PKL 8: ದಬಂಗ್ ಡೆಲ್ಲಿ ಮತ್ತೆ ಟಾಪ್; ಯು ಮುಂಬಾ, ಗುಜರಾತ್ ಜೈಂಟ್ಸ್ ಪಂದ್ಯ ಡ್ರಾ

Pro Kabaddi League 2022: ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ದ ದಬಂಗ್ ಡೆಲ್ಲಿ 32-29 ಅಂಕಗಳಿಂದ ಗೆದ್ದಿತು. ಎರಡನೇ ಪಂದ್ಯದಲ್ಲಿ ಯು ಮುಂಬಾ ಮತ್ತು ಗುಜರಾತ್ ಜೈಂಟ್ಸ್ 24 ಅಂಕಗಳಿಂದ ಡ್ರಾ ಮಾಡಿಕೊಂಡವು.

ಯು ಮುಂಬಾ

ಯು ಮುಂಬಾ

  • News18
  • Last Updated :
  • Share this:
    ಬೆಂಗಳೂರು, ಜ. 18: ಎರಡು ಸಮಬಲ ತಂಡಗಳ ನಡುವಿನ ಕಾಳಗ ಎಂದರೆ ಅದು ಗುಜರಾತ್ ಜೈಂಟ್ಸ್ ಮತ್ತು ಯು ಮುಂಬಾ (Gujarat Giants vs U Mumba match) ನಡುವಿನ ಪಂದ್ಯ. ಇಂದು ನಡೆದ ಪಂದ್ಯದಲ್ಲಿ ಈ ಎರಡು ತಂಡಗಳು 24-24 ಅಂಕಗಳಿಂದ ಸಮ ಮಾಡಿಕೊಂಡವು. ತೂಗುಯ್ಯಾಲೆಯಂತೆ ಸಾಗಿದ ಪಂದ್ಯ ಕೊನೆಗೆ ಡ್ರಾನಲ್ಲಿ ಅಂತ್ಯವಾಯಿತು.

    ಗುಜರಾತ್ ಪರ ರಾಕೇಶ್ ನರವಾಲ್ 6 ಮತ್ತು ಅಜಯ್ ಕುಮಾರ್ 7 ಅಂಕ ಗಳಿಸಿದರು. ಅಜಯ್ ಕುಮಾರ್ ಮಾಡಿದ 14 ರೇಡ್​ನಲ್ಲಿ ಒಮ್ಮೆ ಮಾತ್ರ ಸಿಕ್ಕಿಬಿದ್ದಿದ್ದು.

    ಯು ಮುಂಬಾ ತಂಡದ ತಮಿಳುನಾಡು ಮೂಲದ ಆಟಗಾರ ವಿ ಅಜಿತ್ 8 ಅಂಕ ಗಳಿಸಿ ಮತ್ತೊಮ್ಮೆ ಮಿಂಚಿದರು. ಆದರೆ, ತಂಡದ ಸ್ಟಾರ್ ರೇಡರ್ ಅಭಿಷೇಕ್ ಸಿಂಗ್ ಕೇವಲ 4 ಅಂಕ ಗಳಿಸಿ ನಿರಾಸೆಗೊಳಿಸಿದರು.

    ಪಟ್ನಾ ಪೈರೇಟ್ಸ್​ಗೆ ಸೋಲುಣಿಸಿದ ದಬಂಗ್ ಡೆಲ್ಲಿ:

    ಪಿಕೆಎಲ್ ಎಕ್ಸ್​ಪ್ರೆಸ್ ನವೀನ್ ಕುಮಾರ್ ಅವರಿಲ್ಲದೆಯೂ ಗೆಲ್ಲಬಲ್ಲೆವು ಎಂದು ದಬಂಗ್ ಡೆಲ್ಲಿ ಸಾಬೀತು ಮಾಡಿದೆ. ಇಂದು ನಡೆದ ಮೊದಲ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ ದಬಂಗ್ ಡೆಲ್ಲಿ 32-29 ಅಂಕಗಳಿಂದ (Dabang Delhi beat Patna Pirates) ಗೆಲುವು ಪಡೆದಿದೆ. ನವೀನ್ ಕುಮಾರ್ ಅನುಪಸ್ಥಿತಿಯಲ್ಲಿ ಆಲ್​ರೌಂಡರ್​ಗಳಾದ ವಿಜಯ್ ಮತ್ತು ಸಂದೀಪ್ ನರ್ವಾಲ್ ಮಿಂಚಿದರು.

    ಇದನ್ನೂ ಓದಿ: PKL 8: ಬೆಂಗಾಲ್ ವಿರುದ್ದ ಟೈಟಾನ್ಸ್​ಗೆ ವೀರೋಚಿತ ಸೋಲು; ಪಲ್ಟನ್​ಗೆ ಸೋಲುಣಿಸಿದ ಯೋದ್ಧಾ

    ಇನ್ನೊಂದೆಡೆ ಪಟ್ನಾ ಪೈರೇಟ್ಸ್ ಕೂಡ ಕಠಿಣ ಪೈಪೋಟಿ ನೀಡಿತು. ಆದರೆ ರೇಡರ್​ಗಳಾದ ಸಚಿನ್, ಕರ್ನಾಟಕದ ಪ್ರಶಾಂತ್ ಕುಮಾರ್ ಮತ್ತು ಗುಮನ್ ಸಿಂಗ್ ಉತ್ತಮ ಪ್ರದರ್ಶನ ನೀಡಿದರಾದರೂ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಲಿಲ್ಲ.

    ಈ ಪಂದ್ಯದಲ್ಲಿ ಎರಡೂ ತಂಡಗಳ ಡಿಫೆನ್ಸ್ ಪ್ರಬಲವಾಗಿತ್ತು. ಆದರೆ, ಡೆಲ್ಲಿ ತಂಡದ ರೇಡಿಂಗ್ ಹೆಚ್ಚು ಯಶಸ್ಸು ಕಂಡಿತ್ತು. ಈ ಪಂದ್ಯದ ಗೆಲುವಿನೊಂದಿಗೆ ದಬಂಗ್ ಡೆಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಏರಿತು. ಪಟ್ನಾ ಪೈರೇಟ್ಸ್ ಈ ಪಂದ್ಯದಿಂದ 1 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

    ನಾಳೆಯ ಪಂದ್ಯಗಳು:

    1) ಹರ್ಯಾಣ ಸ್ಟೀಲರ್ಸ್ vs ಪುಣೇರಿ ಪಲ್ಟನ್, ಸಮಯ ಸಂಜೆ 7:30ಕ್ಕೆ

    2) ಜೈಪುರ್ ಪಿಂಕ್ ಪ್ಯಾಂಥರ್ಸ್ vs ತೆಲುಗು ಟೈಟಾನ್ಸ್, ಸಮಯ ರಾತ್ರಿ 8:30ಕ್ಕೆ

    ಇದನ್ನೂ ಓದಿ: PKL 8: ಬೆಂಗಳೂರು ಬುಲ್ಸ್​ಗೆ ಸೋಲುಣಿಸಿದ ಪೈರೇಟ್ಸ್; ಜೈಪುರ್-ತಲೈವಾಸ್ ಪಂದ್ಯ ಡ್ರಾ

    ಅಂಕಪಟ್ಟಿ:

    1) ದಬಂಗ್ ಡೆಲ್ಲಿ: 42 ಅಂಕ
    2) ಪಟ್ನಾ ಪೈರೇಟ್ಸ್: 40 ಅಂಕ
    3) ಬೆಂಗಳೂರು ಬುಲ್ಸ್: 39 ಅಂಕ
    4) ಯು ಪಿ ಯೋದ್ಧಾ: 33 ಅಂಕ
    5) ಜೈಪುರ್ ಪಿಂಕ್ ಪ್ಯಾಂಥರ್ಸ್: 31 ಅಂಕ
    6) ಯು ಮುಂಬಾ: 31 ಅಂಕ
    7) ತಮಿಳ್ ತಲೈವಾಸ್: 30 ಅಂಕ
    8) ಬೆಂಗಾಲ್ ವಾರಿಯರ್ಸ್: 30 ಅಂಕ
    9) ಹರ್ಯಾಣ ಸ್ಟೀಲರ್ಸ್: 24 ಅಂಕ
    10) ಗುಜರಾತ್ ಜೈಂಟ್ಸ್: 23 ಅಂಕ
    11) ಪುಣೇರಿ ಪಲ್ಟನ್: 21 ಅಂಕ
    12) ತೆಲುಗು ಟೈಟಾನ್ಸ್: 12 ಅಂಕ
    Published by:Vijayasarthy SN
    First published: