ನೀತಿ ಸಂಹಿತೆ ಉಲ್ಲಂಘನೆ: ಗುಣತಿಲಕಗೆ 6 ಪಂದ್ಯ ನಿಷೇಧ ಹೇರಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

news18
Updated:July 28, 2018, 4:01 PM IST
ನೀತಿ ಸಂಹಿತೆ ಉಲ್ಲಂಘನೆ: ಗುಣತಿಲಕಗೆ 6 ಪಂದ್ಯ ನಿಷೇಧ ಹೇರಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ
news18
Updated: July 28, 2018, 4:01 PM IST
ನ್ಯೂಸ್ 18 ಕನ್ನಡ

ಶ್ರೀಲಂಕಾ ಕ್ರಿಕೆಟ್ ಮಂಡಳಿಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಡಿ ಶ್ರೀಲಂಕಾ ತಂಡದ ಆರಂಭಿಕ ಆಟಗಾರ ದನುಷ್ಕ ಗುಣತಿಲಕ ಅವರನ್ನು 6 ಪಂದ್ಯಗಳಿಗೆ ನಿಷೇಧ ವಿಧಿಸಿದೆ. ಇದು ಮುಂದಿನ ಅಂತಾರಾಷ್ಟ್ರೀಯ ಪಂದ್ಯದಿಂದಲೇ ಜಾರಿ ಆಗಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್​ ತಿಳಿಸಿದೆ.

27 ವರ್ಷ ಪ್ರಾಯದ ದನುಷ್ಕ ಗುಣತಿಲಕ, ಕೊಲಂಬೋದ ಹೋಟೆಲ್​​ವೊಂದರಲ್ಲಿ ಗುಣತಿಲಕ ಉಪಸ್ಥಿತಿಯಲ್ಲಿ ಆತನ ಸ್ನೇಹಿತನೊಬ್ಬ ನಾರ್ವೆ ಮಹಿಳೆಯ ಮೇಲೆ ಅತ್ಯಾಚಾರ ಎಸೆಗಿದ ಆರೋಪದಡಿ ಬಂಧಿತನಾಗಿದ್ದ. ಗುಣತಿಲಕ ಅವರನ್ನು ಪೊಲೀಸರು ವಿಚಾರಣೆ ನಡೆಸಿದ ಬಳಿಕ ಗುಣತಿಲಕ ತಪ್ಪಿತಸ್ಥನಲ್ಲ ಎಂದು ಸಾಭೀತಾಗಿತ್ತು. ಆದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ತಂಡದ ಶಿಸ್ತು ಉಲ್ಲಂಘನೆಯಾಗಿದೆ. ಅಲ್ಲದೆ ಒಪ್ಪಂದದ ನಿಯಮ ಗಾಳಿಗೆ ತೂರಿದ ಹಿನ್ನಲೆಯಲ್ಲಿ ಗುಣತಿಲಕ ಅವರಿಗೆ 6 ಪಂದ್ಯಗಳ ನಿಷೇಧ ಹೇರಿದೆ.

 
ಗುಣತಿಲಕ ಅವರ ಅವಗುಣಗಳ ಪ್ರದರ್ಶನ ಇದೇ ಮೊದಲೇನಲ್ಲ. ಬಾಂಗ್ಲಾದೇಶ ವಿರಯದ್ಧದ ಟಿ-20 ಪಂದ್ಯವೊಂದರಲ್ಲಿ ತಲಿಮ್ ಇಕ್ಬಾಲ್ ಔಟ್ ಆದಾಗ ಅಸಭ್ಯ ವರ್ತನೆ ತೋರಿದ್ದರು. ಅಲ್ಲದೆ ಭಾರತವು ಶ್ರೀಲಂಕಾ ಪ್ರವಾಸದಲ್ಲಿದ್ದಾಗ ದನುಷ್ಕ ತರಬೇತಿಯಲ್ಲಿ ಸರಿಯಾಗಿ ಪಾಲ್ಗೊಳ್ಳುತ್ತಿರಲಿಲ್ಲ. ಈ ಅಶಿಸ್ತಿನ ವರ್ತನೆಯಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ಹಿಂದೆ 6 ಪಂದ್ಯಗಳ ನಿಷೇಧ ಕೂಡ ಹೇರಿತ್ತು.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...