• Home
  • »
  • News
  • »
  • sports
  • »
  • David Warner: ರಶ್ಮಿಕಾಗೆ Sorry ಕೇಳಿದ ವಾರ್ನರ್, ವಾಟ್​ ಎ ಬ್ಯೂಟಿ ವಿಡಿಯೋ ವೈರಲ್

David Warner: ರಶ್ಮಿಕಾಗೆ Sorry ಕೇಳಿದ ವಾರ್ನರ್, ವಾಟ್​ ಎ ಬ್ಯೂಟಿ ವಿಡಿಯೋ ವೈರಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

David Warner: ವಾರ್ನರ್ ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ಅವರ ಭೀಷ್ಮ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದು, ಇದೀಗ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ. ವಿಚಿತ್ರವೆಂದರೆ ಹೀರೋಗಳ ಮುಖದ ಮೇಲೆ ತಮ್ಮ ಮುಖವನ್ನು ಎಡಿಟ್ ಮಾಡುತ್ತಿದ್ದ ವಾರ್ನರ್ ಈ ಬಾರಿ ರಶ್ಮಿಕಾ ಮಂದಣ್ಣ ಅವರ ಮುಖವನ್ನಾಗಿ ಬದಲಾಯಿಸಿಕೊಂಡಿರುವುದು ಸಖತ್ ವಿಭಿನ್ನವಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಅವರಿಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಐಪಿಎಲ್​ (IPL) ಮೂಲಕ ಒಂದಿಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರೆ, ಭಾರತೀಯ ಹಾಡುಗಳಿಗೆ ಇವರು ಮಾಡುವ ಡ್ಯಾನ್ಸ್​ ಕಂಡು ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ವಾರ್ನರ್ ಭಾರತೀಯ ಸಿನಿಮಾದ ಹಾಡುಗಳಿಗೆ ಡ್ಯಾನ್ಸ್​ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದು, ಇನ್​​ಸ್ಟಾಗ್ರಾಂನಲ್ಲಿ (Instagram) 5 ಮಿಲಿಯನ್​ ಹಿಂಬಾಲಕರನ್ನು ಪಡೆದಿದ್ದಾರೆ. ಇದೀಗ ಅವರು ಮತ್ತೊಂದು ಭಾರತೀಯ ಸಿನಿಮಾದ ಹಾಡಿಗೆ ವಿಡಿಯೋ ಮಾಡಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ವಾರ್ನರ್​ ಅವರ ವಿಡಿಯೋಗೆ ಬಿದ್ದು ಬಿದ್ದು ನಗುತ್ತಿದ್ದಾರೆ. 


ರಶ್ಮಿಕಾ ಹಾಡಿಗೆ ವಿಡಿಯೋ ಮಾಡಿದ ವಾರ್ನರ್:


ಸದಾ ಒಂದಲ್ಲ ಒಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸುವ ವಾರ್ನರ್ ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ಅವರ ಭೀಷ್ಮ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದು, ಇದೀಗ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ. ವಿಚಿತ್ರವೆಂದರೆ ಹೀರೋಗಳ ಮುಖದ ಮೇಲೆ ತಮ್ಮ ಮುಖವನ್ನು ಎಡಿಟ್ ಮಾಡುತ್ತಿದ್ದ ವಾರ್ನರ್ ಈ ಬಾರಿ ರಶ್ಮಿಕಾ ಮಂದಣ್ಣ ಅವರ ಮುಖವನ್ನಾಗಿ ಬದಲಾಯಿಸಿಕೊಂಡಿರುವುದು ಸಖತ್ ವಿಭಿನ್ನವಾಗಿದೆ. ನಿತಿನ್ ಅಭಿನಯದ ಭೀಷ್ಮ ಚಿತ್ರದ ‘ವಾಟ್​ ಎ ಬ್ಯೂಟಿ’ ಹಾಡಿನ ಸಾಹಿತ್ಯವನ್ನು ಎಡಿಟ್ ಮಾಡಿದ್ದಾರೆ. ರಶ್ಮಿಕಾ ಮುಖಭಾವಕ್ಕೆ ತಮ್ಮ ಮುಖವನ್ನು ಎಡಿಟ್ ಮಾಡಿದ್ದು, ನೋಡುಗರಿಗೆ ಸಖತ್ ಮಜ ನೀಡುತ್ತಿದೆ.




ಅಲ್ಲದೆ, ಈ ವಿಡಿಯೋ ಮಾಡಿದ್ದಕ್ಕಾಗಿ ರಶ್ಮಿಕಾ ಮಂದಣ್ಣ ಅವರನ್ನು ಕ್ಷಮಿಸಿ (ತಮಾಷೆಗಾಗಿ) ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು ಕೂಡ ವಿವಿಧ ಕ್ರೇಜಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಟೀಂ ಇಂಡಿಯಾದ ಮಾಜಿ ಸ್ಟಾರ್ ಆಲ್ ರೌಂಡರ್ ಯುವರಾಜ್ ಕೂಡ ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋ ಈಗ ವೈರಲ್ ಆಗಿದೆ. ಅಲ್ಲದೆ, ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ಡೇವಿಡ್ ವಾರ್ನರ್ ದಯನೀಯವಾಗಿ ವಿಫಲರಾಗಿದ್ದರು. ಅವರು ಕೇವಲ ನಾಲ್ಕು ಪಂದ್ಯಗಳನ್ನು ಆಡಿ ಕೇವಲ 44 ರನ್ ಗಳಿಸಿದ್ದರು.


ವಿಭಿನ್ನ ಅವತಾರ ಎತ್ತುವ ವಾರ್ನರ್:


ಹೌದು, ಡೇವಿಡ್ ವಾರ್ನರ್ ಹೆಚ್ಚಾಗಿ ಸೌತ್​ ಸಿನಿಮಾದ ಮೇಲೆ ಕ್ರೇಜ್​ ಹೊಂದಿದ್ದಾರೆ. ಬುಟ್ಟಬೊಮ್ಮ ಹಾಡಿನಲ್ಲಿ ಪತ್ನಿಯೊಂದಿಗೆ ವಾರ್ನರ್ ಸ್ಟೆಪ್ಸ್, ಬಾಹುಬಲಿಯಲ್ಲಿ ಪ್ರಭಾಸ್ ಡೈಲಾಗ್ ಗಳಿಗೆ ಸೌತ್ ಸ್ಟಾರ್ ಸಿನಿಮಾಗಳಲ್ಲಿ ಪೇಸ್ ಆಫ್ ಆ್ಯಪ್ ಬಳಸಿ ಕೆಲ ದೃಶ್ಯಗಳಲ್ಲಿ ಆಯಾಯ ಮುಖವನ್ನು ಅಂಟಿಸಿ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.


ಇದನ್ನೂ ಓದಿ: Team India: ಬಿಸಿಸಿಐ ಮಹತ್ವದ ನಿರ್ಧಾರ! ರೋಹಿತ್, ಕೊಹ್ಲಿ ಜೊತೆ ಟಿ20ಯಿಂದ ಸೂರ್ಯ ಔಟ್?


ಇದಲ್ಲದೇ ಈ ಹಿಂದೆ ಟಿಕ್​ಟಾಕ್​ನಲ್ಲಿ ಸಕ್ರಿಯರಾಗಿದ್ದ ವಾರ್ನರ್, ಭಾರತದಲ್ಲಿ ಟಿಕ್​ಟಾಕ್ ಬ್ಯಾನ್ ಆದ ನಂತರ ಇದೀಗ ಹೊಸ ಆ್ಯಪ್ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇನ್ನೂ ವಾರ್ನರ್ ಅವರು ತಮ್ಮ ಮುಖವನ್ನು ರೀಫೇಸ್ ಮಾಡಿ ಹೃತಿಕ್ ರೋಷನ್​​ ವಿಡಿಯೋ ಕೂಡ ಮಾಡಿದ್ದರು. ಇನ್​ಸ್ಟಾದಲ್ಲಿ ಈ ವಿಡಿಯೋ 2.3 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿತ್ತು. ಅಲ್ಲದೇ ತಲೈವಾ ರಜನಿ ವಿಡಿಯೋ ಪೋಸ್ಟ್​​ ಸಹ ಸಖತ್ ವೈರಲ್ ಆಗಿತ್ತು.


ಗಣೇಶ ಹಬ್ಬಕ್ಕೆ ಶುಭಕೋರಿದ್ದ ಡೇವಿಡ್:


ಹೌದು, ಗಣೇಶ ಹಬ್ಬದ ವೇಳೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಗಣಪತಿಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಭಾರತೀಯರಿಗೆ ಗಣೇಶ ಚತುರ್ಥಿಯ ಶುಭಾಷಯಗಳನ್ನು ತಿಳಿಸಿದ್ದರು. ಈ ಪೋಟೋಗೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇ ಫೋಟೋ ಸಹ ಸಖತ್ ವೈರಲ್ ಆಗಿತ್ತು.

Published by:shrikrishna bhat
First published: