• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • MS Dhoni: ಧೋನಿ ನಿವೃತ್ತಿ ಮತ್ತೆ ಮುಂದೂಡಿಕೆ? ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ CSK ಆಟಗಾರ

MS Dhoni: ಧೋನಿ ನಿವೃತ್ತಿ ಮತ್ತೆ ಮುಂದೂಡಿಕೆ? ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ CSK ಆಟಗಾರ

ಧೋನಿ

ಧೋನಿ

MS Dhoni: ಐಪಿಎಲ್ 2023ರ ನಂತರವೂ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಆಡುವುದನ್ನು ಮುಂದುವರಿಸಬಹುದು ಎಂಬ ಮಾಹಿತಿಯನ್ನು ಚೆನ್ನೈ ತಂಡದ ಸ್ಟಾರ್​ ಪ್ಲೇಯರ್ ಹೇಳಿದ್ದು, ಇದೀಗ ಸಖತ್​ ಚರ್ಚೆಗೆ ಕಾರಣವಾಗಿದೆ.

 • Share this:

ಐಪಿಎಲ್ 2023ರ ನಂತರವೂ ಚೆನ್ನೈ ಸೂಪರ್​ ಕಿಂಗ್ಸ್ (CSK) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಆಡುವುದನ್ನು ಮುಂದುವರಿಸಬಹುದು ಎಂದು ಸಿಎಸ್​ಕೆ ವೇಗದ ಬೌಲರ್ ದೀಪಕ್ ಚಹಾರ್ (Deepak Chaha) ಹೇಳಿದ್ದಾರೆ. ಚಹಾರ್ ಪ್ರಕಾರ, ಈ ಬಾರಿಯ ಐಪಿಎಲ್‌ನಲ್ಲಿ (IPL 2023) ಧೋನಿ ಕೊನೆಯ ಬಾರಿಗೆ ಆಡುವುದನ್ನು ಜನರು ನೋಡುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಇದು ಲೀಗ್‌ನಲ್ಲಿ ಮಹಿಯ ಕೊನೆಯ ವರ್ಷ ಎಂದು ಯಾರೂ ಹೇಳಿಲ್ಲ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.


ಧೋನಿ ವೃತ್ತಿಜೀವನದ ಬಗ್ಗೆ ಸಾಕಷ್ಟು ಚರ್ಚೆ:


ತಮ್ಮ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 4 ಬಾರಿ ಚಾಂಪಿಯನ್ ಮಾಡಿದ ಎಂಎಸ್ ಧೋನಿ ಅವರ ಐಪಿಎಲ್ ವೃತ್ತಿಜೀವನದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಸಿಎಸ್‌ಕೆ ಬೌಲರ್ ದೀಪಕ್ ಚಹಾರ್, ಧೋನಿ ನಿವೃತ್ತಿಯ ಬಗ್ಗೆ ನಮಗೆ ಏನೂ ತಿಳಿದಿಲ್ಲ. ಅವರು ಎಷ್ಟು ಸಾಧ್ಯವೋ ಅಷ್ಟು ಆಡಬೇಕೆಂದು ನಾವು ಬಯಸುತ್ತೇವೆ. ಧೋನಿ ಯಾವಾಗ ನಿವೃತ್ತಿ ಹೊಂದುತ್ತಾರೆ ಎಂದು ಹೇಳಬೇಕಾಗಿಲ್ಲ.


ಧೋನಿಗೆ ಯಾವಾಗ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಗೊತ್ತಿದೆ. ಅವರು ಟೆಸ್ಟ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದಾಗ ಅವರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಅವರು ಆಡುವುದನ್ನು ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. 2018 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವ ದೀಪಕ್ ಚಹಾರ್, ಈ ಸಮಯದಲ್ಲಿ ಧೋನಿ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ICC ODI World Cup 2023: ಈ ಬಾರಿ ಪಾಕಿಸ್ತಾನ ತಂಡ ಏಕದಿನ ವಿಶ್ವಕಪ್​ ಗೆಲ್ಲಲಿದೆ, ಭವಿಷ್ಯ ನುಡಿದ ಮಾಜಿ ಆಟಗಾರ


ಇನ್ನೂ 4-5 ವರ್ಷ ಆಡಬೇಕು:


ಧೋನಿ ಮುಂದಿನ ಮೂರು-ನಾಲ್ಕು ಸೀಸನ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಬಹುದು ಎಂದು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ ಹೊರತುಪಡಿಸಿ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡದಿದ್ದರೂ, ಧೋನಿ ತನ್ನನ್ನು ತಾನು ಅತ್ಯಂತ ಫಿಟ್ ಆಗಿ ಇಟ್ಟುಕೊಂಡಿದ್ದಾರೆ. ಅವರು 2020 ರಲ್ಲಿ ತಮ್ಮ ಅಂತರರಾಷ್ಟ್ರೀಯ ನಿವೃತ್ತಿಯನ್ನು ಘೋಷಿಸಿದರು ಮತ್ತು ಅಂದಿನಿಂದ ಅವರು ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.
ಐಪಿಎಲ್ 2023 ಧೋನಿಗೆ ಕೊನೆಯದಾಗಿರಬಹುದು ಎಂದು ಕೇಳಿದ್ದೇನೆ, ಆದರೆ ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮುಂದಿನ ಮೂರು-ನಾಲ್ಕು ವರ್ಷಗಳ ಕಾಲ ಆಡಲು ಸಾಕಷ್ಟು ಫಿಟ್ ಆಗಿದ್ದಾರೆ ಎಂದು ಶೇನ್ ವ್ಯಾಟ್ಸನ್ ಹೇಳಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ಯಶಸ್ವಿ ನಾಯಕ. ಅವರು ಚೆನ್ನೈ ಸೂಪರ್ ಕಿಂಗ್ಸ್‌ಗೆ ನಾಲ್ಕು ಪ್ರಶಸ್ತಿಗಳನ್ನು ಗೆಲ್ಲಿಸಿದ್ದಾರೆ. ಅವರು ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ, ಆದರೆ ಚೆನ್ನೈ ಜನರು ಧೋನಿಯನ್ನು ತುಂಬಾ ಆರಾಧಿಸುತ್ತಾರೆ. CSK ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಥಾಲಾ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.


ಅವರ ನಾಯಕತ್ವವು ಅವರ ಆಟದಂತೆಯೇ ಉತ್ತಮವಾಗಿದೆ. ಅವರ ಫಿಟ್ನೆಸ್ ಮತ್ತು ಆಟವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವು ಅವರನ್ನು ಉತ್ತಮ ನಾಯಕನನ್ನಾಗಿ ಮಾಡುತ್ತದೆ. ಮೈದಾನದಲ್ಲಿ ಅವರ ಕೌಶಲ್ಯ ಅದ್ಭುತವಾಗಿದೆ. CSK ಯಶಸ್ವಿಯಾಗಲು ಪ್ರಮುಖ ಕಾರಣಗಳಲ್ಲಿ ಒಬ್ಬರು ಎಂದಿದ್ದಾರೆ.


ಇದನ್ನೂ ಓದಿ: Jasprit Bumrah: ಬುಮ್ರಾಗೆ ಲವ್ ಫೆಲ್ಯೂರ್ ಆಗಿದ್ಯಾ? ಸ್ಟಾರ್ ಬೌಲರ್‌ ಗಡ್ಡದ ಹಿಂದಿದೆ ರೋಚಕ ಸ್ಟೋರಿ!


ಕಂಬ್ಯಾಕ್​ ಮಾಡುತ್ತಾ ಚೆನ್ನೈ?:


ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2023 ರಲ್ಲಿ ಆರ್‌ಸಿಬಿ, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಜೊತೆಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಐಪಿಎಲ್‌ನ ಕೊನೆಯ ಋತುವಿನಲ್ಲಿ CAK ಗೆ ತುಂಬಾ ಕೆಟ್ಟದಾಗಿತ್ತು. ಲೀಗ್ ಸುತ್ತಿನ ನಂತರ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿತ್ತು. ಚೆನ್ನೈ ತನ್ನ ಕೊನೆಯ ಐಪಿಎಲ್ ಪ್ರಶಸ್ತಿಯನ್ನು 2021 ರಲ್ಲಿ ಗೆದ್ದುಕೊಂಡಿದೆ.

top videos


  ಕಳೆದ ಋತುವಿನಲ್ಲಿ ಆರಂಭಿಕ ಪಂದ್ಯಗಳಲ್ಲಿ ಕಳಪೆ ಪ್ರದರ್ಶನದ ನಂತರ, ರವೀಂದ್ರ ಜಡೇಜಾ ಅವರಿಂದ ನಾಯಕತ್ವವನ್ನು ವಹಿಸಿಕೊಂಡ ನಂತರ ಎಂಎಸ್ ಧೋನಿಗೆ ಮತ್ತೊಮ್ಮೆ ತಂಡದ ನಾಯಕತ್ವವನ್ನು ನೀಡಲಾಯಿತು. 2008ರ ಐಪಿಎಲ್‌ನ ಮೊದಲ ಸೀಸನ್‌ನಿಂದ ಧೋನಿ ಚೆನ್ನೈ ತಂಡದಲ್ಲಿದ್ದರು. 2016 ರಲ್ಲಿ, CSK 2 ವರ್ಷಗಳ ಕಾಲ ನಿಷೇಧಕ್ಕೊಳಗಾದಾಗ, ಧೋನಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್​ ಪರ ಆಡಿದ್ದರು.

  First published: