Murali Sreeshankar: ಪದಕಕ್ಕಾಗಿ ಪರೋಟ ತಿನ್ನೋದನ್ನೇ ಬಿಟ್ಟಿದ್ರಂತೆ ಈ ಸಾಧಕ! ಇದರ ಹಿಂದಿದೆ ಒಂದು ರೋಚಕ ಕಹಾನಿ

ಕಾಮನ್​ವೆಲ್ತ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಕೇರಳದ ಮುರಳಿ ಶ್ರೀಶಂಕರ್ ಅವರು ಇದೇ ರೀತಿ ವಿಭಿನ್ನ ಪ್ರತಿಜ್ಞೆ ಒಂದನ್ನು ಮಾಡಿದ್ದಾರೆ. ಅಲ್ಲದೇ ಈ ಪ್ರತಿಜ್ಞೆ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವತನಕ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಮುರಳಿ ಶ್ರೀಶಂಕರ್

ಮುರಳಿ ಶ್ರೀಶಂಕರ್

  • Share this:
ಕಾಮನ್​ವೆಲ್ತ್ ಗೇಮ್ಸ್ 2022ಕ್ಕೆ (Commonwealth Games 2022) ಈಗಾಗಲೇ ಅದ್ಧೂರಿಯಾಗಿ ಅಂತ್ಯಗೊಂಡಿದೆ. ಅದರಲ್ಲಿಯೂ ಭಾರತ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬರೋಬ್ಬರಿ 61 ಪದಕಗಳನ್ನು ಗೆದ್ದಿದೆ. ಅದರಲ್ಲಿಯೂ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತ ಮುರಳಿ ಶ್ರೀಶಂಕರ್ (Murali Sreeshankar) ಅವರು ದೇಶಕ್ಕಾಗಿ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅವರು ಈ ಪದಕ ಗೆಲ್ಲುವ ಮುನ್ನ ಒಂದು ಪ್ರತಿಜ್ಞೆ ಮಾಡಿದ್ದರಂತೆ. ಆ ಪ್ರತಿಜ್ಞೆ ಮಾಡಿ 2 ವರ್ಷಗಳಾಗಿದ್ದು, ಮುಂಬರುವ ಒಲಂಪಿಕ್ಸ್ (Olympic ) ವರೆಗೂ ಈ ಪ್ರತಿಜ್ಞೆ ಇರುವುದಾಗಿ ಹೇಳಿಕೊಂಡಿದ್ದಾರೆ. ಹಾಗಿದ್ದರೆ, ಮುರಳಿ ಅವರು ಮಾಡಿರುವ ಆ ಪ್ರತಿಜ್ಞೆ ಆದರೂ ಏನು? ಕೇರಳದ (Kerala) ಈ ಹುಡುಗ ಪ್ರತಿಜ್ಞೆ ಮಾಡಿರುವುದಾದರೂ ಏತಕ್ಕಾಗಿ ಎಂಬ ಎಲ್ಲಾ ಪ್ರಶ್ನೆಗೂ ಇಲ್ಲಿದೆ ನೋಡಿ ಉತ್ತರ.

ಪದಕಕ್ಕಾಗಿ ಪರೋಟ ತ್ಯಜಿಸಿದ ಮುರುಳಿ:

ಹೌದು, ಆಟಗಾರರು ತನ್ನ ಗೆಲುವಿನ ಓಟದಲ್ಲಿ ಯಾವುದೇ ಅಡೆತಡೆಗಳು ಬರದಂತೆ ನೋಡಿಕೊಳ್ಳುತ್ತಾರೆ. ಅದರಲ್ಲಿಯೂ ಅವರ ಫಿಟ್ನೆಸ್​​ಗಾಗಿ ಊಟದ ವಿಷಯದಲ್ಲಿಯೂ ಅಷ್ಟೇ ಕಟ್ಟುನಿಟ್ಟಾಗಿ ಇರುತ್ತಾರೆ. ಆದರೆ ಕಾಮನ್​ವೆಲ್ತ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಕೇರಳದ ಮುರಳಿ ಶ್ರೀಶಂಕರ್ ಅವರು ಇದೇ ರೀತಿ ವಿಭಿನ್ನ ಪ್ರತಿಜ್ಞೆ ಒಂದನ್ನು ಮಾಡಿದ್ದಾರೆ. ಅಲ್ಲದೇ ಈ ಪ್ರತಿಜ್ಞೆ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವತನಕ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಮುರಳಿ ಶ್ರೀಶಂಕರ್ ಅವರು ಮೂಲತಃ ಕೇರಳದವರು. ಅಲ್ಲಿನವ ಮೆಚ್ಚಿನ ಊಟದಲ್ಲಿ ಒಂದಾದ ಪರೋಟವನ್ನು ತ್ಯಜಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಈ ಕಥೆ ಹೇಗೆ ಹುಟ್ಟಿಕೊಂಡಿತು ಎಂದು ನನಗೆ ತಿಳಿದಿಲ್ಲ. ಆದರೆ ಒಂದು ದಿನ, ನನಗೆ ನೆನಪಿದೆ, 2019 ರಲ್ಲಿ, ನಾನು ಪರೋಟವನ್ನು ತಿನ್ನುತ್ತಿದ್ದೆ. ನಮಗೆ ಪರೋಟ ಎಷ್ಟು ದೊಡ್ಡದು ಎಂಬುದು ಎಲ್ಲಾ ಮಲಯಾಳಿಗಳಿಗೂ ಗೊತ್ತು. ನನ್ನ ತಂದೆ ನನ್ನನ್ನು ನೋಡಿ, ನೀನು ಇದನ್ನು ತಿನ್ನುತ್ತಿರು. ಅಲ್ಲಿ ಇತರ ಕ್ರೀಡಾಪಟುಗಳು 8.15 ಮೀಟರ್ ಮೇಲಕ್ಕೆ ಜಿಗಿಯುತ್ತಿದ್ದಾರೆ ಎಂದು ಹೇಳಿದರು. ಹಾಗಾಗಿ ನಾನು ಅಂದಿನಿಂದ ಪರೋಟ ತಿನ್ನುವುದನ್ನು ನಿಲ್ಲಿಸಿದೆ. ಅಲ್ಲದೇ ಒಲಿಂಪಿಕ್ಸ್‌ ನಲ್ಲಿ ಪದಕ ಗೆಲ್ಲುವವರೆಗೂ ಪರೋಟವನ್ನು ತಿನ್ನುವುದಿಲ್ಲ ಎಂದು ತಂದೆಯ ಬಳಿ ಹೇಳಿರುವೆ‘ ಎಂದು ಮುರಳಿ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: CWG 2022: ಕಾಮನ್​ವೆಲ್ತ್​ಗೆ ಅದ್ಧೂರಿ ತೆರೆ, ಇಲ್ಲಿದೆ ಭಾರತದ ಪದಕಗಳ ಪಟ್ಟಿ

ಜನರು ನಮ್ಮ ಮೇಲೆ ದೊಡ್ಡ ನಿರೀಕ್ಷೆ ಹೊಂದಿದ್ದಾರೆ:

ಜಂಪ್ ಈವೆಂಟ್‌ಗಳ ಗುಣಮಟ್ಟವು ತುಂಬಾ ಹೆಚ್ಚಾಗಿದೆ. CWG ನಲ್ಲಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಬಹಾಮಾಸ್ ಆಟಗಾರರಿದ್ದಾರೆ. ಅವರನ್ನು ಮೀರಿಸಿ ಪದಕ ಗೆಲ್ಲುವುದು ಅಷ್ಟು ಸುಲಭವಲ್ಲ. ಏಷ್ಯನ್ ಗೇಮ್ಸ್‌ನಲ್ಲೂ ಜನರು ನಮ್ಮಿಂದ ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದರು. ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ 10-15 ದೇಶಗಳು ಭಾಗವಹಿಸುವುದಿಲ್ಲ, ಬದಲಿಗೆ ಇಡೀ ಪ್ರಪಂಚವೇ ಇರುತ್ತದೆ‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: Asia Cup 2022: ಕ್ರಿಕೆಟ್​ ದೇವರ ದಾಖಲೆ ಮೇಲೆ ರೋಹಿತ್​ ಕಣ್ಣು, ಹೊಸ ಸಾಧನೆಗೆ ಹಿಟ್ ಮ್ಯಾನ್ ಮುಹೂರ್ತ ಫಿಕ್ಸ್

ಭಾರತದ ಸಂಪೂರ್ಣ ಪದಕಗಳ ಪಟ್ಟಿ:
ಭಾರತವು ಒಟ್ಟು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳೊಂದಿಗೆ ಒಟ್ಟು 61 ಪದಕಗಳನ್ನು ಗೆದ್ದಿದೆ. ಈ ಬಾರಿ ಕಾಮನ್​ವೆಲ್ತ್ ನಲ್ಲಿ ಭಾರತವು 4ನೇ ಸ್ಥಾನವನ್ನು ಪಡೆದುಕೊಂಡರೆ, ಆಸ್ಟ್ರೇಲಿಯಾವು 1ನೇ ಸ್ಥಾನದಲ್ಲಿದೆ. ಈ ಮೂಲಕ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿದ್ದ ಕಾಮನ್‌ವೆಲ್ತ್ 2022ಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಮುಂಬರುವ  ಕಾಮನ್‌ವೆಲ್ತ್ ಕ್ರೀಡಾಕೂಟವು 2026ರಲ್ಲಿ ಆಸ್ಟ್ರೇಲಿಯದ ವಿಕ್ಟೋರಿಯದಲ್ಲಿ ನಡೆಯಲಿದೆ.
Published by:shrikrishna bhat
First published: