'ಮುಂದಿನ ಐಪಿಎಲ್​​ ವೇಳೆಗೆ ಖಂಡಿತವಾಗಿ ತಮಿಳು ಕಲಿಯುತ್ತೇನೆ': ಎಂ. ಎಸ್. ಧೋನಿ

news18
Updated:August 5, 2018, 5:27 PM IST
'ಮುಂದಿನ ಐಪಿಎಲ್​​ ವೇಳೆಗೆ ಖಂಡಿತವಾಗಿ ತಮಿಳು ಕಲಿಯುತ್ತೇನೆ': ಎಂ. ಎಸ್. ಧೋನಿ
news18
Updated: August 5, 2018, 5:27 PM IST
ನ್ಯೂಸ್ 18 ಕನ್ನಡ

ತಮಿಳುನಾಡಿನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಟಿಎನ್​​ಪಿಎಲ್​​​(ತಮಿಳುನಾಡಿ ಪ್ರೀಮಿಯರ್ ಲೀಗ್) ಪಂದ್ಯಕ್ಕೆ ಕೂಲ್ ಕ್ಯಾಪ್ಟನ್ ಎಂ. ಎಸ್. ಧೋನಿ ಹಾಜರಾಗಿದ್ದರು. ನಿನ್ನೆ ನಡೆದ ಮಧುರೈ ಪ್ಯಾಂಥರ್ಸ್​​​ ಹಾಗೂ ಲಿಕಾ ಕೊವೈ ಕಿಂಗ್ಸ್​ ನಡುವಣ ಪಂದ್ಯದಲ್ಲಿ ಮಾಹಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ನಾನು ಮುಂದಿನ ಐಪಿಎಲ್​ ಆಗುವ ಹೊತ್ತಿಗೆ ಖಂಡಿತವಾಗಿಯು ತಮಿಳು ಕಲಿಯುತ್ತೇನೆ ಎಂದಿದ್ದಾರೆ.

'ಪ್ರತೀ ಬಾರಿ ನಾನು ಚೆನ್ನೈ ಸೂಪರ್ ಕಿಂಗ್ಸ್​ ಪರ ಐಪಿಎಲ್ ಆಡುವ ವೇಳೆ ಒಂದಿಷ್ಟು ತಮಿಳು ಭಾಷೆಯನ್ನು ಕಲಿಯುತ್ತೇನೆ. ಆದರೆ, ಟೂರ್ನಮೆಂಟ್ ಮುಗಿದ ಬಳಿಕ ಕಲಿತ ಭಾಷೆ ಮರೆತು ಹೋಗುತ್ತದೆ. ಆದರೆ ಮುಂದಿನ ಐಪಿಎಲ್ ವೇಳೆ ಖಂಡಿತವಾಗಿಯು ತಮಿಳು ಕಲಿಯುತ್ತೇನೆ' ಎಂದು ಹೇಳಿದ್ದಾರೆ.

 


Loading...ಇನ್ನು ತಮಿಳಿನಾಡು ನನ್ನ ನೆಚ್ಚಿನ ತಾಣ. ಪ್ರತಿ ವರ್ಷ ತಮಿಳುನಾಡು ಪ್ರೀಮಿಯರ್ ಲೀಗ್​​ನ ಕೆಲ ಪಂದ್ಯಗಳನ್ನು ವೀಕ್ಷಿಸಲು ಬರುತ್ತಿದ್ದೆ. ಈ ವರ್ಷ ಇದೇ ಮೊದಲ ಬಾರಿ ಪಂದ್ಯ ವೀಕ್ಷಣೆಗೆ ಬಂದಿದ್ದು, ಟಿಎಲ್​​ಪಿಎಲ್​​ ಸಾಕಷ್ಟು ಕುತೂಹಲ ಕೆರಳಿಸಿದೆ ಎಂದು ಧೋನಿ ಹೇಳೀದ್ದಾರೆ.
First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ