• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • DC vs CSK: ಚೆನ್ನೈ ಸೂಪರ್​ ಕಿಂಗ್ಸ್​ಗೆ ಭರ್ಜರಿ ಜಯ, ಪ್ಲೇಆಫ್​ಗೆ ಎಂಟ್ರಿಕೊಟ್ಟ ಧೋನಿ ಬಾಯ್ಸ್

DC vs CSK: ಚೆನ್ನೈ ಸೂಪರ್​ ಕಿಂಗ್ಸ್​ಗೆ ಭರ್ಜರಿ ಜಯ, ಪ್ಲೇಆಫ್​ಗೆ ಎಂಟ್ರಿಕೊಟ್ಟ ಧೋನಿ ಬಾಯ್ಸ್

ಚೆನ್ನೈ ಸೂಪರ್​ ಕಿಂಗ್ಸ್​ಗೆ ಜಯ

ಚೆನ್ನೈ ಸೂಪರ್​ ಕಿಂಗ್ಸ್​ಗೆ ಜಯ

CSK vs DC: ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್​ಗೆ 9 ವಿಕೆಟ್​ ನಷ್ಟಕ್ಕೆ 146 ರನ್​ ಗಳಿಸುವ ಮೂಲಕ 78 ರನ್​ಗಳಿಂದ ಸೋಲನ್ನಪ್ಪಿತು. ಈ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್ ತಂಡವು 17 ಅಂಕದೊಂದಿಗೆ ನೇರವಾಗಿ ಪ್ಲೇಆಫ್​ಗೆ ಪ್ರವೇಶಿಸಿದೆ.

  • Share this:

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (DC vs CSK) ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 223 ರನ್ ಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ರುತುರಾಜ್​ ಗಾಯಕ್ವಾಡ್ (Ruturaj Gaikwad) ಮತ್ತು ಡ್ವೈನ್​ ಕಾನ್ವೆ ಭರ್ಜರಿ ಬ್ಯಾಟಿಂಗ್​ ಮಾಲಕ ಸಿಎಸ್​ಕೆ ಬೃಹತ್​ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್​ಗೆ 9 ವಿಕೆಟ್​ ನಷ್ಟಕ್ಕೆ 146 ರನ್​ ಗಳಿಸುವ ಮೂಲಕ 78 ರನ್​ಗಳಿಂದ ಸೋಲನ್ನಪ್ಪಿತು. ಈ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್ ತಂಡವು 17 ಅಂಕದೊಂದಿಗೆ ನೇರವಾಗಿ ಪ್ಲೇಆಫ್​ಗೆ ಪ್ರವೇಶಿಸಿದೆ. ಈ ಮೂಲಕ ಗುಜರಾತ್ (GT) ಬಳಿಕ ಪ್ಲೇಆಫ್​ಗೆ ಲಗ್ಗೆಯಿಟ್ಟ 2ನೇ ತಂಡ ಚೆನ್ನೈ ಆಗಿದೆ.


ಭರ್ಜರಿ ಬ್ಯಾಟಿಂಗ್​ ಮಾಡಿದ ಚೆನ್ನೈ:


ರಿತುರಾಜ್ ಗಾಯಕ್ವಾಡ್ ಬಗ್ಗೆ ಮಾತನಾಡುತ್ತಾ ಮೊದಲ ಪಂದ್ಯದಲ್ಲೇ ಗಾಯಕ್ವಾಡ್ 92 ರನ್‌ಗಳ ಭರ್ಜರಿ ಇನ್ನಿಂಗ್ಸ್‌ನ್ನು ಆಡಿದರು. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗಾಯಕ್ವಾಡ್ ಋತುವಿನ ಮೂರನೇ ಅರ್ಧಶತಕ ಬಾರಿಸಿದರು. ಈ ಮಹತ್ವದ ಪಂದ್ಯದಲ್ಲಿ ಅವರು ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆಗರೆದರು. ಗಾಯಕ್ವಾಡ್ ಕೇವಲ 41 ಎಸೆತಗಳಲ್ಲಿ 3 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ 79 ರನ್ ಗಳಿಸಿದರು.



ಈ ಪಂದ್ಯದಲ್ಲಿ ಅವರು ತಮ್ಮ ಶತಕದ ಹೊಸ್ತಿಲಲ್ಲಿ ಎಡವಿದರು. ಅದೇ ಸಮಯದಲ್ಲಿ, ಡೆವೊನ್ ಕಾನ್ವೇ ತಮ್ಮ ಅರ್ಧಶತಕದ ಸಮೀಪಕ್ಕೆ ಬಂದು ಎಡವಿದರು. ಡೆವೊನ್ ಕಾನ್ವೆ (52 ಎಸೆತಗಳಲ್ಲಿ 87; 3 ಬೌಂಡರಿ, 7 ಸಿಕ್ಸರ್) ಮತ್ತು ರುತುರಾಜ್ ಗಾಯಕ್ವಾಡ್ (50 ಎಸೆತಗಳಲ್ಲಿ 79; 3 ಬೌಂಡರಿ, 7 ಸಿಕ್ಸರ್) ಅರ್ಧಶತಕದೊಂದಿಗೆ ಮಿಂಚಿದರು. ಶಿವಂ ದುಬೆ (9 ಎಸೆತಗಳಲ್ಲಿ 22; 3 ಸಿಕ್ಸರ್) ಬಿರುಸಿನ ಆಟವಾಡಿದರು.


ಇದನ್ನೂ ಓದಿ: IPL 2023 Playoffs: ಇನ್ನೂ ಮುಗಿಯದ ಪ್ಲೇಆಫ್​ ಲೆಕ್ಕಾಚಾರ, ಮುಂಬೈ ಸೋತ್ರೆ ಆರ್​ಸಿಬಿಗೆ ಭರ್ಜರಿ ಲಾಭ


ಡೆಲ್ಲಿಯಲ್ಲಿ ಅಬ್ಬರಿಸಿದ ಜಡೇಜಾ:


ಹಿಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದ ಜಡೇಜಾ ಈ ಪಂದ್ಯದಲ್ಲಿ ವಿಜೃಂಭಿಸಿದರು. ಕೇವಲ 7 ಎಸೆತಗಳಲ್ಲಿ 20 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿದೆ. ಎರಡು ಓವರ್‌ಗಳ ಮೊದಲು ಬ್ಯಾಟಿಂಗ್‌ಗೆ ಬಂದ ಧೋನಿಗೆ ದೊಡ್ಡ ಹೊಡೆತಗಳನ್ನು ಆಡಲು ಸಾಧ್ಯವಾಗಲಿಲ್ಲ. ಅವರು 4 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿದರು.




ವಾರ್ನರ್ ಏಕಾಂಗಿ ಹೋರಾಟ:


ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಚೆನ್ನೈ ಸೂಪರ್ ಕಿಂಗ್ಸ್‌ ನೀಡಿದ ಬೃಹತ್​ ಸ್ಕೋರ್ ಬೆನ್ನಟ್ಟುವಾಗ ಡೆಲ್ಲಿ ಪರ ಹೋರಾಟದ ಇನ್ನಿಂಗ್ಸ್ ಆಡಿದರು. 58 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ನಾಯಕ 86 ರನ್ ಗಳಿಸಿದರು. ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ನಿರೀಕ್ಷೆಯಂತೆ ಆರಂಭಿಸಲು ಸಾಧ್ಯವಾಗಲಿಲ್ಲ. ಕಳೆದ ಪಂದ್ಯದ ಹೀರೋ ಪೃಥ್ವಿ ಶಾ ಬೇಗನೆ ವಿಕೆಟ್ ಕಳೆದುಕೊಂಡು ಫಿಲ್ ಸಾಲ್ಟ್ ಕೂಡ 3 ರನ್ ಗಳಿಸಲಷ್ಟೇ ಶಕ್ತರಾದರು. ರಿಲೇ ರೂಸೋ ಅವರನ್ನೂ ದೀಪಕ್ ಚಹಾರ್ ಔಟ್​ ಮಾಡಿದರು. ಈ ಬೌಲರ್ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ಡೆಲ್ಲಿಯನ್ನು ಹಿಮ್ಮೆಟ್ಟಿಸಿದರು. ಈ ಮೂಲಕ ಡೆಲ್ಲಿ ಸೋಲಿನಿಂದ ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಆಫ್​ಗೆ ಲಗ್ಗೆಯಿಟ್ಟಿದೆ.

First published: