2019ರ ವಿಶ್ವಕಪ್ ಬಳಿಕ ಡೇಲ್ ಸ್ಟೈನ್ ನಿವೃತ್ತಿ

news18
Updated:July 27, 2018, 6:19 PM IST
2019ರ ವಿಶ್ವಕಪ್ ಬಳಿಕ ಡೇಲ್ ಸ್ಟೈನ್ ನಿವೃತ್ತಿ
news18
Updated: July 27, 2018, 6:19 PM IST
ನ್ಯೂಸ್ 18 ಕನ್ನಡ

ಮುಂದಿನ ವರ್ಷ ಇಂಗ್ಲೆಂಡ್ ಹಾಗೂ ವೇಲ್ಸ್​ನಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಬಳಿಕ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೈನ್ ಅವರು ಏಕದಿನ ಕ್ರಿಕೆಟ್​​ನಿಂದ ನಿವೃತ್ತಿ ಸಲ್ಲಿಸಲಿದ್ದಾರೆ.

ಈ ಬಗ್ಗೆ ಸ್ವತಃ ಸ್ಟೈನ್ ಅವರೆ ಹೇಳಿದ್ದು, 2019ರ ವಿಶ್ವಕಪ್ ಕೊನೆಗೊಂಡ ಬಳಿಕ ದಕ್ಷಿಣ ಆಫ್ರಿಕ ತಂಡದ ಪರ ಬಿಳಿ ಚೆಂಡಿನಲ್ಲಿ ಆಡುವುದಿಲ್ಲ ಎಂದು ತಿಳಿಸಿದ್ದಾರೆ. ಮುಂದಿನ ವಿಶ್ವಕಪ್ ಹೊತ್ತಿಗೆ ನನಗೆ 40 ವರ್ಷ ತುಂಬಿರುತ್ತದೆ. ನಮ್ಮ ತಂಡದ ಅಗ್ರ ಕ್ರಮಾಂಕದ ಆರು ದಾಂಡಿಗರು ಕ್ರಿಕೆಟ್​ನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಆದರೆ ಕೆಳ ಕ್ರಮಾಂಕದ ಆಟಗಾರರಿಗೆ ಅಷ್ಟೊಂದು ಅನುಭವವಿಲ್ಲ. ವಿಶ್ವಕಪ್ ವೇಳೆ ನಾನು ಟ್ರಂಪ್ ಕಾರ್ಡ್​​ ಆಗುವ ನಂಬಿಕೆ ಇದೆ. ಎಲ್ಲಾ ಸಮಯದಲ್ಲಿ ನಾನು ಆಡುವ ಅವಶ್ಯಕತೆಯಿಲ್ಲ. ಆದರೆ ನನ್ನ ಅನುಭವವು ತಂಡಕ್ಕೆ ನೆರವಾಗುವ ನಿರೀಕ್ಷೆ ಇದೆ ಎಂದಿದ್ದಾರೆ. ಟೆಸ್ಟ್​ ಕ್ರಿಕೆಟ್ ವಿಚಾರಕ್ಕೆ ಬಂದರೆ ಸಾಧ್ಯವಾದಷ್ಟು ಸಮಯ ಆಡಲು ಬಯಸುತ್ತೇನೆ. ಸದ್ಯ ಗಾಯದ ಸಮಸ್ಯೆಯಿಂದ ಸಂಪೂರ್ಣ ಗುಣಮುಖನಾಗಿದ್ದೇನೆ ಎಂದು ಹೇಳಿದ್ದಾರೆ.

ಸದ್ಯ ಸ್ಟೈನ್ ಅವರು 116 ಏಕದಿನ ಪಂದ್ಯವನ್ನಾಡಿದ್ದು 180 ವಿಕೆಟ್ ಪಡೆದಿದ್ದಾರೆ. ಅಂತೆಯೇ ಟೆಸ್ಟ್​ ಕ್ರಿಕೆಟ್​​ನಲ್ಲಿ 88 ಪಂದ್ಯದಲ್ಲಿ 421 ವಿಕೆಟ್ ಕಬಳಿಸಿದ್ದಾರೆ.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...