• Home
  • »
  • News
  • »
  • sports
  • »
  • IPL: ಈ ಐವರು ಪ್ಲೇಯರ್ಸ್​ಗಳಿಗಾಗಿ ಐಪಿಎಲ್ ಹರಾಜಿನಲ್ಲಿ ನಡೆಯಲಿದೆ ಮೆಗಾ ಫೈಟ್​!

IPL: ಈ ಐವರು ಪ್ಲೇಯರ್ಸ್​ಗಳಿಗಾಗಿ ಐಪಿಎಲ್ ಹರಾಜಿನಲ್ಲಿ ನಡೆಯಲಿದೆ ಮೆಗಾ ಫೈಟ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IPL: ಚೆನ್ನೈ ಹಾಗೂ ಮುಂಬೈ ಆಟದ ವೈಖರಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಮಿನಿ ಹರಾಜಿಗೆ ಮುಖಮಾಡಿದ್ದು ಅಗ್ರ ಶ್ರೇಯಾಂಕಿತ ಆಟಗಾರರನ್ನು ತಂಡಕ್ಕೆ ಆರಿಸಿಕೊಳ್ಳುವ ನಿರ್ಧಾರದಲ್ಲಿವೆ.

  • Trending Desk
  • Last Updated :
  • New Delhi, India
  • Share this:

ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಇತಿಹಾಸದಲ್ಲಿ ಎರಡು ಅತ್ಯಂತ ಯಶಸ್ವಿ ಫ್ರಾಂಚೈಸಿಗಳೆಂದರೆ ಮುಂಬೈ ಇಂಡಿಯನ್ಸ್ (MI) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳಾಗಿವೆ. ಇಲ್ಲಿವರೆಗೆ ಆಡಿದ ಟಿ20 ಪಂದ್ಯಾವಳಿಯ 15 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಪಂದ್ಯವನ್ನು ಗೆದ್ದಿದ್ದು, ಸಿಎಸ್‌ಕೆ 4  ಬಾರಿ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಆದರೆ ಕಳೆದ IPL ಸೀಸನ್‌ನಲ್ಲಿ, ಎರಡು ತಂಡಗಳು ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ ನಾಲ್ಕನ್ನು ಗೆಲ್ಲಲು ಸಾಧ್ಯವಾಯಿತು. ಚೆನ್ನೈ ಹಾಗೂ ಮುಂಬೈ ಆಟದ ವೈಖರಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಮಿನಿ ಹರಾಜಿಗೆ ಮುಖಮಾಡಿದ್ದು ಅಗ್ರ ಶ್ರೇಯಾಂಕಿತ ಆಟಗಾರರನ್ನು ತಂಡಕ್ಕೆ ಆರಿಸಿಕೊಳ್ಳುವ ನಿರ್ಧಾರದಲ್ಲಿವೆ. ಮುಂಬೈ ಹಾಗೂ ಚೆನ್ನೈ ನಡುವೆ ಬಿಡ್ಡಿಂಗ್ ಯುದ್ಧಕ್ಕೆ ಈ ಆಯ್ಕೆಗಳು ಕಾರಣವಾಗಲಿವೆ. ಹಾಗಾದರೆ ಎರಡೂ ಫ್ರಾಂಚೈಸಿಗಳು ಮಿನಿ ಹರಾಜಿಗೆ ಪ್ರಚೋದನೆ ನೀಡುವ ಐದು ಆಟಗಾರರ ವಿವರ ಇಲ್ಲಿದೆ.


ಯಾವೆಲ್ಲಾ ಆಟಗಾರರಿಗೆ ಬಲೆ ಹಾಕಲಿದೆ ತಂಡಗಳು:

ವಿದ್ವತ್ ಕಾವೇರಪ್ಪ:


ವಿದ್ವತ್ ಕಾವೇರಪ್ಪ ಕರ್ನಾಟಕ ಕ್ರಿಕೆಟ್ ರಂಗದಲ್ಲಿ ಅತ್ಯಾಕರ್ಷಕ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದು, ದೇಶೀಯ ಟಿ20 ಪಂದ್ಯಗಳಲ್ಲಿ ತಮ್ಮನ್ನು ತಾವೊಬ್ಬ ವಿಕೆಟ್ ಪಡೆಯುವ ಬೌಲರ್ ಎಂದು ಸಾಬೀತುಪಡಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಆವೃತ್ತಿಯಲ್ಲಿ, ಮುಂಬೈ ಮತ್ತು ಚೆನ್ನೈ ಎರಡೂ ಬೌಲಿಂಗ್ ವಲಯದಲ್ಲಿ ನುಗ್ಗಿ ಹೊಡೆಯುವ ಸಾಮರ್ಥ್ಯ ಕಡಿಮೆ ಇದೆ. ಕಾವೇರಪ್ಪನನ್ನು ತಂಡಕ್ಕೆ ಸೇರಿಸಿಕೊಳ್ಳುವುದು ವಿಕೆಟ್ ಕಬಳಿಸಲು ಸಹಾಯಕವಾಗಿರಲಿದೆ.


ಕ್ಯಾಮರೂನ್ ಗ್ರೀನ್:


ಕ್ಯಾಮರೂನ್ ಗ್ರೀನ್ ಆಲ್‌ರೌಂಡರ್ ಆಟಗಾರನಾಗಿದ್ದು ಅಂತರಾಷ್ಟ್ರೀಯ ಕ್ರಿಕೆಟ್ ರಂಗದಲ್ಲಿ ಒಬ್ಬ ಉತ್ತಮ ಆಟಗಾರ ಎಂದೆನಿಸಿದ್ದಾರೆ. 12 ODIಗಳಲ್ಲಿ 92.15 ಸ್ಟ್ರೈಕ್ ರೇಟ್‌ನಲ್ಲಿ 270 ರನ್ ಗಳಿಸಿದ್ದಾರೆ. 173.75 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 139 ರನ್‌ಗಳನ್ನು ಸಿಡಿಸಿದ್ದಾರೆ.


ಇದನ್ನೂ ಓದಿ: T20 World Cup 2022: ಸೆಮೀಸ್‌ಗೂ ಮುನ್ನ ಟೀಂ ಇಂಡಿಯಾಗೆ ಟೆನ್ಷನ್, ರೋಹಿತ್ ಜೊತೆ ಫಾರ್ಮ್‌ ಕಳೆದುಕೊಂಡ ಮತ್ತೋರ್ವ ಆಟಗಾರ

ಚೆನ್ನೈ, ಡ್ವೇನ್ ಬ್ರಾವೋ ಮತ್ತು ಡ್ವೈನ್ ಪ್ರಿಟೋರಿಯಸ್ ಅವರಂತಹ ಕೆಲವು ಆಲ್-ರೌಂಡ್ ಆಟಗಾರರ ಆಯ್ಕೆಗಳನ್ನು ಹೊಂದಿದ್ದರೂ ಉನ್ನತ ಮಟ್ಟದಲ್ಲಿ ಆಟವಾಡುವುದಿಲ್ಲ. ಹೀಗಾಗಿ ತಂಡವು ಗ್ರೀನ್ ಅನ್ನು ತಂಡಕ್ಕೆ ಸೇರಿಸಲು ಪ್ರಯತ್ನಿಸಬಹುದು.


ಕೇನ್ ರಿಚರ್ಡ್‌ಸನ್:


ಕೇನ್ ರಿಚರ್ಡ್‌ಸನ್ ಟಿ20 ಸೀರೀಸ್‌ನಲ್ಲಿ ಉತ್ತಮ ಆಟಗಾರ ಎಂದೆನಿಸಿದ್ದಾರೆ. 154 ಪಂದ್ಯಗಳಲ್ಲಿ 200 ವಿಕೆಟ್‌ ಕಬಳಿಸಿದ್ದಾರೆ. ತಂಡಗಳ ಬೌಲರ್‌ಗಳ ಕೊರತೆಯನ್ನು ಸರಿದೂಗಿಸಲು ಎರಡೂ ತಂಡಗಳು ಕೇನ್ ಅವರನ್ನು ತಂಡಕ್ಕೆ ಆಯ್ಕೆಮಾಡಿಕೊಳ್ಳುವ ಸಾಧ್ಯತೆ ಇದೆ. ಅನೇಕ ಬೌಲಿಂಗ್ ಕಲೆಗಳನ್ನು ಕರಗತ ಮಾಡಿಕೊಂಡಿರುವ 31 ರ ಹರೆಯದ ಕೇನ್, ಯಾವ ತಂಡಕ್ಕೆ ಆಯ್ಕೆಯಾಗಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.


ಬೆನ್ ಸ್ಟೋಕ್ಸ್:


ವಿಶ್ವದ ಅತ್ಯುತ್ತಮ ಆಲ್‌ರೌಂಡ್ ಆಟಗಾರರಲ್ಲಿ ಬೆನ್ ಒಬ್ಬರು. ಅನುಭವಿ ಆಟಗಾರರಾಗಿರುವ ಬೆನ್, ಶಿಸ್ತಿನ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಟಿ20ಯ 155 ಪಂದ್ಯಗಳಲ್ಲಿ ಬೆನ್ ಸ್ಟೋಕ್ಸ್ ಕಾಣಿಸಿಕೊಂಡಿದ್ದಾರೆ ಹಾಗೂ 133.99 ಸ್ಟ್ರೈಕ್ ರೇಟ್‌ನಲ್ಲಿ 2956 ರನ್‌ಗಳನ್ನು ಸಂಗ್ರಹಿಸಿದ್ದಾರೆ.


ಶಿವಂ ದುಬೆ ಹೊರತುಪಡಿಸಿ, ಚೆನ್ನೈ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆಲ್‌ರೌಂಡರ್ ಇಲ್ಲ. ಸ್ಟೋಕ್ಸ್ ಈ ಕೊರತೆಯನ್ನು ನೀಗಿಸಬಹುದು ಎಂದು ಊಹಿಸಲಾಗಿದೆ. ಧೋನಿಯ ನಂತರ ಚೆನ್ನೈ ತಂಡದ ನಾಯಕತ್ವ ಸ್ಥಾನಕ್ಕೆ ಇಂಗ್ಲೆಂಡ್‌ನ ಅನುಭವಿ ಆಟಗಾರ ನಾಯಕನಾಗುವ ನಿರೀಕ್ಷೆ ಕೂಡ ಇದೆ.


ಇದನ್ನೂ ಓದಿ: Ind Vs Eng T20 World Cup 2022: ಸೆಮೀಸ್​ಗೂ ಮುನ್ನ ಇಂಗ್ಲೆಂಡ್​ ಸ್ಟಾರ್​ ಆಟಗಾರನಿಗೆ ಗಾಯ, ಆದ್ರೆ ಇದು ಟೀಂ ಇಂಡಿಯಾಗೆ ಲಾಭವಂತೆ!

ಸ್ಯಾಮ್ ಕರನ್:


ಆಲ್‌ರೌಂಡರ್ ಆಟಗಾರ ಸ್ಯಾಮ್, 143 ಪಂದ್ಯಗಳಲ್ಲಿ ತಮ್ಮ ಕರಾಮತ್ತು ಪ್ರದರ್ಶಿಸಿದ್ದಾರೆ. 135.65 ಸ್ಟ್ರೈಕ್ ರೇಟ್‌ನಲ್ಲಿ 1731 ರನ್ ಗಳಿಸಿದ ಆಟಗಾರ ಕೂಡ ಹೌದು. 24 ರ ಹರೆಯದ ಸ್ಯಾಮ್ 2020 ಹಾಗೂ 21 ರಲ್ಲಿ ಸಿಎಸ್‌ಕೆಗಾಗಿ ಆಡಿದ್ದಾರೆ ಹಾಗೂ ಧೋನಿ ನಾಯಕತ್ವದ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಕರನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸನ್ನಾಹದಲ್ಲಿದ್ದು ಭಾರೀ ಮೊತ್ತವನ್ನು ನೀಡುವ ನಿರೀಕ್ಷೆ ಇದೆ. ಮುಂಬೈ ಫ್ರಾಂಚೈಸಿ ಕೂಡ ಕರನ್ ಕಡೆಗೆ ಒಲವು ಹೊಂದಿದ್ದು ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿ ಖ್ಯಾತಿ ಗಳಿಸಿರುವ ತಂಡ ಸ್ಯಾಮ್ ಕರನ್ ಅನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಭಾರೀ ಸಿದ್ಧತೆಯನ್ನು ಮಾಡಿಕೊಂಡಿದೆ ಎನ್ನಲಾಗಿದೆ.

Published by:shrikrishna bhat
First published: