ಐಪಿಎಲ್ 2023ರಲ್ಲಿ ಇಂದು ಡಬಲ್ ಹೆಡ್ಡರ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ 4 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5 ಬಾರಿ ವಿಜೇತ ಮುಂಬೈ ಇಂಡಿಯನ್ಸ್‌ನೊಂದಿಗೆ (CSK vs MI) ಚೆಪಾಕ್‌ನಲ್ಲಿ ಸೆಣಸಾಡಿದವು. ಮೊದಲಿಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಚೆನ್ನೈ ದಾಳಿಗೆ ತತ್ತರಿಸಿತು. ಅಂತಿಮವಾಗಿ ಮುಂಬೈ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದರು. ಈ ಮೊತ್ತ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 17.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 140 ರನ್ ಗಳಿಸುವ ಮೂಲಕ 6 ವಿಕೆಟ್ಗಳ ಜಯ ದಾಖಲಿಸಿತು. ಈ ಮೂಲಕ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
2 ವರ್ಷಗಳ ಬಳಿಕ ಚಹಾರ್ ವಿಕೆಟ್:
ದೀಪಕ್ ಚಹಾರ್ 2 ವರ್ಷಗಳ ನಂತರ ಐಪಿಎಲ್‌ನಲ್ಲಿ ವಿಕೆಟ್ ಪಡೆದಿದ್ದಾರೆ. ಇದಕ್ಕೂ ಮೊದಲು, ಅವರು ಐಪಿಎಲ್ 2021 ರ ಫೈನಲ್‌ನಲ್ಲಿ ವಿಕೆಟ್ ಪಡೆದಿದ್ದರು. ನಂತರ ಅವರು ಕೆಕೆಆರ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರನ್ನು ಔಟ್ ಮಾಡಿದ್ದರು. ದೀಪಕ್ ಗಾಯದ ಕಾರಣ IPL 2022 ರಲ್ಲಿ ಆಡಲಿಲ್ಲ ಮತ್ತು 16 ನೇ ಋತುವಿನ ಮೊದಲ 4 ಪಂದ್ಯಗಳಲ್ಲಿ ಅವರು ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
Captain @msdhoni gently pushes one for a single to hit the winning runs 😃@ChennaiIPL register a comfortable victory over #MI at home 👏🏻👏🏻
Scorecard ▶️ https://t.co/hpXamvn55U #TATAIPL | #CSKvMI pic.twitter.com/SCDN047IVk
— IndianPremierLeague (@IPL) May 6, 2023
ಇದನ್ನೂ ಓದಿ: Virat Kohli: ಎಲ್ಲರೂ ಕೊಹ್ಲಿಯಾಗಲು ಸಾಧ್ಯವಿಲ್ಲ! ಯುವ ಆಟಗಾರರಿಗೆ ಹೀಗಂದಿದ್ದೇಕೆ ಕ್ರೀಡಾ ತಜ್ಞರು?
ಗೇಮ್ ಫಿನಿಶ್ ಮಾಡಿದ ಧೋನಿ:
ಇನ್ನು, ಮುಂಬೈ ನೀಡಿದ ಅಲ್ಪಮೊತ್ತ ಬೆನ್ನಟ್ಟಿದ ಚೆನ್ನೈ ತಂಡ 17.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು. ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 16 ಎಸೆತದಲ್ಲಿ 4 ಬೌಂಡರಿ ಮತ್ತು 2 ಸಿಕ್ಸ್ ಮೂಲಕ 30 ರನ್, ಡ್ವೈನ್ ಕಾನ್ವೆ 44 ರನ್, ಅಜಿಂಕ್ಯಾ ರಹಾನೆ 21 ರನ್, ಅಂಬಾಟಿ ರಾಯಡು 12 ರನ್ ಮತ್ತು ಶಿವಂ ದುಬೆ 26 ರನ್ ಹಾಗೂ ಕೊನೆಯಲ್ಲಿ ನಾಯಕ ಎಂಎಸ್ ಧೋನಿ 2 ರನ್ ಗಳಿಸುವ ಮೂಲಕ ತಂಡ ಜಯದ ದಡ ಸೇರಿತು.
ಚೆನ್ನೈ ಭರ್ಜರಿ ಬೌಲಿಂಗ್:
ಇನ್ನು, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಭರ್ಜರಿ ಬೌಲಿಂಗ್ ಹಾಗೂ ಫಿಲ್ಡಿಂಗ್ ಪ್ರದರ್ಶನ ನೀಡಿತು. ಚೆನ್ನೈ ಪರ ದೀಪಕ್ ಚಹಾರ್ 3 ಓವರ್ಗೆ 18 ರನ್ ನೀಡಿ 2 ವಿಕೆಟ್, ತುಷಾರ್ ದೇಶಪಾಂಡೆ 4 ಓವರ್ಗೆ 26 ರನ್ ನೀಡಿ 2 ವಿಕೆಟ್, ರವೀಂದ್ರ ಜಡೇಜಾ 1 ವಿಕೆಟ್ ಹಾಗೂ ಮತೀಷಾ ಪತಿರಾಣ 4 ಓವರ್ಗೆ 15 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಮತ್ತೊಮ್ಮೆ ಚೆನ್ನೈ ಬೌಲರ್ಗಳು ಅಬ್ಬರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ