• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • GT vs CSK Qualifier 1: ಗುಜರಾತ್​ ವಿರುದ್ಧ ಚೆನ್ನೈಗೆ ಭರ್ಜರಿ ಜಯ, ಫೈನಲ್​ಗೆ ಧೋನಿ ಬಾಯ್ಸ್ ಎಂಟ್ರಿ

GT vs CSK Qualifier 1: ಗುಜರಾತ್​ ವಿರುದ್ಧ ಚೆನ್ನೈಗೆ ಭರ್ಜರಿ ಜಯ, ಫೈನಲ್​ಗೆ ಧೋನಿ ಬಾಯ್ಸ್ ಎಂಟ್ರಿ

ಚೆನ್ನೈ ಸೂಪರ್​ ಕಿಂಗ್ಸ್​ಗೆ ಜಯ

ಚೆನ್ನೈ ಸೂಪರ್​ ಕಿಂಗ್ಸ್​ಗೆ ಜಯ

GT vs CSK Qualifier 1: ಲೀಗ್​ ಹಂತದಲ್ಲಿ 2ನೇ ಸ್ಥಾನದ ಮೂಲಕ ಪ್ಲೇಆಫ್​ಗೆ ಪ್ರವೇಶಿಸಿದ ಚೆನ್ನೈ ಸೂಪರ್​ ಕಿಂಗ್ಸ್ ಇಲ್ಲಿ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆಲ್ಲುವ ಮೂಲಕ ಐಪಿಎಲ್ 2023ರಲ್ಲಿ ಫೈನಲ್​ ಪ್ರವೇಶಿಸಿದ ಮೊದಲ ತಂಡವಾಗಿದೆ.

 • Share this:

ಕ್ವಾಲಿಫೈಯರ್ 1 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಸ್ಕೋರ್ ಗಳಿಸಿತು. ಚೆಪಾಕ್‌ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK vs GT) ಮೊದಲು ಬ್ಯಾಟ್ ಮಾಡಿತು. 20 ಓವರ್‌ಗಳಲ್ಲಿ 7 ವಿಕೆಟ್‌ಗೆ 172 ರನ್‌ ಗಳಿಸಿತು. ಈ ಮಹತ್ವದ ಪಂದ್ಯದಲ್ಲಿ ಚೆನ್ನೈ ತಂಡ ಕೊನೆಯ ಓವರ್​ನಲ್ಲಿ ಅಬ್ಬರಿಸುವ ಮೂಲಕ ಉತ್ತಮ ಮೊತ್ತ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡವು ನಿಗದಿತ 20 ಓವರ್​ನಲ್ಲಿ 10 ವಿಕೆಟ್​ ನಷ್ಟಕ್ಕೆ 157 ರನ್​ ಗಳಿಸುವ ಮೂಲಕ 15 ರನ್​ಗಳಿಂದ ಸೋಲನ್ನಪ್ಪಿತು. ಈ ಮೂಲಕ ಐಪಿಎಲ್ 2023ರ ಮೊದಲ ತಂಡವಾಗಿ ಫೈನಲ್​ಗೆ ಚೆನ್ನೈ ಲಗ್ಗೆಯಿಟ್ಟಿದೆ.


ಫೈನಲ್​ಗೆ ಲಗ್ಗೆಯಿಟ್ಟ ಚೆನ್ನೈ ಬಾಯ್ಸ್:


ಇನ್ನು, ಲೀಗ್​ ಹಂತದಲ್ಲಿ 2ನೇ ಸ್ಥಾನದ ಮೂಲಕ ಪ್ಲೇಆಫ್​ಗೆ ಪ್ರವೇಶಿಸಿದ ಚೆನ್ನೈ ಸೂಪರ್​ ಕಿಂಗ್ಸ್ ಇಲ್ಲಿ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆಲ್ಲುವ ಮೂಲಕ ಐಪಿಎಲ್ 2023ರಲ್ಲಿ ಫೈನಲ್​ ಪ್ರವೇಶಿಸಿದ ಮೊದಲ ತಂಡವಾಗಿದೆ. ಆದರೆ ಗುಜರಾತ್​ಗೆ ಫೈನಲ್​ ಪ್ರವೇಶಿಸಲು ಇನ್ನೊಂದು ಅವಕಾಶವಿದ್ದು, ನಾಳೆ ನಡೆಯಲಿರುವ ಮುಂಬೈ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಎಲಿಮಿನೇಟರ್​ ಪಂದ್ಯದಲ್ಲಿ ಸೆಣಸಾಡಲಿದೆ.


ಸಿಎಸ್​ಕೆ ಬೌಲಿಂಗ್​ಗೆ ಗುಜರಾತ್​ ತತ್ತರ:


ಇನ್ನು, ಚೆನ್ನೈ ಸೂಪರ್​ ಕಿಂಗ್ಸ್ ನೀಡಿದ ಟಾರ್ಗೆಟ್​ ಬೆನ್ನಟ್ಟಿದ ಗುಜರಾತ್  20 ಓವರ್​ನಲ್ಲಿ 10 ವಿಕೆಟ್​ ನಷ್ಟಕ್ಕೆ 157 ರನ್​ ಗಳಿಸಿತು. ಟೈಟನ್ಸ್ ಪರ, ಶುಭಮನ್ ಗಿಲ್ 42, ವೃದ್ಧಿಮಾನ್ ಸಹಾ 12 ರನ್, ಹಾರ್ದಿಕ್ ಪಾಂಡ್ಯ 8 ರನ್, ದಾಸುನ್ ಶನಕ 17 ರನ್, ಡೇವಿಡ್ ಮಿಲ್ಲರ್ 4 ರನ್, ರಾಹುಲ್ ತೆವಾಟಿಯಾ 3 ರನ್, ವಿಜಯ್ ಶಂಕರ್ 14 ರನ್, ದರ್ಶನ್ ನಲ್ಕಂಡೆ ಶೂನ್ಯ ಮತ್ತು ರಶೀಧ್ ಖಾನ್​ 30 ರನ್ ಗಳಿಸಿ ಔಟಾದರು. ಇತ್ತ ಚೆನ್ನೈ ಬೌಲರ್​ಗಳು ಇಂದು ಭರ್ಜರಿ ಬೌಲಿಂಗ್​ ಪ್ರದರ್ಶನ ನೀಡಿದ್ದು, ದೀಪಕ್​ ಚಹಾರ್​ 4 ಓವರ್​ಗೆ 29 ರನ್ ನೀಡಿ 2 ವಿಕೆಟ್​, ಮಹೇಶ್​ ತೀಕ್ಷಣ 2 ವಿಕೆಟ್​ ಮತ್ತು ರವೀಂದ್ರ ಜಡೇಜಾ 4 ಓವರ್​ಗೆ 18 ರನ್ ನೀಡಿ 2 ಪ್ರಮುಖ ವಿಕೆಟ್, ತುಷಾರ್​ ದೇಶಪಾಂಡೆ 1 ವಿಕೆಟ್​ ಪಡೆದು ಮಿಂಚಿದರು. ತ


ಇದನ್ನೂ ಓದಿ: WTC 2023 Final: ಟೀಂ ಇಂಡಿಯಾಗೆ ಬಿಗ್​ ಶಾಕ್​, ಡಬ್ಲ್ಯೂಟಿಸಿ ಫೈನಲ್​ನಿಂದ ಕೊಹ್ಲಿ ಔಟ್?


ಉತ್ತಮ ಬ್ಯಾಟಿಂಗ್​ ಮಾಡಿದ ಗಾಯಕ್ವಾಡ:


ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊಹಮ್ಮದ್ ಶಮಿ ಮತ್ತು ನಲ್ಕಂಡೆ ಉತ್ತಮ ಬೌಲಿಂಗ್ ಮಾಡಿದ ಚೆನ್ನೈ ಆರಂಭಿಕರು ರನ್‌ಗಾಗಿ ಪರದಾಡಿದರು. ರುತುರಾಜ್ ಗಾಯಕ್ವಾಡ್ ತಮ್ಮ ವೈಯಕ್ತಿಕ ಸ್ಕೋರ್ 2 ರನ್ ಗಳಿಸಿದ್ದಾಗ ನಲ್ಕಂಡೆ ಬೌಲಿಂಗ್‌ನಲ್ಲಿ ಗಿಲ್‌ಗೆ ಕ್ಯಾಚ್ ನೀಡಿದರು. ಆದರೆ ಅದು ನೋ ಬಾಲ್ ಆಗಿದ್ದರಿಂದ ಬಚಾವ್​ ಆದರು.


ರುತುರಾಜ್ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ಇಲ್ಲಿಂದ ರುತುರಾಜ್ ವೇಗವಾಗಿ ಆಡಿದರು. ಇನ್ನೊಂದು ತುದಿಯಲ್ಲಿ ಕಾನ್ವೆ ನಿಧಾನವಾಗಿ ಬ್ಯಾಟಿಂಗ್​ ಮಾಡಿದರು. ಆದರೆ ರುತುರಾಜ್ ವೇಗವಾಗಿ ಆಡಿದ್ದರಿಂದ ಚೆನ್ನೈ ಸ್ಕೋರ್ ಬೋರ್ಡ್ ವೇಗವಾಗಿ ಮುನ್ನಡೆಯಿತು. ಈ ಅನುಕ್ರಮದಲ್ಲಿ ರುತುರಾಜ್ ಅರ್ಧಶತಕ ಗಳಿಸಿದರು. 87 ರನ್ ಜೊತೆಯಾಟದ ಮೂಲಕ ರುತುರಾಜ್ ಔಟಾದರು. ಒನ್ ಡೌನ್ ನಲ್ಲಿ ಬಂದ ಶಿವಂ ದುಬೆ (1) ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಅಜಿಂಕ್ಯ ರಹಾನೆ (17) ಮತ್ತು ಅಂಬಟಿ ರಾಯಡು (17) ನಿರಾಸೆ ಮೂಡಿಸಿದರು.


top videos  ಧೋನಿ (1) ಹೀಗೆ ಬಂದು ಹೀಗೆ ಹೋದರು. ಕೊನೆಯಲ್ಲಿ ಜಡೇಜಾ ಮತ್ತು ಮೊಯಿನ್ ಅಲಿ ಅಬ್ಬರಿಸಿದರು. ರುತುರಾಜ್ ಗಾಯಕ್ವಾಡ್ (44 ಎಸೆತಗಳಲ್ಲಿ 60; 7 ಬೌಂಡರಿ, 1 ಸಿಕ್ಸರ್) ಅರ್ಧಶತಕದೊಂದಿಗೆ ಮಿಂಚಿದರು. ಮತ್ತೊಬ್ಬ ಆರಂಭಿಕ ಆಟಗಾರ ಡೆವೊನ್ ಕಾನ್ವೆ (34 ಎಸೆತಗಳಲ್ಲಿ 40; 4 ಬೌಂಡರಿ). ಕೊನೆಯಲ್ಲಿ ರವೀಂದ್ರ ಜಡೇಜಾ (16 ಎಸೆತಗಳಲ್ಲಿ ಔಟಾಗದೆ 22; 2 ಬೌಂಡರಿ) ಬಿರುಸಿನ ಆಟವಾಡಿದರು. ಗುಜರಾತ್ ಬೌಲರ್‌ಗಳಲ್ಲಿ ಮೋಹಿತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದರು. ದುಬೆ 3 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದರು. ಐಪಿಎಲ್ 2023 ರಲ್ಲಿ, ಶಿವಂ ದುಬೆ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಕ್ಲೀನ್ ಬೌಲ್ಡ್ ಆದ ತಕ್ಷಣ ಸಿಎಸ್ ಕೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿತ್ತು. ಈ ಐಪಿಎಲ್‌ನಲ್ಲಿ ಶಿವಂ ದುಬೆ ಅವರ ಎರಡನೇ ಸಿಂಗಲ್ ಡಿಜಿಟ್ ಸ್ಕೋರ್ ಇದಾಗಿದೆ.

  First published: