ಐಪಿಎಲ್ 2023ರಲ್ಲಿ ಇಂದು ಡಬಲ್ ಹೆಡ್ಡರ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ 4 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5 ಬಾರಿ ವಿಜೇತ ಮುಂಬೈ ಇಂಡಿಯನ್ಸ್‌ನೊಂದಿಗೆ (CSK vs MI) ಚೆಪಾಕ್‌ನಲ್ಲಿ ಕಣಕ್ಕಿಳಿದಿದೆ. ಬಳಿಕ ಸಂಜೆಯ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RCB vs DC) ತಂಡಗಳು ಸೆಣಸಾಡಲಿದೆ. ಚೆನ್ನೈ ಮತ್ತು ಮುಂಬೈ ಪಂದ್ಯ ಹೆಚ್ಚು ಮಹತ್ವದ್ದಾಗಿದ್ದು, ಉಭಯ ತಂಡಗಳಿಗೆ ಇದು ಅತ್ಯಂತ ಮಹತ್ವದ್ದಾಗಿದೆ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇಂದಿನ ಪಂದ್ಯವನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಜೊತೆಗೆ ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.
ಪಿಚ್ ವರದಿ:
ಪಿಚ್ ಈ ವರ್ಷ 200+ ಸ್ಕೋರ್‌ಗಳೊಂದಿಗೆ ಹೆಚ್ಚಿನ ಸ್ಕೋರಿಂಗ್ ಮೈದಾನವಾಗಿದೆ. ಇದು ಉತ್ತಮ ಬ್ಯಾಟಿಂಗ್ ಪಿಚ್ ಆಗಿದೆ. ವಿಶೇಷವಾಗಿ ಹೊಸ ಚೆಂಡಿನಲ್ಲಿ ಹೆಚ್ಚು ಸ್ವಿಂಗ್ ಬರುತ್ತದೆ. ಚೆನ್ನೈನ ಚೆಪಾಕ್ ಮೈದಾನದ ಸುತ್ತ ಮೋಡ ಕವಿದ ವಾತಾವರಣವಾಗಿದೆ, ಆದ್ದರಿಂದ ಮೊದಲು ಬ್ಯಾಟಿಂಗ್ ಮಾಡುವ ತಂಡ ಹೆಚ್ಚು ರನ್ ಕಲೆಹಾಕುವ ಸಾಧ್ಯತೆ ಇದೆ. ಚೆನ್ನೈನಲ್ಲಿ ಇಂದು ಮಳೆ ನಿರೀಕ್ಷಿಸಲಾಗಿದೆ. ಆದರೆ ಒಳ್ಳೆಯ ಸುದ್ದಿ ಏನೆಂದರೆ, ಮಧ್ಯಾಹ್ನದ ಸಮಯದಲ್ಲಿ ಆಕಾಶವು ಸ್ಪಷ್ಟವಾಗಿದೆ.
🚨 Toss Update 🚨@ChennaiIPL win the toss and elect to field first against @mipaltan.
Follow the match ▶️ https://t.co/hpXamvn55U #TATAIPL | #CSKvMI pic.twitter.com/ucl96iF7p5
— IndianPremierLeague (@IPL) May 6, 2023
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಈವರೆಗೆ ಐಪಿಎಲ್ನ 16 ವರ್ಷಗಳಲ್ಲಿ 35 ಸಂದರ್ಭಗಳಲ್ಲಿ ಮುಖಾಮುಖಿಯಾಗಿವೆ. ಮುಂಬೈ ಈವರೆಗೆ 20 ಗೆಲುವುಗಳೊಂದಿಗೆ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಚೆನ್ನೈ 15 ಬಾರಿ ಗೆದ್ದಿದೆ. ಅಂಕಿಅಂಶಗಳಲ್ಲಿ ಮುಂಬೈ ಹೆಚ್ಚು ಬಲಿಷ್ಠವಾಗಿ ಕಂಡುಬರುತ್ತಿದೆ.
ಇದನ್ನೂ ಓದಿ: IPL 2023: ಮುಂದಿನ ಪಂದ್ಯದಲ್ಲಿ RCB ಪ್ಲೇಯಿಂಗ್ 11ನಲ್ಲಿ ಬದಲಾವಣೆ, ಬೆಂಗಳೂರು ತಂಡಕ್ಕೆ ಬಂತು ಆನೆಬಲ
ಐಪಿಎಲ್ 2023 ಅಂಕಪಟ್ಟಿ:
ಐಪಿಎಲ್ 2023ರ 48 ಪಂದ್ಯಗಳ ನಂತರ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಅದೇ ಸಮಯದಲ್ಲಿ, ಮುಂಬೈ ಇಂಡಿಯನ್ಸ್ ತಂಡವು ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಋತುವಿನಲ್ಲಿ, CSK ತಂಡವು 10 ಪಂದ್ಯಗಳನ್ನು ಆಡಿದೆ. ಏತನ್ಮಧ್ಯೆ, ತಂಡವು 5 ಪಂದ್ಯಗಳನ್ನು ಗೆದ್ದಿದ್ದರೆ, 4 ಪಂದ್ಯಗಳಲ್ಲಿ ಸೋಲು ಎದುರಿಸಿದ್ದಾರೆ. ಇದಲ್ಲದೇ ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. CSK 11 ಅಂಕಗಳನ್ನು ಹೊಂದಿದೆ (+0.639). ಹೊಂದಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತಂಡವು ನಡೆಯುತ್ತಿರುವ ಋತುವಿನಲ್ಲಿ ಇದುವರೆಗೆ ಒಟ್ಟು 9 ಪಂದ್ಯಗಳನ್ನು ಆಡಿದೆ. ಏತನ್ಮಧ್ಯೆ, ತಂಡವು ಐದು ಪಂದ್ಯಗಳನ್ನು ಗೆದ್ದಿದ್ದರೆ, 4 ಪಂದ್ಯಗಳಲ್ಲಿ ಸೋಲು ಎದುರಿಸಿದ್ದಾರೆ. ಮುಂಬೈ 10 ಅಂಕಗಳನ್ನು (-0.373) ಹೊಂದಿದೆ.
ಚೆನ್ನೈ - ಮುಂಬೈ ಪ್ಲೇಯಿಂಗ್ 11:
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11: ರೋಹಿತ್ ಶರ್ಮಾ(ಸಿ), ಇಶಾನ್ ಕಿಶನ್(ಡಬ್ಲ್ಯೂ), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಅರ್ಷದ್ ಖಾನ್.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(w/c), ದೀಪಕ್ ಚಾಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ