• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • CSK vs SRH, IPL 2023: ಹೈದರಾಬಾದ್​ ವಿರುದ್ಧ ಚೆನ್ನೈ ತಂಡಕ್ಕೆ ಭರ್ಜರಿ ಗೆಲುವು, ಎಸ್​ಆರ್​ಎಚ್​ ವಿರುದ್ಧ ಅಬ್ಬರಿಸಿದ ಕಾನ್ವೆ

CSK vs SRH, IPL 2023: ಹೈದರಾಬಾದ್​ ವಿರುದ್ಧ ಚೆನ್ನೈ ತಂಡಕ್ಕೆ ಭರ್ಜರಿ ಗೆಲುವು, ಎಸ್​ಆರ್​ಎಚ್​ ವಿರುದ್ಧ ಅಬ್ಬರಿಸಿದ ಕಾನ್ವೆ

ಚೆನ್ನೈ ತಂಡಕ್ಕೆ ಜಯ

ಚೆನ್ನೈ ತಂಡಕ್ಕೆ ಜಯ

IPL 2023: ಸಿಎಸ್‌ಕೆ ಪರ ಜಡೇಜಾ ಗರಿಷ್ಠ 3 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18.4 ಓವರ್​ಗಳಿಗೆ 3  ವಿಕೆಟ್ ನಷ್ಟಕ್ಕೆ 138 ರನ್​ ಗಳಿಸುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತು.

  • Share this:

ಐಪಿಎಲ್ 2023ರ (IPL 2023) 29ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಏಡನ್ ಮಾರ್ಕ್ರಾಮ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ (CSK vs SRH) ತಂಡಗಳು ಮುಖಾಮುಖಿ ಆದವು. ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (M. A. Chidambaram Stadium) ನಡೆಯಿತು. ಟಾಸ್​ ಗೆದ್ದ ಚೆನ್ನೈ ತಂಡದ ನಾಯಕ ಎಂಎಸ್​ ಧೋನಿ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟ್​ ಮಾಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ಗೆ 135 ರನ್‌ಗಳ ಗುರಿಯನ್ನು ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 7 ವಿಕೆಟ್‌ಗೆ 134 ರನ್ ಗಳಿಸಿತು. ಸಿಎಸ್‌ಕೆ ಪರ ಜಡೇಜಾ ಗರಿಷ್ಠ 3 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18.4 ಓವರ್​ಗಳಿಗೆ 3  ವಿಕೆಟ್ ನಷ್ಟಕ್ಕೆ 138 ರನ್​ ಗಳಿಸುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತು.


ಮತ್ತೆ ಅಬ್ಬರಿಸಿದ ಕಾನ್ವೆ:


ಇನ್ನು, ಹೈದರಾಬಾದ್​ ನೀಡಿದ ಸಾಧಾರಣ ಮೊತ್ತದ ಟಾರ್ಗೆಟ್​ ಬೆನ್ನಟ್ಟಿದ ಚೆನ್ನೈ ಸೂಪರ್​ ಕಿಂಗ್ಸ್ ತಂಡವು 18.4 ಓವರ್​ಗಳಿಗೆ 3  ವಿಕೆಟ್ ನಷ್ಟಕ್ಕೆ 138 ರನ್ ಗಳಿಸುವ ಮೂಲಕ ಜಯ ದಾಖಲಿಸಿತು. ಸಿಎಸ್​ಕೆ ಪರ ರುತುರಾಜ್​ ಗಾಯಕ್ವಾಡ್​ 35 ರನ್​, ಅಜಿಂಕ್ಯಾ ರಹಾನೆ 9 ರನ್ ಮತ್ತು ಅಂಬಾಟಿ ಯಾಡು 9 ರನ್, ಮೋಯಿನ್, ಅಲಿ 6 ನರ್​ ಗಳಿಸಿದರು. ಆದರೆ ಸತತ ಬ್ಯಾಕ್​ ಟು ಬ್ಯಾಕ್ ಅರ್ಧಶತಕ ಸಿಡಿಸಿದ ಡ್ವೈನ್​ ಕಾನ್ವೆ ಇಂದೂ ಸಹ ಅಬ್ಬರಿಸಿದರು. ಕಾನ್ವೆ 57 ಎಸೆತದಲ್ಲಿ 1 ಸಿಕ್ಸ್ ಮತ್ತು 12 ಫೋರ್​ ಮೂಲಕ 77 ರನ್ ಗಳಿಸಿದರು.


ಬ್ಯಾಟಿಂಗ್​ನಲ್ಲಿ ಎಡವಿದ ಹೈದರಾಬಾದ್​:


ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 7 ವಿಕೆಟ್‌ಗೆ 134 ರನ್ ಗಳಿಸಿತು. ಸನ್​ರೈಸರ್ಸ್​ ಹೈದರಾಬಾದ್​ ಪರ, ಹ್ಯಾರಿ ಬ್ರೂಕ್ 18 ರನ್, ಮಯಾಂಕ್ ಅಗರ್ವಾಲ್ 2 ರನ್, ರಾಹುಲ್ ತ್ರಿಪಾಠಿ 21 ರನ್, ಏಡನ್ ಮಾರ್ಕ್ರಾಮ್ 12 ರನ್, ಹೆನ್ರಿಚ್ ಕ್ಲಾಸೆನ್ 17 ರನ್, ಅಭಿಷೇಕ್ ಶರ್ಮಾ 34 ರನ್, ವಾಷಿಂಗ್ಟನ್ ಸುಂದರ್ 9 ರನ್ ಮತ್ತು ಮಾರ್ಕೊ ಜಾನ್ಸೆನ್ 17 ರನ್ ಗಳಿಸಿದರು. ಆದರೆ ಚೆನ್ನೈ ಬೌಲರ್ಸ್​ ಎದುರು ಹೈದರಾಬಾದ್​ ಬ್ಯಾಟ್ಸ್​ಮನ್​ಗಳು ರನ್​ ಗಳಿಸಲು ಹೆಣಗಾಡಿದರು.


ಇದನ್ನೂ ಓದಿ: IPL 2023: ಐಪಿಎಲ್​ನಿಂದ ನಿಷೇಧಕ್ಕೆ ಒಳಗಾಗ್ತಾರಾ RCB ಕ್ಯಾಪ್ಟನ್​? ಇವ್ರ ಹಾದಿಯಲ್ಲೇ ಇದ್ದಾರೆ ಇನ್ನೂ 4 ಸ್ಟಾರ್​ ಪ್ಲೇಯರ್ಸ್!


ಜಡ್ಡು ಭರ್ಜರಿ ಬೌಲಿಂಗ್​:


ಟಾಸ್​ ಗೆದ್ದು ಮೊದಲು ಬೌಲಿಂಗ್​ ಮಾಡಿದ ಚೆನ್ನೈ ಸೂಪರ್​ ಕಿಂಗ್ಸ್ ಹೈದರಾಬಾದ್​ ಬ್ಯಾಟರ್​ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಚೆನ್ನೈ ಪರ ರವೀಂದ್ರ ಜಡೇಜಾ ಭರ್ಜರಿ ಬೌಲಿಂಗ್​ ಮಾಡಿದರು. ಜಡ್ಡು 4 ಓವರ್​ ಬೌಲ್ ಮಾಡಿ 22 ರನ್ ನೀಡಿ ಪ್ರಮುಖ 3 ವಿಕೆಟ್​ ಪಡೆದರು. ಉಳಿಂದತೆ ಆಕಾಶ್​ ಸಿಂಗ್​ 1 ವಿಕೆಟ್​, ಮಹೇಶ್​ ತೀಕ್ಷಣ್ 1 ವಿಕೆಟ್​ ಮತ್ತು ಮಥೀಶಾ ಪತಿರಣ್​ 1 ವಿಕೆಟ್​ ಪಡೆದರು.




ಐಪಿಎಲ್ 2023 ಅಂಕಪಟ್ಟಿ:


ಇನ್ನು, ಐಪಿಎಲ್ 2023ರ ಅಂಕಪಟ್ಟಿ ನೋಡುವುದಾರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವು 6 ಪಂದ್ಯದಲ್ಲಿ 4ರಲ್ಲಿ ಗೆದ್ದು 2ರಲ್ಲಿ ಸೋತಿದ್ದು, 8 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ 6 ಪಂದ್ಯದಲ್ಲಿ 2ರಲ್ಲಿ ಗೆದ್ದು, 4ರಲ್ಲಿ ಸೋತಿದ್ದು 4 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. ಉಳಿದಂತೆ ರಾಜಸ್ಥಾನ್​ ತಂಡವು ಮೊದಲ ಸ್ಥಾನದಲ್ಲಿ ಹಾಗೂ ಲಕ್ನೋ ಸೂಪರ್​ ಜೈಂಟ್ಸ್ 2ನೇ ಸ್ಥಾನದಲ್ಲಿದೆ.

top videos


    ಉಳಿದಂತೆ ಕ್ರಮವಾಗಿ 3. ಚೆನ್ನೈ ಸೂಪರ್ ಕಿಂಗ್ಸ್, 4. ಗುಜರಾತ್ ಟೈಟನ್ಸ್, 5. ರಾಯಲ್ ಚಾಲೆಂಜರ್ಸ್​ ಬೆಂಗಳೂರು, 6. ಮುಂಬೈ ಇಂಡಿಯನ್ಸ್, 7. ಪಂಜಾಬ್​ ಕಿಂಗ್ಸ್, 8. ಕೋಲ್ಕತ್ತಾ ನೈಟ್​ ರೈಡರ್ಸ್​, 9. ಸನ್​ರೈಸನರ್ಸ್ ಹೈದರಾಬಾದ್ ಮತ್ತು ಅಂತಿಮವಾಗಿ 10ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವಿದೆ.

    First published: