ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2023) 55ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿ ಆಗಿದೆ. ಈ ಋತುವಿನಲ್ಲಿ ಚೆನ್ನೈ ತಂಡದ ಪ್ರದರ್ಶನ ಸ್ಫೋಟಕವಾಗಿದ್ದು, ಕಳೆದ 5 ಪಂದ್ಯಗಳಲ್ಲಿ ದೆಹಲಿ ಅದ್ಭುತ ಪುನರಾಗಮನ ಮಾಡಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಚೆನ್ನೈ ಎರಡನೇ ಸ್ಥಾನದಲ್ಲಿದ್ದರೆ ಡೆಲ್ಲಿ 10ನೇ ಸ್ಥಾನದಲ್ಲಿದೆ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ (MS Dhoni) ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಉಭಯ ತಂಡ ಬದಲಾವಣೆಗಳು:
ಚೆನ್ನೈ ಸೂಪರ್ ಕಿಂಗ್ಸ್ ಒಂದು ಬದಲಾವಣೆ ಮಾಡಿದ್ದು, ಶಿವಂ ದುಬೆ ಬದಲಿಗೆ ಅಂಬಟಿ ರಾಯುಡು ಆಡುವ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಒಂದು ಬದಲಾವಣೆ ಮಾಡಿದ್ದು, ಮನೀಶ್ ಪಾಂಡೆ ಬದಲಿಗೆ ಲಲಿತ್ ಯಾದವ್ ಚಾನ್ಸ್ ಪಡೆದಿದ್ದಾರೆ.
ಐಪಿಎಲ್ 2023 ಅಂಕಪಟ್ಟಿ:
ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದೆ. ಮೊದಲ 5 ಪಂದ್ಯಗಳಲ್ಲಿ ಸೋಲನುಭವಿಸಿದ್ದು, ತಂಡ ಕಳೆದ 5ರಲ್ಲಿ 4ರಲ್ಲಿ ಜಯ ಸಾಧಿಸಿದೆ. ಚೆನ್ನೈ ತಂಡ 11 ಪಂದ್ಯಗಳನ್ನಾಡಿದ್ದು 6ರಲ್ಲಿ ಗೆದ್ದಿದ್ದರೆ, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ಡೆಲ್ಲಿ ತಂಡ ಗೆಲುವು ಸಾಧಿಸಿದೆ. ಇನ್ನು ಚೆನ್ನೈ ಬಗ್ಗೆ ಹೇಳುವುದಾದರೆ, ಕಳೆದ ಪಂದ್ಯದಲ್ಲಿ ಜಯ ಸಾಧಿಸಿದ್ದು, ಅದಕ್ಕೂ ಮುನ್ನ ನಡೆದ ಪಂದ್ಯ ಮಳೆಯಿಂದಾಗಿ ಪೂರ್ಣಗೊಳ್ಳಲಿಲ್ಲ.
ಇದನ್ನೂ ಓದಿ: IPL2023 Playoffs: ಸೋತ್ರೂ RCB ಪ್ಲೇಆಫ್ ತಲುಪಬಹುದು! ಇಲ್ಲಿದೆ ಹೊಸ ಲೆಕ್ಕಾಚಾರ
ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಗೆಲುವುಗಳನ್ನು ದಾಖಲಿಸಿದೆ ಮತ್ತು ಇನ್ನೂ 4 ಪಂದ್ಯಗಳು ಉಳಿದಿವೆ. ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದರೆ ತಂಡವು 16 ಅಂಕಗಳನ್ನು ತಲುಪಬಹುದು. ಚೆನ್ನೈ ತಂಡ 13 ಅಂಕಗಳನ್ನು ಹೊಂದಿದ್ದು, ಇನ್ನೂ 3 ಪಂದ್ಯಗಳು ನಡೆಯಬೇಕಿದೆ. ಚೆನ್ನೈ ತಂಡಕ್ಕೆ ಪ್ಲೇಆಫ್ ಹಾದಿ ಸುಲಭವಾಗಿದೆ.
ಹೆಡ್ ಟು ಹೆಡ್ ರೆಕಾರ್ಡ್ಸ್:
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ 27 ಬಾರಿ ಮುಖಾಮುಖಿಯಾಗಿದೆ. ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಸಿಎಸ್‌ಕೆ ಈ ಪೈಕಿ 17 ಪಂದ್ಯಗಳನ್ನು ಗೆದ್ದಿದ್ದರೆ, ಡಿಸಿ 10 ಪಂದ್ಯಗಳನ್ನು ಗೆದ್ದಿದೆ. ಈ ಎರಡು ತಂಡಗಳನ್ನು ಒಳಗೊಂಡ ಪಂದ್ಯಗಳಲ್ಲಿ ಗರಿಷ್ಠ ಮೊತ್ತವು ಚೆನ್ನೈ ಸೂಪರ್ ಕಿಂಗ್ಸ್ 222 ಆಗಿದೆ ಮತ್ತು ಕಡಿಮೆ ಮೊತ್ತವು ಡೆಲ್ಲಿ ಕ್ಯಾಪಿಟಲ್ಸ್ ತಂಡವು 86 ರನ್ ಗಳಿಸಿತ್ತು.
ಚೆನ್ನೈ ಪಿಚ್ ವರದಿ:
ಬ್ಯಾಟರ್‌ಗಳು ಈ ವರ್ಷ ಚೆಪಾಕ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದುವರೆಗೆ ನಾಲ್ಕು ಬಾರಿ 200 ಅಥವಾ ಅದಕ್ಕಿಂತ ಹೆಚ್ಚು ಸ್ಕೋರ್ ಮಾಡಲಾಗಿದೆ. ಸ್ಪಿನ್ನರ್‌ಗಳು ಪಂದ್ಯದ ಮದ್ಯಂತರದಲ್ಲಿ ಹೆಚ್ಚಿನ ಪ್ರಭಾವ ಬೀರಬಹುದು. ಆದರೆ ಇಬ್ಬನಿ ಪ್ರಮುಖ ಅಂಶವಾಗಲಿದೆ. ಚೇಸಿಂಗ್‌ಗೆ ಆದ್ಯತೆ ಹೆಚ್ಚಿರುವುದುರಿಂದ ಚೇಸಿಂಗ್ ತಂಡ ಗೆಲ್ಲುವ ಸಾಧ್ಯತೆ ಹೆಚ್ಚು.
ಡೆಲ್ಲಿ - ಚೆನ್ನೈ ಪ್ಲೇಯಿಂಗ್ 11:
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (WK), ಮಿಚೆಲ್ ಮಾರ್ಷ್, ರಿಲೀ ರೊಸೊವ್, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ಲಲಿತ್ ಯಾದವ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ಇಶಾಂತ್ ಶರ್ಮಾ.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಶಿವಂ ದುಬೆ, ಅಂಬಟಿ ರಾಯುಡು, ಎಂಎಸ್ ಧೋನಿ (wk/ನಾಯಕ), ಮೊಯಿನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ