗ್ ದೆಹಲಿ ತಂಡ ಯಶಸ್ವಿಯಾಗಿತ್ತು.

  ಇದನ್ನೂ ಓದಿ: IPL ನಲ್ಲಿ ಸ್ಥಾನ ಸಿಗದಿದ್ದಕ್ಕೆ ವಿಶೇಷ ಮನವಿ ಮಾಡಿದ Suresh Raina

  ದ್ವಿತೀಯಾರ್ಧದಲ್ಲಿ ಭಾರಿ ಹಿನ್ನಡೆ ಕಂಡ ಬುಲ್ಸ್

  ಕೇವಲ ಒಂದು ಅಂಕದ ಮುನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬುಲ್ಸ್ ತಂಡ ದ್ವಿತೀಯಾರ್ಧದಲ್ಲಿ ಹಿನ್ನಡೆ ಕಂಡಿತು. ಸ್ಟಾರ್ ರೈಡರ್ ನವೀನ್ (14 ಅಂಕ) ಹಾಗೂ ನೀರಜ್ ನರ್ವಾಲ್ (5) ಅಬ್ಬರದ ರೈಡಿಂಗ್ ಎದುರು ಮಂಕಾದ ಬುಲ್ಸ್, 28ನೇ ನಿಮಿಷದಲ್ಲಿ 2ನೇ ಬಾರಿಗೆ ಆಲೌಟ್ ಆಯಿತು.

  ಇದರಿಂದ 22-25 ಹಿನ್ನಡೆ ಅನುಭವಿಸಿದ ಬುಲ್ಸ್, ಬಳಿಕ ಸುಧಾರಿಸಿಕೊಳ್ಳಲಿಲ್ಲ. ಆಟದ ಸಮಯ ಸಾಗುತ್ತಿದ್ದಂತೆ ಪಂದ್ಯದಲ್ಲಿ ಬುಲ್ಸ್ ಮೇಲೆ ಸವಾರಿ ನಡೆಸಿದ ಡೆಲ್ಲಿ ತಂಡ 33ನೇ ನಿಮಿಷದಲ್ಲಿ 34-26 ಅಂಕಗಳ ಮುನ್ನಡೆ ಕಂಡಿತು. ಬಳಿಕ ಬುಲ್ಸ್ ಆಟಗಾರರ ತಿರುಗೇಟು ನೀಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

  ಏಕಾಂಗಿಯಾಗಿ ಅಬ್ಬರಿಸಿದ ಪವನ್..

  ದೆಹಲಿ ವಿರುದ್ಧ ಬೆಂಗಳೂರು ಬುಲ್ಸ್ ತಂಡದ ನಾಯಕ ಹಾಗೂ ಅಗ್ರ ರೈಡರ್ ಪವನ್ ಕುಮಾರ್ ಶೇರಾವತ್ ಏಕಾಂಗಿ ಹೋರಾಟ ನಡೆಸಿದರು. ಪಂದ್ಯದಲ್ಲಿಯೇ ಗರಿಷ್ಠ 18 ಅಂಕಗಳನ್ನು ಗಳಿಸಿದರು. ಅಲ್ಲದೆ ಬೆಂಗಳೂರು ತಂಡದ ಯಾವೊಬ್ಬ ಆಟಗಾರರು ಸಹ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮಿಂಚಲಿಲ್ಲ.

  ಹೀಗಾಗಿ ಪವನ ಅವರ ಏಕಾಂಗಿ ಹೋರಾಟ ವ್ಯರ್ಥವಾಗಿ ಜಯ ದೆಹಲಿ ಕಡೆ ಹೋಯಿತು. ಇನ್ನು ಡೆಲ್ಲಿ ಪರ ರೈಡರ್ ನವೀನ್ ಕುಮಾರ್ l 14 ಅಂಕ ಗಳಿಸಿದರು. ಆದರೆ, ಅವರಿಗೆ ರೈಡರ್ ನೀರಜ್ ನರ್ವಾಲ್ (5) ಮತ್ತು ಆಲ್ ರೌಂಡರ್ ವಿಜಯ್ (4) ಉತ್ತಮ ಬೆಂಬಲ ನೀಡಿದರು. ಇದೇ ಕಾರಣಕ್ಕೆ ಡೆಲ್ಲಿ ತಂಡ ಸತತ ಎರಡನೇ ಸೀಸನ್‌ನಲ್ಲಿ ಗೆಲುವು ದಾಖಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.

  4ನೇ ಬಾರಿ ಫೈನಲ್ ತಲುಪಿದ ಪಾಟ್ನಾ

  ಯು.ಪಿ ಯೋಧಾದ ಕನಸನ್ನು ನುಚ್ಚುನೂರು ಮಾಡಿದ ಪಟ್ನಾ ಪೈರೇಟ್ಸ್ ರಕ್ಷಣಾ ವಿಭಾಗದ ಆಟಗಾರರು ತಂಡಕ್ಕೆ ಗೆಲುವು ತಂದುಕೊಟ್ಟರು. ಸ್ಪಷ್ಟ ರಣತಂತ್ರದೊಂದಿಗೆ ಕಣಕ್ಕೆ ಇಳಿದ ಮೂರು ಬಾರಿಯ ಚಾಂಪಿಯನ್ ಪಟ್ನಾ ಆಟಗಾರರು 38-27 ರಿಂದ ಯು.ಪಿ ಯೋಧಾ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ.

  ಎಲಿಮಿನೇಟರ್ ಮೂಲಕ ಸೆಮಿಫೈನಲ್ಸ್ ತಲುಪಿದ್ದ ಯು.ಪಿ ಫೈನಲ್ ಪ್ರವೇಶಿಸುವ ಕನಸಿಗೆ ಪಾಟ್ನಾ ಪೆಟ್ಟು ನೀಡಿದೆ. ಈ ಮೂಲಕ ಪಾಟ್ನಾ ನಾಲ್ಕನೇ ಬಾರಿಗೆ ಫೈನಲ್ ಗೆ ಪ್ರವೇಶಿಸಿದೆ.

  ಇದನ್ನೂ ಓದಿ: ಪುಟ್ಟ ಮಗುವಿನ ಚಿಕಿತ್ಸೆಗೆ ನೆರವು; ಹೃದಯ ವೈಶಾಲ್ಯತೆ ಮೆರೆದ ಕೆ.ಎಲ್ ರಾಹುಲ್

  ಶುಕ್ರವಾರ ಫೈನಲ್ ಪಂದ್ಯ..

  ಸಂಪೂರ್ಣ ಕಬ್ಬಡಿ ಲೀಗ್ ನಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದ ದಬಾಂಗ್ ಡೆಲ್ಲಿ ಹಾಗೂ ಪಾಟ್ನಾ ಪೈರೇಟ್ಸ್ ಅಂತಿಮವಾಗಿ ಫೈನಲ್ ಪ್ರವೇಶಿಸಿವೆ.. ಶುಕ್ರವಾರ ನಡೆಯುವ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಹಾಗೂ ಪಾಟ್ನಾ ಪೈರೇಟ್ಸ್ ಪ್ರೊ ಕಬಡ್ಡಿ ಸೀಸನ್ 8ರ ಪ್ರಶಸ್ತಿ ಗೆಲ್ಲಲು ಕಾದಾಟ ನಡೆಸಲಿದೆ.
  Published by:ranjumbkgowda1 ranjumbkgowda1
  First published: