Tokyo Olympics : ಜಿಮ್ನಾಸ್ಟಿಕ್​ನಲ್ಲಿ ಮೊದಲ ಬಾರಿಗೆ ಭಾರತೀಯ ತೀರ್ಪುಗಾರರಾಗಿ ದೀಪಕ್​ ಕಬ್ರಾ ಆಯ್ಕೆ

ಟೋಕಿಯೋ ಒಲಂಪಿಕ್ಸ್​ನ ಜಿಮ್ನಾಸ್ಟಿಕ್ ತೀರ್ಪುಗಾರರಾಗಿ ಭಾರತದ ದೀಪಕ್​ ಕಬ್ರಾ ಆಯ್ಕೆಯಾಗಿದ್ದಾರೆ

ದೀಪಕ್​ ಕಬ್ರಾ

ದೀಪಕ್​ ಕಬ್ರಾ

 • Share this:
  ಕೊರೋನಾ ಆತಂಕದ ನಡುವೆಯೂ ಟೋಕಿಯೋ ಒಲಂಪಿಕ್ಸ್​ ನಡೆಯಲು ಸಕಲ ತಯಾರಿ ನಡೆಸಲಾಗಿದೆ. ಕಳೆದ ವರ್ಷವೇ ಆರಂಭ ಆಗಬೇಕಿದ್ದ ಟೋಕಿಯೋ ಒಲಂಪಿಕ್ಸ್​ (2020 Tokyo Olympics) ಕೋವಿಡ್​ ಸೋಂಕಿನಿಂದ ಮುಂದೂಡಿದ ಕಾರಣ ಈ ವರ್ಷ ನಡೆಯಲಿದೆ. ಭಾರತದ ಸ್ಪರ್ಧಿಗಳು ಕೂಡ ಒಲಂಪಿಕ್​ನಲ್ಲಿ ಭಾಗಿಯಾಗಲು ಸಜ್ಜುಗೊಳ್ಳುತ್ತಿದ್ದು, ಈ ನಡುವೆ ಮತ್ತೊಂದು ಸಂತಸದ ಸುದ್ದಿ ಹೊರ ಬಿದ್ದಿದೆ. ಈ ಬಾರಿ 2020 ಟೋಕಿಯೋ ಒಲಂಪಿಕ್ಸ್​ನ ಜಿಮ್ನಾಸ್ಟಿಕ್ ತೀರ್ಪುಗಾರರಾಗಿ ಭಾರತದ ದೀಪಕ್​ ಕಬ್ರಾ ಆಯ್ಕೆಯಾಗಿದ್ದಾರೆ. ಜಿಮ್ನಾಸ್ಟಿಕ್​ ಸ್ಪರ್ಧಿಗಳ ಆಟವನ್ನು ನಿರ್ಣಯಿಸಿ ಅವರು ತೀರ್ಪು ನೀಡಲಿದ್ದು, ಒಲಂಪಿಕ್ಸ್​ನಲ್ಲಿ ಜಿಮ್ನಾಸ್ಟಿಕ್​ ಸ್ಪರ್ಧೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊದಲ ಭಾರತೀಯ ಎಂಬ ಕೀರ್ತಿಗೂ ಇವರು ಪಾತ್ರರಾಗಿದ್ದಾರೆ.

  ಭಾರತದ ಸ್ಟಾರ್​ ಜಿಮ್ನಾಸ್ಟಿಕ್​ ಪಟು ದೀಪ ಕರ್ಮಾಕರ್​, ಈ ವಿಷಯವನ್ನು ತಮ್ಮ ಟ್ವೀಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಲಂಪಿಕ್​ ಗೇಮ್ಸ್​ನಲ್ಲಿ ಮೊದಲ ಬಾರಿ ತೀರ್ಪುಗಾರರಾಗಿ ಆಯ್ಕೆಗೊಂಡ ದೀಪಕ್​ ಕಬ್ರಾ ಅವರಿಗೆ ಶುಭಾಶಯ ಎಂದು ತಿಳಿಸಿದ್ದಾರೆ.
  ಮುಂಬೈ ಮೂಲದ ದೀಪಕ್​ ಕಬ್ರಾ 2019ರಲ್ಲಿ ಏಷ್ಯನ್ ಜಿಮ್ನಾಸ್ಟಿಕ್ಸ್ ಯೂನಿಯನ್‌ನ ತಾಂತ್ರಿಕ ಸಮಿತಿಯ ಸದಸ್ಯರನ್ನಾಗಿ ನೇಮಕಗೊಂಡಿದ್ದರು. ಜೊತೆಗೆ 2019 ರ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಉನ್ನತ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.  ಇದಕಕೆ ಮೊದಲು ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾದ (ಎನ್‌ಆರ್‌ಎಐ) ಜಂಟಿ ಕಾರ್ಯದರ್ಶಿ ಪವನ್ ಸಿಂಗ್ ಅವರನ್ನು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ಗೆ ನ್ಯಾಯಾಧೀಶರಾಗಿ ಆಯ್ಕೆ ಮಾಡಲಾಗಿತ್ತು. ಕಬ್ರಾರಂತೆಯೇ, ಸಿಂಗ್ ಅವರು ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ಕ್ರೀಡೆಯಲ್ಲಿ ಮೊದಲ ಬಾರಿಗೆ ಭಾರತೀಯ ತೀರ್ಪುಗಾರರಾಗಲಿದ್ದಾರೆ.

  ಭಾರತದಲ್ಲಿ ಜಿಮ್ನಾಸ್ಟಿಕ್​ ಸ್ಪರ್ಧೆಯನ್ನು ಪ್ರಣತಿ ನಾಯಕ್​ ಮಾತ್ರ ಪ್ರತಿನಿಧಿಸುತ್ತಿದ್ದಾರೆ. 26 ವರ್ಷದ ಪ್ರಣತಿ ನಾಯಕ್​ 2019ರಲ್ಲಿ ಏಷ್ಯಾನ್​ ಚಾಂಪಿಯನ್​ಶಿಪ್​ ನ ಗೆಲುವಿನ ಬಳಿಕ ಒಲಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ.
  Published by:Seema R
  First published: