• Home
  • »
  • News
  • »
  • sports
  • »
  • David Miller: ಅಭಿಮಾನಿ ಸಾವಿಗೆ ಕಂಬನಿ ಮಿಡಿದ ಡೇವಿಡ್ ಮಿಲ್ಲರ್, ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಸ್ಟಾರ್​ ಕ್ರಿಕೆಟರ್​

David Miller: ಅಭಿಮಾನಿ ಸಾವಿಗೆ ಕಂಬನಿ ಮಿಡಿದ ಡೇವಿಡ್ ಮಿಲ್ಲರ್, ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಸ್ಟಾರ್​ ಕ್ರಿಕೆಟರ್​

ಡೇವಿಡ್ ಮಿಲ್ಲರ್ ಜೊತೆ ಅವರ ಪಯಟ್ಟ ಅಭಿಮಾನಿ

ಡೇವಿಡ್ ಮಿಲ್ಲರ್ ಜೊತೆ ಅವರ ಪಯಟ್ಟ ಅಭಿಮಾನಿ

David Miller: ಡೇವಿಡ್ ಮಿಲ್ಲರ್ ಈ ಹೃದಯ ವಿದ್ರಾವಕ ವಿಷಯವನ್ನು ವಿಡಿಯೋ ಮೂಲಕ ಎಲ್ಲರ ಮುಂದೆ ಇಟ್ಟಿದ್ದಾರೆ. ಶನಿವಾರ ಸಂಜೆ ವಿಡಿಯೋ ರಿಲೀಸ್ ಮಾಡಿರುವ ಈ ಬ್ಯಾಟ್ಸ್ ಮನ್ ತುಂಬಾ ನೋವಿನ ಸಂದೇಶ ರವಾನಿಸಿದ್ದು, ಅವರ ಅಪ್ಪಟ ಅಭಿಮಾನಿಯ ಸಾವಿಗೆ ಕಂಬನಿ ಮಿಡಿದಿದ್ದಾರೆ.

  • Share this:

ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ (South Africa) ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ (David Miller) ಕುಟುಂಬ ದುಃಖದಲ್ಲಿ ಮುಳುಗಿದೆ. ಈ ಕ್ರಿಕೆಟಿಗ ತನ್ನ ಪುಟ್ಟ ಅಭಿಮಾನಿಯನ್ನು (Fan) ಕಳೆದುಕೊಂಡಿದ್ದಾರೆ. ಹೌದು ಮಿಲ್ಲರ್ ತಮ್ಮ ಅಪ್ಪಟ ಅಭಿಮಾನಿಯಾದ ಪುಟ್ಟ ಬಾಲಕಿಯ ಸಾವಿನ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ (Social media) ಹಂಚಿಕೊಂಡಿದ್ದಾರೆ. ಈ ಹೃದಯ ವಿದ್ರಾವಕ ವಿಷಯವನ್ನು ವಿಡಿಯೋ ಮೂಲಕ ಎಲ್ಲರ ಮುಂದೆ ಇಟ್ಟಿದ್ದಾರೆ. ಸದ್ಯ ಈ ವಿಡಿಯೋ ಕಾಣಿಸಿಕೊಂಡ ನಂತರ, ಇದು ಅವರ ಮಗಳು ಎಂದು ವರದಿಗಳು ಬಂದವು ಆದರೆ ಚಿತ್ರದಲ್ಲಿರುವ ಹುಡುಗಿ ಅವರ ಅಭಿಮಾನಿ ಎಂದು ಹೇಳಲಾಗಿದೆ. ಅಭಿಮಾನಿಯಾದರೂ ಮಿಲ್ಲರ್ ಈ ಪುಟ್ಟ ಬಾಲಿಕಿಯನ್ನು ಮಗಳಿನಂತೆಯೇ ಪ್ರೀತಿಸುತ್ತಿದ್ದರು.


ಮಿಲ್ಲರ್ ಪುಟ್ಟ ಅಭಿಮಾನಿ ನಿಧನ:


ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇಂದು  ನಡೆಯಲಿದೆ. ಶನಿವಾರ, ಹಿಂದಿನ ದಿನ, ಮಿಲ್ಲರ್ ಅವರು ಚಿಕ್ಕ ಹುಡುಗಿಯೊಂದಿಗೆ ಕಾಣಿಸಿಕೊಂಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳಲ್ಲಿ, ಹುಡುಗಿ ಮಿಲ್ಲರ್ ಜೊತೆಗೆ ತನ್ನ ತಂಡದ ಜರ್ಸಿಯನ್ನು ಧರಿಸಿರುವುದನ್ನು ಕಾಣಬಹುದು.  ಮಿಲ್ಲರ್‌ಗೆ ತುಂಬಾ ಹತ್ತಿರವಾಗಿದ್ದ ಆಕೆಯ ಹೆಸರನ್ನು ಅನ್ನಾ ಎಂದು ಹೇಳಲಾಗುತ್ತಿದೆ.




ವೀಡಿಯೊವನ್ನು ಹಂಚಿಕೊಂಡ ಮಿಲ್ಲರ್, "RIP, ನಾನು ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ ನನ್ನ ಪುಟ್ಟ ರಾಕ್‌ಸ್ಟಾರ್" ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಮಿಲ್ಲರ್ ಹಂಚಿಕೊಂಡ ವೀಡಿಯೊದಲ್ಲಿ, ಚಿತ್ರಗಳಲ್ಲಿ, ಆ ಮುಗಿವಿನೊಂದಿಗೆ ಆಟವಾಡುವುದು, ಮತ್ತು ಇಬ್ಬರೂ ಮೋಜು ಮಾಡುವುದನ್ನು ಕಾಣಬಹುದು. ಈ ವೀಡಿಯೊವನ್ನು ಹಂಚಿಕೊಂಡಾಗಿನಿಂದ, ಜನರು ಈ ದುಃಖದ ಸಮಯದಲ್ಲಿ ಹುಡುಗಿ ಮತ್ತು ಅವರ ಕುಟುಂಬಕ್ಕೆ ನಿರಂತರವಾಗಿ ಧೈರ್ಯವನ್ನು ನೀಡುತ್ತಿದ್ದಾರೆ. ಮಿಲ್ಲರ್ ಜೊತೆ ಆಡಿದ ಎಲ್ಲಾ ಕ್ರಿಕೆಟಿಗರು ವಿಡಿಯೋ ನೋಡಿ ಸಂತಾಪ ಸೂಚಿಸಿದ್ದಾರೆ. ಮಗುವಿಗೆ ಕ್ಯಾನ್ಸರ್​ ಇತ್ತೆಂದು ತಿಳಿದುಬಂದಿದೆ.


ಇದನ್ನೂ ಓದಿ: T20 World Cup: ಬುಮ್ರಾ ಬದಲಿಗೆ ಈ ಆಟಗಾರನ ಆಯ್ಕೆ ಬಹುತೇಕ ಖಚಿತ, ಸುಳಿವು ನೀಡಿದ ಬಿಸಿಸಿಐ


ಭಾರತ ಪ್ರವಾಸದಲ್ಲಿರುವ ಮಿಲ್ಲರ್:


ಡೇವಿಡ್ ಮಿಲ್ಲರ್ ಪ್ರಸ್ತುತ ಭಾರತ ಪ್ರವಾಸದಲ್ಲಿದ್ದಾರೆ. ಭಾರತ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಗಾಗಿ ಅವರು ಭಾರತಕ್ಕೆ ಬಂದಿದ್ದರು. ಮೊದಲ ODI ಗೆಲುವಿನಲ್ಲಿ ಮಿಲ್ಲರ್ ಪ್ರಮುಖ ಪಾತ್ರ ವಹಿಸಿದರು. ಅವರು 63 ಎಸೆತಗಳಲ್ಲಿ 75 ರನ್ ಗಳಿಸಿ ಅಜೇಯರಾಗಿ ಉಳಿದರು. ಇದೇ ವೇಳೆ ಮೈದಾನದಲ್ಲಿ ಸದಾ ಕ್ರಿಯಾಶೀಲರಾಗಿದ್ದ ಮಿಲ್ಲರ್ ಇದ್ದಕ್ಕಿದ್ದಂತೆ ದುರಂತದಲ್ಲಿ ಮುಳುಗಿದ್ದರು. ಅಭಿಮಾನಿಯ ಸಾವಿಗೆ ಮಿಲ್ಲರ್ ಕಂಬನಿ ಮಿಡಿದಿದ್ದು, ಆ ಮಗುವಿನೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಾ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.


ಇದನ್ನೂ ಓದಿ: IND vs SA: ಟಾಸ್​ ಗೆದ್ದ ಆಫ್ರಿಕಾ ಬ್ಯಾಟಿಂಗ್​ ಆಯ್ಕೆ, ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ RCB ಆಟಗಾರ


IND vs SA ಪ್ಲೇಯಿಂಗ್​ 11:


ಭಾರತ ತಂಡ:  ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅವೇಶ್ ಖಾನ್ ಮತ್ತು ಮೊಹಮ್ಮದ್ ಸಿರಾಜ್.


ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ಜಾನೆಮನ್ ಮಲನ್, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್ (ನಾಯಕ), ಜಾರ್ನ್ ಫೋರ್ಟ್ಯುಯ್ನ್, ಕಗಿಸೊ ರಬಾಡ, ಅನ್ರಿಕ್ ನೋಕಿಯಾ.

Published by:shrikrishna bhat
First published: