ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ (CWG 2022 Live Updates From Day 2: ) ಭಾರತದ ಸಂಕೇತ್ ಸರ್ಗರ್ (Sanket Sargar) ಪುರುಷರ 55 ಕೆಜಿ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಖಾತೆಯನ್ನು ತೆರೆದಿದ್ದಾರೆ. ಅವರು ಒಟ್ಟು 248 ಕೆಜಿ (113 ಸ್ನ್ಯಾಚ್, 135 ಕ್ಲೀನ್ & ಜರ್ಕ್) ಎತ್ತಿ ಎರಡನೇ ಸ್ಥಾನಕ್ಕೆ ಭಾಜನರಾಗಿದ್ದಾರೆ. ಮಲೇಷ್ಯಾದ ಅನಿಕ್ ಕಸ್ಡಾನ್ಗೆ ಒಟ್ಟು 249 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಅಂದರೆ ಭಾರತದ ಪರ ಸಂಕೇತ್ ಸರ್ಗರ್ ಕೇವಲ ಒಂದೇ ಒಂದು ಕೆಜಿಯಿಂದ ಚಿನ್ನದ ಪದಕದಿಂದ ಮಿಸ್ ಆಗಿದ್ದಾರೆ. ಶ್ರೀಲಂಕಾದ ದಿಲಂಕಾ ಯೊಡಗೆ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
ಸಂಕೇತ್ ಸರ್ಗರ್ ಖೇಲೋ ಇಂಡಿಯಾ ಯೂತ್ ಗೇಮ್ಸ್ ಮತ್ತು ಖೇಲೋ ಇಂಡಿಯಾ ಯುನಿರ್ಸಿಟಿ ಗೇಮ್ಸ್ಗಳಲ್ಲಿಯೂ ಪದಕಕ್ಕೆ ಈಮುನ್ನ ಮುತ್ತಿಟ್ಟಿದ್ದರು.
ಆಗಸ್ಟ್ 8ರ ವರೆಗೆ ನಡೆಯಲಿರುವ ಕ್ರೀಡಾಕೂಟ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಮನ್ವೆಲ್ತ್ ಗೇಮ್ಸ್ ಆರಂಭವಾಗಿದೆ. ಆಗಸ್ಟ್ 8ರ ವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ 72 ದೇಶಗಳ ಕ್ರೀಡಾಪಟುಗಳು ಪದಕ ಗೆಲ್ಲಲು ಸಿದ್ಧರಾಗಿದ್ದಾರೆ.
ವಿವಿಧ ಆಟಗಾರರ ಮೇಲೆ ಹೆಚ್ಚಿದ ಭರವಸೆ ಭಾರತದ ಸ್ಟಾರ್ ಷಟ್ಲರ್ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಸಿಂಧು ತನ್ನ ಗುಣಮಟ್ಟಕ್ಕೆ ತಕ್ಕಂತೆ ಪ್ರದರ್ಶನ ನೀಡಿದರೆ ಚಿನ್ನದ ಪದಕ ಖಚಿತವಾಗಿದ್ದು, ಇವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಆದರೆ ವರದಿಗಳ ಪ್ರಕಾರ, ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಅವರು ಐಸೋಲೇಷನ್ಗೆ ಒಳಗಾಗಿದ್ದಾರೆ.
ಬಾಕ್ಸರ್ ನಿಖತ್ ಝರೀನ್ ಮೇಲೂ ಇದೆ ನಿರೀಕ್ಷೆ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿರುವ ಬಾಕ್ಸರ್ ನಿಖತ್ ಝರೀನ್ ಈ ಬಾರಿ ಭಾರೀ ನಿರೀಕ್ಷೆ ಹೊಂದಿದ್ದಾರೆ. ಇತ್ತೀಚೆಗೆ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ನಂತರ, ಇವರ ಮೇಲಿನ ನಿರೀಕ್ಷೆಗಳು ಹೆಚ್ಚಿವೆ. ಕನಿಷ್ಠ ಕಂಚು ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ.
ಪುರುಷರ ಬಾಕ್ಸಿಂಗ್ ನಲ್ಲಿ ಮತ್ತೊಬ್ಬ ಬಾಕ್ಸರ್ ಮೊಹಮ್ಮದ್ ಹುಸಾಮುದ್ದೀನ್ ಪದಕ ಗೆಲ್ಲಲು ಸಜ್ಜಾಗಿದ್ದಾರೆ. ಪುರುಷರ 57 ಕೆಜಿ ವಿಭಾಗದಲ್ಲಿ ಕಣಕ್ಕೆ ಇಳಿಯಲಿರುವ ಮೊಹಮ್ಮದ್ ಹುಸಾಮುದ್ದೀನ್ ಪದಕ ಗೆಲ್ಲುವ ನಿರೀಕ್ಷೆಯಿದೆ.
ಭಾರತದ ಮತ್ತೊಬ್ಬ ಶಟ್ಲರ್ ಕಿಡಂಬಿ ಶ್ರೀಕಾಂತ್ ಕೂಡ ಭಾರತಕ್ಕೆ ಪದಕ ತಂದುಕೊಡುವ ಸಾಧ್ಯತೆ ಇದೆ. ಪುರುಷರ ಸಿಂಗಲ್ಸ್ ಸರ್ಕ್ಯೂಟ್ನಲ್ಲಿ ಕಳೆದ ವರ್ಷದಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ವರ್ಷ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಶ್ರೀಕಾಂತ್ ರನ್ನರ್ ಅಪ್ ಆಗಿದ್ದರು. ಬರ್ಮಿಂಗ್ ಹ್ಯಾಮ್ ಗೇಮ್ಸ್ ನಲ್ಲಿ ಶ್ರೀಕಾಂತ್ ಗೆ ಪದಕ ಗೆಲ್ಲಲು ವಿಪುಲ ಅವಕಾಶಗಳಿವೆ.
ಭಾರತದ ಡಬಲ್ಸ್ ಸ್ಟಾರ್ ಶಟ್ಲರ್ ಸಾತ್ವಿಕ್ ಸಾಯಿರಾಜ್ ಕೂಡ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಅವರು ಚಿರಾಗ್ ಶೆಟ್ಟಿ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ.
ಇದೇ ಪ್ರಥಮ ಬಾರಿಗೆ ನಡೆಯುತ್ತಿರುವ ಮಹಿಳಾ ಕ್ರಿಕೆಟ್ನಲ್ಲಿ ಭಾರತವೂ ಪದಕ ಗೆಲ್ಲುವ ಸಾಧ್ಯತೆ ಇದೆ. ಇವರುಗಳ ಜೊತೆ ಜ್ಯೋತಿ (ಮಹಿಳೆಯರ 100 ಮೀ ಹರ್ಡಲ್ಸ್) ಅಥ್ಲೆಟಿಕ್ಸ್ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಮಹಿಳಾ ಹಾಕಿ ತಂಡದಲ್ಲಿ ಎತ್ತಿಮರಪು ರಜನಿ ಮತ್ತು ಟೇಬಲ್ ಟೆನಿಸ್ನಲ್ಲಿ ಅಕುಲಾ ಶ್ರೀಜಾ ಪದಕ ಗೆಲ್ಲುವ ನಿರೀಕ್ಷೆ ಹೆಚ್ಚಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ