Hardik Pandya: ಕಪ್‌ ತರದೆ 5 ಕೋಟಿ ಮೌಲ್ಯದ ವಾಚ್ ತಂದ ಹಾರ್ದಿಕ್‌ ಪಾಂಡ್ಯ ವಶಕ್ಕೆ: ಟೈಮೇ ಸರಿ ಇಲ್ಲ..!

ಈ ಕುರಿತು ಟ್ವಿಟರ್​ನಲ್ಲಿ ಸ್ಪಷ್ಟನೆ ನೀಡಿರುವ ಪಾಂಡ್ಯ ಮುಂಬೈ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಸ್ತುಗಳನ್ನು ಸ್ವಯಂಪ್ರೇರಣೆಯಿಂದ ಘೋಷಿಸಿದ್ದೇನೆ ಪಾವತಿಸಬೇಕಾದ ಯಾವುದೇ ಸುಂಕವನ್ನು ಪಾವತಿಸಲು ಸಿದ್ಧ ಎಂದಿದ್ದಾರೆ

ಹಾರ್ದಿಕ್‌ ಪಾಂಡ್ಯ

ಹಾರ್ದಿಕ್‌ ಪಾಂಡ್ಯ

  • Share this:
ಕ್ರಿಕೆಟರ್ ಹಾರ್ದಿಕ್ ಪಾಂಡ್ಯ (Hardik Pandya )ಅವರ 5 ಕೋಟಿ  ರೂ ರೂಪಾಯಿ ಮೌಲ್ಯದ ವಾಚ್‌ಗಳನ್ನು(Hardik Pandya luxury watch,) ಕಸ್ಟಮ್ಸ್ ಅಧಿಕಾರಿಗಳು (Customs Officer) ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಫಾರ್ಮ್‌ ಕಳೆದುಕೊಂಡು ಪರದಾಡುತ್ತಿರುವ ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ 5 ಕೋಟಿ ಮೌಲ್ಯದ 2 ವಾಚ್‌ಗಳು ಜಪ್ತಿ ಆಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಭಾನುವಾರ (ನವೆಂಬರ್ 14) ತಡರಾತ್ರಿ ಭಾರತಕ್ಕೆ ಆಗಮಿಸಿದಾಗ ಕಸ್ಟಮ್ಸ್ ಇಲಾಖೆ 5 ಕೋಟಿ ರೂಪಾಯಿ ಮೊತ್ತದ ಎರಡು ವಾಚ್‌ಗಳನ್ನು ವಶಪಡಿಸಿಕೊಂಡಿದೆ. ಹಾಗಾಗಿ ಈಗ ನಿಜವಾದ ಅರ್ಥದಲ್ಲಿ ಪಾಂಡ್ಯ ಅವರ ಟೈಮೇ ಸರಿ ಇಲ್ಲ ಎಂದರೆ ತಪ್ಪಿಲ್ಲ.

ಎರಡು ದುಬಾರಿ ವಾಚ್​ಗಳ ಮುಟ್ಟುಗೋಲು

ANI ಪ್ರಕಾರ, ಐಸಿಸಿ ಪುರುಷರ T20 ವಿಶ್ವಕಪ್ 2021ರಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ ಟೀಂ ಇಂಡಿಯಾ ಆಟಗಾರರು ಯುಎಇಯಿಂದ ಸ್ವದೇಶಕ್ಕೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಕಸ್ಟಮ್ಸ್ ಅಧಿಕಾರಿಗಳು ಹಾರ್ದಿಕ್ ಪಾಂಡ್ಯ ಬಳಿ 5 ಕೋಟಿ ರೂಪಾಯಿ ಮೌಲ್ಯದ ಎರಡು ಐಷಾರಾಮಿ ವಾಚ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಇನ್​ವಾಯ್ಸ್​ ಇಲ್ಲದ ವಾಚ್​ಗಳು

ಐಸಿಸಿ ಟಿ20 ವಿಶ್ವಕಪ್ 2021 ನಡೆದ ಯುಎಇಯಿಂದ ಭಾರತಕ್ಕೆ ಆಲ್ರೌಂಡರ್ ಪಾಂಡ್ಯ ಹಿಂದಿರುಗಿದ್ದರು. ಆದರೆ, ವಿಮಾನ ನಿಲ್ದಾಣಕ್ಕೆ ಬಂದ ನಂತರ ಕಸ್ಟಮ್ಸ್ ಅಧಿಕಾರಿಗಳು ಹಾರ್ದಿಕ್ ಬಳಿ ಇದ್ದ 5 ಕೋಟಿ ರೂಪಾಯಿ ಮೌಲ್ಯದ ಎರಡು ಐಷಾರಾಮಿ ವಾಚ್‌ಗಳಿಗೆ ಇನ್‌ವಾಯ್ಸ್‌ ಇಲ್ಲ ಎಂಬ ಕಾರಣಕ್ಕಾಗಿ ಕಸ್ಟಮ್ಸ್ ಅಧಿಕಾರಿಗಳು ಅವರ ಕೈಗಡಿಯಾರಗಳನ್ನು ವಶಪಡಿಸಿಕೊಂಡಿದ್ದಾರೆ.

ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ ವಾಚ್​​

ಹಾರ್ದಿಕ್ ವಿಶ್ವದ ಅತ್ಯಂತ ದುಬಾರಿ ವಾಚ್‌ಗಳ ಸಂಗ್ರಹ ಹೊಂದಿದ್ದಾರೆ. ಅವರ ವಾಚ್ ಸಂಗ್ರಹದಲ್ಲಿ ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5711 ಕೂಡ ಸೇರಿದೆ. ಇದರ ಬೆಲೆ ಸುಮಾರು 5 ಕೋಟಿ ರೂ. GQ ಇಂಡಿಯಾ ಪ್ರಕಾರ, ವಾಚ್ 32 ಬ್ಯಾಗೆಟ್-ಕಟ್ ಪಚ್ಚೆಗಳನ್ನು ಹೊಂದಿದೆ ಮತ್ತು ಇದಕ್ಕೆ ಪ್ಲಾಟಿನಂ ಲೇಪನ ಮಾಡಲಾಗಿದೆ.

ಇದನ್ನು ಓದಿ: ಬಿಹಾರದಲ್ಲಿ ಭೀಕರ ಅಪಘಾತ ; ದಿ. ನಟ ಸುಶಾಂತ್​ ಸಿಂಗ್​ ಐವರು ಸಂಬಂಧಿಕರು ಸಾವು

ಆಗಸ್ಟ್‌ನಲ್ಲಿ, ಐಪಿಎಲ್ 2021ರ ಎರಡನೇ ಲೀಗ್‌ನ ಒಂದು ತಿಂಗಳ ಮೊದಲು, ಹಾರ್ದಿಕ್ ತಮ್ಮ ಚಿತ್ರಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಈ ಐಷಾರಾಮಿ ವಾಚ್‌ನ ಚಿತ್ರವೂ ಇತ್ತು. ಕಳೆದ ವರ್ಷ, ಹಾರ್ದಿಕ್ ಹಿರಿಯ ಸಹೋದರ, ಕೃನಾಲ್ ಪಾಂಡ್ಯ ಅವರನ್ನು ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿರುವ ಶಂಕೆಯ ಮೇಲೆ ದುಬೈನಿಂದ ಹಿಂದಿರುಗುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಡಿಆರ್‌ಐ ಅಧಿಕಾರಿಗಳ ಪ್ರಕಾರ, ಇದು ಮೊದಲನೇ ಬಾರಿಯ ಅಪರಾಧ ಎಂಬ ಕಾರಣಕ್ಕೆ ಈ ಪ್ರಕರಣವನ್ನು ಏರ್‌ಪೋರ್ಟ್ ಕಸ್ಟಮ್ಸ್‌ಗೆ ಹಸ್ತಾಂತರಿಸಲಾಗಿದೆ.

ಇದನ್ನು ಓದಿ: ಗುಜರಾತ್​ನ ಜಾಮ್​ನಗರದಲ್ಲಿನ ನಾಥೂರಾಂ ಗೋಡ್ಸೆ ಪ್ರತಿಮೆ ಧ್ವಂಸಗೊಳಿಸಿದ ಕಾಂಗ್ರೆಸ್ಸಿಗರು

ಈ ಮಧ್ಯೆ, ನವೆಂಬರ್ 17ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಟಿ 20ಐ ಸರಣಿಗೆ ಹಾರ್ದಿಕ್ ಟೀಮ್ ಇಂಡಿಯಾ ತಂಡದಲ್ಲಿ ಸೇರ್ಪಡೆಗೊಂಡಿಲ್ಲ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್‌ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 69 ರನ್‌ಗಳಿಸಿ ಸಂಪೂರ್ಣ ವಿಫಲರಾಗಿದ್ದರು.

ಸ್ಪಷ್ಟನೆ ನೀಡಿದ ಪಾಂಡ್ಯ

ಇನ್ನು ಈ ಕುರಿತು ಟ್ವಿಟರ್​ನಲ್ಲಿ ಸ್ಪಷ್ಟನೆ ನೀಡಿರುವ ಪಾಂಡ್ಯ ಮುಂಬೈ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಸ್ತುಗಳನ್ನು ಸ್ವಯಂಪ್ರೇರಣೆಯಿಂದ ಘೋಷಿಸಿದ್ದೇನೆ ಪಾವತಿಸಬೇಕಾದ ಯಾವುದೇ ಸುಂಕವನ್ನು ಪಾವತಿಸಲು ಸಿದ್ಧ. ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳ ಮುಂದೆ ವಿವರ ನೀಡಿದ ಕುರಿತು ಕೆಲ ತಪ್ಪು ಗ್ರಹಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಏನಾಯಿತು ಎಂಬುದರ ಕುರಿತು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಅವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.
Published by:Seema R
First published: