ರಣಜಿ ಟ್ರೋಫಿ: ದೇವದತ್-ಗೋಪಾಲ್ ಭರ್ಜರಿ ಆಟ: ಬೃಹತ್ ಮುನ್ನಡೆಯತ್ತ ಕರ್ನಾಟಕ

ಶ್ರೇಯಸ್ ಗೋಪಾಲ್ ಹಾಗೂ ಶ್ರೀನಿವಾಸ್ ಶರತ್ ಭರ್ಜರಿ ಜೊತೆಯಾಟ ಆಡಿ, ಕುಸಿಯುವ ಬೀತಿಯಲ್ಲಿದ್ದ ತಂಡಕ್ಕೆ 117 ರನ್​ಗಳ ಕಾಣಿಕೆ ನೀಡಿದರು. ಗೋಪಾಲ್ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿ ಶತಕದಂಚಿನಲ್ಲಿ 93 ರನ್​ಗೆ ಎಡವಿದರು.

Vinay Bhat | news18
Updated:December 15, 2018, 5:39 PM IST
ರಣಜಿ ಟ್ರೋಫಿ: ದೇವದತ್-ಗೋಪಾಲ್ ಭರ್ಜರಿ ಆಟ: ಬೃಹತ್ ಮುನ್ನಡೆಯತ್ತ ಕರ್ನಾಟಕ
ಸಾಂದರ್ಭಿಕ ಚಿತ್ರ
  • News18
  • Last Updated: December 15, 2018, 5:39 PM IST
  • Share this:
ಸೂರತ್: ಇಲ್ಲಿ ನಡೆಯುತ್ತಿರುವ ಗುಜರಾತ್ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಬ್ಯಾಟ್ಸ್​ಮನ್​​ಗಳು ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಶ್ರೇಯಸ್ ಗೋಪಾಲ್ ಹಾಗೂ ದೇವದತ್ ಪಡಿಕ್ಕಲ್ ಅವರ ಅರ್ಧಶತಕದ ನೆರವಿನಿಂದ ಎರಡನೇ ದಿನದಾಟಕ್ಕೆ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 348 ಆಗಿದೆ. ಅಲ್ಲದೆ 132 ರನ್​ಗಳ ಮುನ್ನಡೆಯಲ್ಲಿ ವಿನಯ್ ಕುಮಾರ್ ಬಳಗವಿದ್ದು, ದೊಡ್ಡ ಮೊತ್ತದ ಸೂಚನೆ ನೀಡಿದೆ.

ನಿನ್ನೆ ಮೊದಲ ದಿನ ಗುಜರಾತ್​ ತಂಡವನ್ನು 216 ರನ್​ಗೆ ಆಲೌಟ್ ಮಾಡಿ ಇನ್ನಿಂಗ್ಸ್​ ಆರಂಭಿಸಿದ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 45 ರನ್ ಕಲೆಹಾಕಿತ್ತು. ಎರಡನೇ ದಿನವಾದ ಇಂದು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ದೇವದತ್ ಪಡಿಕ್ಕಲ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಎರಡನೇ ಅರ್ಧಶತಕ ಬಾರಿಸಿದರು. 74 ರನ್​ಗೆ ನಿರ್ಗಮಿಸಿದ ದೇವದತ್ ಅವರು ರವಿ ಕುಮಾರ್ ಸಮರ್ಥ್(25)​ ಜೊತೆಗೂಡಿ 63 ರನ್​​​ಗಳ ಕಾಣಿಕೆ ನೀಡಿದರು.

ಇದನ್ನೂ ಓದಿ: 'ರವಿ ಶಾಸ್ತ್ರಿ ಏನು ಸಾಧನೆ ಮಾಡಿದ್ದಾರೆ?': ಕೋಚ್ ವಿರುದ್ಧ ಗುಡುಗಿದ ಗಂಭೀರ್

ಬಳಿಕ ಕೃಷ್ಣಮೂರ್ತಿ 17 ರನ್​ಗೆ ನಿರ್ಗಮನಿದ ಬೆನ್ನಲ್ಲೆ ಜೊತೆಯಾದ ಶ್ರೇಯಸ್ ಗೋಪಾಲ್ ಹಾಗೂ ಶ್ರೀನಿವಾಸ್ ಶರತ್ ಭರ್ಜರಿ ಜೊತೆಯಾಟ ಆಡಿದರು. ಕುಸಿಯುವ ಬೀತಿಯಲ್ಲಿದ್ದ ತಂಡಕ್ಕೆ ಈ ಜೋಡಿ ಆಸರೆಯಾಗಿ 117 ರನ್​ಗಳ ಕಾಣಿಕೆ ನೀಡಿತು. ಗೋಪಾಲ್ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿ ಶತಕದಂಚಿನಲ್ಲಿ 93 ರನ್​ಗೆ ಎಡವಿದರು.

ನಂತರ ಬಂದ ಕೃಷ್ಣಪ್ಪ ಗೌತಮ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 22 ರನ್​ಗೆ ಸುಸ್ತಾದರು. ಸದ್ಯ ಶರತ್ 47 ಹಾಗೂ ನಾಯಕ ವಿನಯ್ ಕುಮಾರ್ 16 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಗುಜರಾತ್ ಪರ ಅರ್ಜನ್ 3 ವಿಕೆಟ್ ಕಿತ್ತು ಮಿಂಚಿದ್ದರೆ, ಅಕ್ಷರ್ ಪಟೇಲ್ ಹಾಗೂ ಪಿಯೂಷ್ ಚಾವ್ಲಾ ತಲಾ 2 ವಿಕೆಟ್ ಪಡೆದಿದ್ದಾರೆ.

First published: December 15, 2018, 3:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading