ರಣಜಿ ಟ್ರೋಫಿ: ಕರ್ನಾಟಕ 389 ಆಲೌಟ್: ಗುಜರಾತ್​ಗೆ 14 ರನ್ಸ್​​ ಮುನ್ನಡೆ

2ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 348 ರನ್ ಕಲೆಹಾಕಿದ್ದ ಕರ್ನಾಟಕ 132 ರನ್​ಗಳ ಇನ್ನಿಂಗ್ಸ್​ ಮುನ್ನಡೆಯಲ್ಲಿತ್ತು. ಇಂದು ಕೇವಲ 41 ರನ್​ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡ 389 ರನ್​ಗೆ ಸರ್ವಪತನ ಕಂಡಿತು.

Vinay Bhat | news18
Updated:December 16, 2018, 5:38 PM IST
ರಣಜಿ ಟ್ರೋಫಿ: ಕರ್ನಾಟಕ 389 ಆಲೌಟ್: ಗುಜರಾತ್​ಗೆ 14 ರನ್ಸ್​​ ಮುನ್ನಡೆ
ಸಾಂದರ್ಭಿಕ ಚಿತ್ರ
  • News18
  • Last Updated: December 16, 2018, 5:38 PM IST
  • Share this:
ಸೂರತ್: ಇಲ್ಲಿನ ಲಾಲಾಭಾಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಗುಜರಾತ್ ನಡುವಣ ರಣಜಿ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವಂತೆ ಗೋಚರಿಸುತ್ತಿದೆ.

ಕರ್ನಾಟಕವನ್ನು 389 ರನ್​ಗೆ ಆಲೌಟ್ ಮಾಡಿ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿರುವ ಗುಜರಾತ್ ತಂಡ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿದೆ. ಇನ್ನು ಒಂದು ದಿನದ ಆಟ ಬಾಕಿ ಉಳಿದಿದ್ದು, ಗುಜರಾತ್ 14 ರನ್​ಗಳ ಮುನ್ನಡೆಯಲ್ಲಿದೆ.

ಇದನ್ನೂ ಓದಿ: IPL 2019 ಹರಾಜು: ಎಲ್ಲಿ?, ಯಾವಾಗ? ಎಷ್ಟು ಆಟಗಾರರು: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್​

2ನೇ ಇನ್ನಿಂಗ್ಸ್​​ನಲ್ಲಿ 6 ರನ್​ಗೆ 2 ವಿಕೆಟ್ ಕಳೆದುಕೊಂಡ ಗುಜರಾತ್​ಗೆ ಭಾರ್ಗವ್ ಹಾಗೂ ರುಜುಲ್ ಭಟ್ ಶತಕದ ಜೊತೆಯಾಟವಾಡಿ ಆಸರೆಯಾದರು. 74 ರನ್​ಗಳಿಸಿ ಭಾರ್ಗವ್ ಔಟ್ ಆದರು. ಸದ್ಯ ರುಜುಲ್ 82 ಹಾಗೂ ಮನ್​ಪ್ರೀತ್ 21 ರನ್​ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕರ್ನಾಟಕ ಪರ ಪ್ರತೀಕ್ ಜೈನ್, ಕೃಷ್ಣಪ್ಪ ಗೌತಮ್ ಹಾಗೂ ರೋನಿತ್ ಮೋರ್ ತಲಾ 1 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: ದೇವದತ್-ಗೋಪಾಲ್ ಭರ್ಜರಿ ಆಟ: ಬೃಹತ್ ಮುನ್ನಡೆಯತ್ತ ಕರ್ನಾಟಕ

ಇದಕ್ಕೂ ಮೊದಲು 2ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 348 ರನ್ ಕಲೆಹಾಕಿದ್ದ ಕರ್ನಾಟಕ 132 ರನ್​ಗಳ ಇನ್ನಿಂಗ್ಸ್​ ಮುನ್ನಡೆಯಲ್ಲಿತ್ತು. ಇಂದು ಕೇವಲ 41 ರನ್​ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡ 389 ರನ್​ಗೆ ಸರ್ವಪತನ ಕಂಡಿತು. ರಾಜ್ಯ ತಂಡದ ಪರ ಶ್ರೇಯಸ್ ಗೋಪಾಲ್ 93, ದೇವದತ್ ಪಡಿಕ್ಕಲ್ 74, ನಾಯಕ ವಿನಯ್ ಕುಮಾರ್ 51 ಹಾಗೂ ಶ್ರೀನಿವಾಸ್ ಶರತ್ 47 ರನ್ ಗಳಿಸಿದರು. ಗುಜರಾತ್ ಪರ ಪಿಯೂಶ್ ಚಾವ್ಲಾ 4 ವಿಕೆಟ್ ಕಿತ್ತರೆ, ಅರ್ಜನ್ ಹಾಗೂ ಅಕ್ಷರ್ ಪಟೇಲ್ ತಲಾ  ವಿಕೆಟ್ ಪಡೆದರು.

First published:December 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading