Pro Kabaddi: ಪಾಟ್ನಾ ಪೈರೇಟ್ಸ್ ಮಣಿಸಿ ಪ್ರೋ ಕಬಡ್ಡಿಯ ನೂತನ ಚಾಂಪಿಯನ್ ಆದ ಡೆಲ್ಲಿ

Dabang Delhi KC: ಕೊನೆಯ ಕ್ಷಣದಲ್ಲಿ ಡೆಲ್ಲಿ ತಂಡ ಒಂದು ಅಂಕಗಳ ಅಂತರದಿಂದ ಗೆಲುವಿನ ನಗೆ ಬೀರಿದೆ. ಈ ಮೂಲಕ ನಾಲ್ಕನೇ ಬಾರಿಗೆ ಚಾಂಪಿಯನ್​ ಆಗುವ ಕನಸು ಕಾಣುತ್ತಿದ್ದ ಪಾಟ್ನಾ ಕನಸು ನುಚ್ಚುನೂರಾಗಿದೆ

ದಬಾಂಗ್ ದೆಹಲಿ ಕೆಸಿ

ದಬಾಂಗ್ ದೆಹಲಿ ಕೆಸಿ

  • Share this:
    ಕುತೂಹಲ ಮೂಡಿಸಿದ್ದ ಪ್ರೊ ಕಬಡ್ಡಿ ಸೀಸನ್ 8ಕ್ಕೆ(Pro Kabaddi Season-8) ತೆರೆ ಬಿದ್ದಿದ್ದು, ಎರಡು ತಿಂಗಳಿಗೂ ಅಧಿಕ ಕಾಲ ಒಂದು 137 ಪಂದ್ಯಗಳಲ್ಲಿ ಕಾದಾಡಿದ 12 ತಂಡಗಳಲ್ಲಿ ಕೊನೆಗೂ ಚಾಂಪಿಯನ್(Champion) ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸುವ ಮೂಲಕ  ದಬಾಂಗ್ ದೆಹಲಿ ಕೆಸಿ(Dabang Delhi KC) ನೂತನ ಚಾಂಪಿಯನ್ ಆಗಿ ಹೊರ ಬಿದ್ದಿದೆ ಬೆಂಗಳೂರಿನ (Bangalore)ವೈಟ್​​ಫೀಲ್ಡ್​​ನಲ್ಲಿರುವ ಗ್ರ್ಯಾಂಡ್​ ಶೆರಟಾನ್​ ಹೋಟೆಲ್​​ನಲ್ಲಿ ಪ್ರಶಸ್ತಿಗಾಗಿ ನಡೆದ ರೋಚಕ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್​​ ವಿರುದ್ಧ ಡೆಲ್ಲಿ ದಬಾಂಗ್​​ 37-36 ಅಂಕಗಳಿಂದ ಗೆಲುವು ದಾಖಲು ಮಾಡುವ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ..

    ಸೆಮೀಸ್​ನಲ್ಲಿ ಯುಪಿ ಯೋಧಾ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಪಾಟ್ನಾ ಫೈನಲ್​ಗೆ ಪ್ರವೇಶ ಪಡೆದುಕೊಂಡಿತ್ತು. ಮತ್ತೊಂದೆಡೆ ಬೆಂಗಳೂರು ಬುಲ್ಸ್​ ವಿರುದ್ಧ ಗೆದ್ದ ದಬಾಂಗ್​ ಡೆಲ್ಲಿ ಫೈನಲ್​ಗೆ ಎಂಟ್ರಿ ನೀಡಿತ್ತು. ಇಂದು ನಡೆದ ಪಂದ್ಯ ಕೊನೆಯ ಕ್ಷಣದವರೆಗೂ ಉಭಯ ತಂಡಗಳ ನಡುವೆ ರೋಚಕ ಹಣಾಹಣಿಗೆ ಕಾರಣವಾಯಿತು. ಆದರೆ, ಕೊನೆಯ ಕ್ಷಣದಲ್ಲಿ ಡೆಲ್ಲಿ ತಂಡ ಒಂದು ಅಂಕಗಳ ಅಂತರದಿಂದ ಗೆಲುವಿನ ನಗೆ ಬೀರಿದೆ. ಈ ಮೂಲಕ ನಾಲ್ಕನೇ ಬಾರಿಗೆ ಚಾಂಪಿಯನ್​ ಆಗುವ ಕನಸು ಕಾಣುತ್ತಿದ್ದ ಪಾಟ್ನಾ ಕನಸು ನುಚ್ಚುನೂರಾಗಿದೆ.

    ಇದನ್ನೂ ಓದಿ: ವಿರಾಟ್​​ ಕೊಹ್ಲಿ RCB ನಾಯಕತ್ವ ಬಿಟ್ಟಿದ್ಯಾಕೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ!

    ರಣ ರೋಚಕ ಕದನದಲ್ಲಿ ಗೆದ್ದ ಡೆಲ್ಲಿ..

    ಪಂದ್ಯದ ಮೊದಲಾರ್ಧದಲ್ಲಿ ಪಾಟ್ನಾ ಪೈರೇಟ್ಸ್ ತಂಡ ಸಣ್ಣ ಮುನ್ನಡೆಯನ್ನು ಸಾಧಿಸಿತ್ತು. ಆದರೆ ದ್ವಿತಿಯಾರ್ಧದಲ್ಲಿ ಡೆಲ್ಲಿ ದಬಾಂಗ್ ತನ್ನ ಆಕ್ರಮಣಕಾರಿ ಆಟವನ್ನು ಮತ್ತಷ್ಟು ಚುರುಕುಗೊಳಿಸಿತು. ಇದರಲ್ಲಿ ಐಶಸ್ಸು ಸಾಧಿಸಿದ ತಂಡ ಮುನ್ನಡೆಸಾಧಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಅಂತಿಮ ಹಂತದಲ್ಲಿ ವಿಜಯ್ ಮಲಿಕ್ ಸೂಪರ್ ರೇಡ್ ದಿಲ್ಲಿ ತಂಡಕ್ಕೆ ದೊಡ್ಡ ತಿರುವು ನೀಡಿತು.

    ಈ ಮೂಲಕ ಹೆಚ್ಚು ಅಂಕವನ್ನು ದಿಲ್ಲಿ ಸೇರ್ಪಡೆಗೊಳಿಸಿತು. ಅಂತಿಮವಾಗಿ ನವೀನ್ ಚಾಣಾಕ್ಷ ರೈಡಿಂಗ್ ಮೂಲಕ ಗೆಲುವು ಕೈ ತಪ್ಪದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

    ಇನ್ನು ಕೊನೆಯ 6 ನಿಮಿಷಗಳ ಆಟವಿರುವಾಗ ದಬಾಂಗ್ ದೆಹಲಿ ಮುನ್ನಡೆ ಕಾಯ್ದುಕೊಳ್ತು. ಅಂತಿಮವಾಗಿ ದೆಹಲಿ ಟೀಂ ಪಟ್ನಾ ಪೈರಟ್ಸ್ ವಿರುದ್ಧ 37-36 ಅಂಕಗಳಿಂದ ಸೀಸನ್ 8ರ ಗೆಲುವಿನ ಪಟ್ಟಕ್ಕೇರಿತು. 3 ಬಾರಿ ಚಾಂಪಿಯನ್ ಆಗಿದ್ದ ಪಟ್ನಾ ಪೈರಟ್ಸ್ ಈ ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯ್ತು

    ಅಂತಿಮವಾಗಿ ಫೈನಲ್ ಪಂದ್ಯದಲ್ಲಿ ಪಾಟ್ನಾ ತಂಡ 29 ರೈಡ್ ಪಾಯಿಂಟ್​ಗಳಿಕೆ ಮಾಡಿದ್ರೆ, ದಬಾಂಗ್ ಡೆಲ್ಲಿ 27 ಪಾಯಿಂಟ್ ಗಳಿಕೆ ಮಾಡಿತು. ಉಳಿದಂತೆ ಉಭಯ ತಂಡಗಳು ಟ್ಯಾಕಲ್​ ಮೂಲಕ 4 ಪಾಯಿಂಟ್​​ ಹಾಗೂ ಆಲೌಟ್ ಮೂಲಕ 2 ಪಾಯಿಂಟ್​ಗಳಿಸಿದವು. ಆದರೆ, ದಬಾಂಗ್​ ಡೆಲ್ಲಿ ಇತರ 4 ಪಾಯಿಂಟ್​ಗಳಿಕೆ ಮಾಡಿದ್ರೆ, ಪಾಟ್ನಾ ಕೇವಲ 1 ಪಾಯಿಂಟ್​ಗಳಿಕೆ ಮಾಡಿತು.

    ಇದನ್ನೂ ಓದಿ: ಕ್ರಿಕೆಟ್​ ಅಭಿಮಾನಿಗಳೇ ಕೇಳಿ! ಮಾರ್ಚ್ 26ರಿಂದ ಶುರುವಾಗಲಿದೆ IPL ಮಹಾಸಮರ

    ಪಾಟ್ನಾ ಪೈರೇಟ್ಸ್‌ ದಾಖಲೆಗೆ ಬ್ರೇಕ್

    ಕಬಡ್ಡಿ ಲೀಗ್ ಟೂರ್ನಿಯಲ್ಲಿ ಇತಿಹಾಸ, ದಾಖಲೆ ಸೇರಿದಂತೆ ಹಲವ ಮೈಲಿಗಲ್ಲು ನಿರ್ಮಿಸಿದ ಕೀರ್ತಿ ಪಾಟ್ನಾ ಪೈರೇಟ್ಸ್‌ಗೆ ಸಲ್ಲಲಿದೆ. ಪಾಟ್ನಾ ಪೈರೇಟ್ಸ್ ಫೈನಲ್ ಪ್ರವೇಶಿದ ಎಲ್ಲಾ ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ ಈ ಬಾರಿ ಈ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದೆ.

    ಪಾಟ್ನಾ ರನ್ನರ್ ಅಪ್ ಸ್ಥಾನಕ್ಕೆ ತಪ್ತಿಪಟ್ಟುಕೊಂಡಿದೆ. 2016ರಲ್ಲಿ ಪಾಟ್ನಾ ಪೈರೇಟ್ಸ್ ಎರಡು ಬಾರಿ ಚಾಂಪಿಯನ್ ಆಗಿದೆ. 2016ರಲ್ಲಿ ಒಂದೇ ವರ್ಷದಲ್ಲಿ ಎರಡು ಬಾರಿ ಪ್ರೋ ಕಬಡ್ಡಿ ಲೀಗ್ ಟೂರ್ನಿ ಆಯೋಜಿಸಲಾಗಿತ್ತು. ಇನ್ನು 2017ರಲ್ಲೂ ಪಾಟ್ನಾ ಪೈರೇಟ್ಸ್ ಪ್ರಶಸ್ತಿ ಗೆದ್ದುಕೊಂಡಿದೆ.

    ಈ ಮೂಲಕ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದ ಏಕೈಕ ಪ್ರೋ ಕಬಡ್ಡೀ ಲೀಗ್ ತಂಡ ಹಾಗೂ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡ ಅನ್ನೋ ಹೆಗ್ಗಳಿಗೆ ಪಾತ್ರವಾಗಿದೆ.
    Published by:ranjumbkgowda1 ranjumbkgowda1
    First published: