ನಿಮ್ಮ ಶಬ್ದಬೇಧಿ ನಿಲ್ಲಿಸಿ, ಕೇಳಿ ಸಾಕಾಗಿದೆ: ಮಾಜಿ ಕ್ರಿಕೆಟಿಗನಿಗೆ ಜಡೇಜ ತಿರುಗೇಟು

Ravindra Jadeja: ಸಂಜಯ್ ಮಂಜ್ರೇಕರ್​ ಅವರ ಹೇಳಿಕೆಗೆ ಇದೀಗ ಖುದ್ದು ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜ ತಿರುಗೇಟು ನೀಡಿದ್ದಾರೆ.

zahir | news18
Updated:July 4, 2019, 7:28 PM IST
ನಿಮ್ಮ ಶಬ್ದಬೇಧಿ ನಿಲ್ಲಿಸಿ, ಕೇಳಿ ಸಾಕಾಗಿದೆ: ಮಾಜಿ ಕ್ರಿಕೆಟಿಗನಿಗೆ ಜಡೇಜ ತಿರುಗೇಟು
ರವೀಂದ್ರ ಜಡೇಜಾ
  • News18
  • Last Updated: July 4, 2019, 7:28 PM IST
  • Share this:
ವಿಶ್ವಕಪ್​ ಪಂದ್ಯಾವಳಿಯ ವೀಕ್ಷಕ ವಿವರಣೆಗಾರರಾಗಿರುವ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ವಿವಾದಕ್ಕೀಡಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದ ಧೋನಿಯನ್ನು ವಿಶ್ಲೇಷಿಸಿದ್ದ ಸಂಜಯ್, ಮಾಜಿ ನಾಯಕನ ಅಸಮರ್ಥ ಎಂಬಾರ್ಥದಲ್ಲಿ ವಿವರಣೆ ನೀಡಿದ್ದರು.

ಈ ಬಗ್ಗೆ ಸಮಾಜಿಕ ಜಾಲತಾಣಗಳಲ್ಲೂ ಮಂಜ್ರೇಕರ್ ವಿರುದ್ಧ ಧೋನಿ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು. ಹಾಗೆಯೇ ಜಡೇಜ ಆಟದ ಬಗ್ಗೆ ನೇರವಾಗಿ ವ್ಯಂಗ್ಯವಾಡಿದ್ದ ಮಾಜಿ ಕ್ರಿಕೆಟಿಗ, ನಾನು ಸಣ್ಣ ಪುಟ್ಟ ಆಟಗಾರರ ಅಭಿಮಾನಿಯಲ್ಲ. ಟೆಸ್ಟ್ ಕ್ರಿಕೆಟ್​ನಲ್ಲಿ ಬೌಲರ್​ ಆಗಿ ಜಡೇಜ ಸೂಕ್ತ. ನಾನು ತಂಡದಲ್ಲಿ ಸ್ಪಿನ್ನರ್​ಗಳಿಗಿಂತ ಬ್ಯಾಟ್ಸ್​ಮನ್​ಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದರು. ಸಂಜಯ್ ಮಂಜ್ರೇಕರ್​ ಅವರ ಹೇಳಿಕೆಗೆ ಇದೀಗ ಖುದ್ದು ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜ ತಿರುಗೇಟು ನೀಡಿದ್ದಾರೆ.

ನೀವು ಆಡಿರುವ ಒಟ್ಟು ಪಂದ್ಯಗಳಿಂದ ಎರಡರಷ್ಟು ಸಂಖ್ಯೆಯ ಮ್ಯಾಚ್​ಗಳನ್ನು ನಾನು ಆಡಿದ್ದೇನೆ. ಬೇರೆಯವರ ಪರಿಶ್ರಮ, ಪ್ರತಿಭೆ ಮತ್ತು ಸಾಧನೆಯನ್ನು ಗೌರವಿಸುವುದು ಕಲಿತುಕೊಳ್ಳಿ. ನಿಮ್ಮ ಶಬ್ಧಭೇದಿಯನ್ನು ಕೇಳಿ ಸಾಕಾಗಿದೆ ಎಂದು ಖಾರವಾಗಿ ಟ್ವೀಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇದೇ ವೇಳೆ 1996ರ ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಸಂಜಯ್ ಮಂಜ್ರೇಕರ್ ಅವರ ಸಾಧನೆಯನ್ನು ಟ್ರೋಲ್ ಮಾಡಲಾಗುತ್ತಿದೆ. ಹಾಗೆಯೇ ನಿಮ್ಮ ಮಾತುಗಾರಿಕೆಯ ಮೂಲಕ ಧೋನಿಯಂತಹ ಅದ್ಭುತ ಆಟಗಾರರನ್ನು ಹೀಯಾಳಿಸುವುದು ನಿಲ್ಲಿಸಿ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಈ ಪವಾಡ ನಡೆದರೆ ಪಾಕಿಸ್ತಾನ ಸೆಮಿ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತ..!
First published: July 4, 2019, 7:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading