IPL 2022: ಸಾರ್ವಕಾಲಿಕ ಐಪಿಎಲ್ ದಾಖಲೆ ಸರಿಗಟ್ಟುವ ಮೂಲಕ ಇತಿಹಾಸ ನಿರ್ಮಿಸಿದ ಬ್ರಾವೊ

ಚೆನ್ನೈ ತಂಡದ ಸ್ಟಾರ್​ ಆಲ್​ರೌಂಡರ್ ವಿಂಡೀಸ್ ಆಟಗಾರ ಡ್ವೇನ್ ಬ್ರಾವೊ ಐಪಿಎಲ್​ ನಸಾರ್ವಕಾಲಿಕ ಶ್ರೇಷ್ಠ ದಾಖಲೆಯೊಂದನ್ನು ಬರೆದಿದ್ದಾರೆ.

ಡ್ವೇನ್ ಬ್ರಾವೊ

ಡ್ವೇನ್ ಬ್ರಾವೊ

  • Share this:
ಐಪಿಎಲ್​ 2022ರ 15ನೇ ಆವೃತ್ತಿ ಈಗಾಗಲೇ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 6 ವಿಕೆಟ್​ಗಳ ಜಯ ದಾಖಲಿಸಿದೆ. ಆದರೆ ಮೊದಲ ಪಂದ್ಯದಲ್ಲಿಯೇ ಚೆನ್ನೈ ತಂಡದ ಸ್ಟಾರ್​ ಆಲ್​ರೌಂಡರ್ ವಿಂಡೀಸ್ ಆಟಗಾರ ಡ್ವೇನ್ ಬ್ರಾವೊ ಐಪಿಎಲ್​ ನಸಾರ್ವಕಾಲಿಕ ಶ್ರೇಷ್ಠ ದಾಖಲೆಯೊಂದನ್ನು ಬರೆದಿದ್ದಾರೆ. ಹೌದು, ನಿನ್ನೆ ನಡೆದ ಪಂದ್ಯದಲ್ಲಿ ಬ್ರಾವೊ 3 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಈವರೆಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ ಲಸಿತ್ ಮಾಲಿಂಗ ಅವರೊಂದಿಗೆ ಸರಿಸಮನಾಗಿದ್ದಾರೆ. ಮಾಲಿಂಗ್​ 170 ವಿಕೆಟ್​ ಪಡೆವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ಇದೀಗ ಬ್ರಾವೊ ಸಹ 170 ವಿಕೆಟ್ ಪಡೆಯುವ ಮೂಲಕ ಮಾಲಿಂಗ್​ ಅವರೊಂದಿಗೆ ಈ ಸಾಧನೆಯನ್ನು ಹಂಚಿಕೊಂಡಿದ್ದಾರೆ. ಮುಂದಿನ ಪಂದ್ಯದಲ್ಲಿ 1 ವಿಕೆಟ್ ಪಡೆಯುವ ಮೂಲಕ ಅಗ್ರಸ್ಥಾನಕ್ಕೇರಲಿದ್ದಾರೆ.

ಮಾಲಿಂಗ್ ದಾಖಲೆ ಸರಿಗಟ್ಟಿದ ಬ್ರಾವೊ:

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯಲ್ಲಿ ಬ್ರಾವೋ ಲಸಿತ್ ಮಾಲಿಂಗ ಅವರನ್ನು ಸರಿಗಟ್ಟಿದ್ದಾರೆ . ಮಾಲಿಂಗ 122 ಐಪಿಎಲ್ ಪಂದ್ಯಗಳಲ್ಲಿ 170 ವಿಕೆಟ್ ಪಡೆದಿದ್ದರು. ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಆದರೆ ಈಗ ಬ್ರಾವೋ ನಿನ್ನೆ ನಡೆದ ಪಂದ್ಯದಲ್ಲಿ 3 ವಿಕೆಟ್ ಪಡೆಯುವ ಮೂಲಕ ಈ ದಾಖಲೆಗೆ ಸರಿಸಮನಾಗಿದ್ದಾರೆ.

ದಾಖಲೆ ಸನಿಹವಿರುವ ಆಟಗಾರರು:

ಬ್ರಾವೋ ಮತ್ತು ಮಾಲಿಂಗ 170 ವಿಕೆಟ್ ಪಡೆಯುವ ಮೂಲಕ ಮೊದಲ ಸ್ಥಾನವನ್ನು ಇಬ್ಬರು ಆಟಗಾರರು ಹಂಚಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ 166 ವಿಕೆಟ್‌ಗಳೊಂದಿಗೆ ಅಮಿತ್ ಮಿಶ್ರಾ, ಮೂರನೇ ಶ್ರೇಯಾಂಕದ ಪಿಯೂಷ್ ಚಾವ್ಲಾ 157 ವಿಕೆಟ್ ಪಡೆದಿದ್ದಾರೆ. ಇನ್ನು, ಹರ್ಭಜನ್ ಸಿಂಗ್ ಕೂಡ 150 ಪಡೆಯುವ ಮೂಲಕ ಈ ಪಟ್ಟಿಯಲ್ಲಿದ್ದಾರೆ. ಕೆಕೆಆರ್ ವಿರುದ್ಧದ 152ನೇ ಪಂದ್ಯದಲ್ಲಿ ಬ್ರಾವೋ 170 ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ: IPL 2022: ದಯವಿಟ್ಟು ಹೆಲ್ಮೆಟ್ ಧರಿಸಿ! KKR ವಿಕೆಟ್‌ಕೀಪರ್ ಶೆಲ್ಡನ್ ಜಾಕ್ಸನ್​ಗೆ ಯುವರಾಜ್ ಸಿಂಗ್ ಮನವಿ

ಬ್ರಾವೋ ಹೆಸರಿನಲ್ಲಿದೆ ವಿಶ್ವ ದಾಖಲೆ:

ಸದ್ಯ ಲಸಿತ್ ಮಾಲಿಂಗ ದಾಖಲೆ ಮುರಿಯಲು ಬ್ರಾವೊಗೆ ಕೇವಲ 1 ವಿಕೆಟ್ ಅಗತ್ಯವಿದೆ. ಇದಾಗ್ಯೂ ಒಟ್ಟಾರೆ ಟಿ20 ಕ್ರಿಕೆಟ್ ದಾಖಲೆ ನೋಡುವುದಾದರೆ, ಡ್ವೇನ್ ಬ್ರಾವೊ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಈವರೆಗೆ 522 ಟಿ20 ಪಂದ್ಯಗಳಿಂದ 571 ವಿಕೆಟ್ ಪಡೆದು ಬ್ರಾವೊ ವಿಶ್ವ ದಾಖಲೆ ಬರೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಇಮ್ರಾನ್ ತಾಹಿರ್ 451 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿ ಹಾಗೂ ರಶೀದ್ ಖಾನ್ 435 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ಕೆಟ್ಟ ದಾಖಲೆಗೆ ಸಾಕ್ಷಿಯಾದ ಅಂಬಟಿ ರಾಯುಡು:

ಇನ್ನು, ಇದೇ ಪಂದ್ಯದಲ್ಲಿ ರಾಯಡು ರನೌಟ್ ಆಗುವ ಮೂಲಕ ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ ರನೌಟ್ ಆದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆರುವ ಮೂಲಕ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 16 ಬಾರಿ ರನೌಟ್ ಆದ ಗೌತಮ್ ಗಂಭೀರ್ ಮತ್ತು ಶಿಖರ್ ಧವನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 14 ಬಾರಿ ರನೌಟ್ ಆಗಿರುವ ಎಬಿ ಡಿವಿಲಿಯರ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: IPL 2022: ಮೊದಲ ಪಂದ್ಯದಲ್ಲೇ ಜಡ್ಡುಗೆ ಸೋಲಿನ ರುಚಿ ತೋರಿಸಿದ ಕೆಕೆಆರ್​! ಧೋನಿ ಅರ್ಧ ಶತಕ ವ್ಯರ್ಥ

ಚಾಂಪಿಯನ್​ ಆಟ ಆಡಿದ ಧೋನಿ:

ಐಪಿಎಲ್​ 2022ರ ಮೊದಲ ಪಂದ್ಯದಲ್ಲೇ ಮಹೇಂದ್ರ ಸಿಂಗ್​ ಧೋನಿ ಚಾಂಪಿಯನ್​ ಆಟ ಆಡಿದ್ದಾರೆ. 38 ಬಾಲ್​ಗಳಲ್ಲಿ ಅಜೇಯ 50 ರನ್​ ಬಾರಿಸಿದ್ದಾರೆ. ಈ ಮೂಲಕ 2 ವರ್ಷದ ಬಳಿಕ ಧೋನಿ ಅವರ ಬ್ಯಾಟ್​ನಿಂದ ರನ್​ ಬಂದಿದೆ. ಸ್ಟೇಡಿಯಂನಲ್ಲಿ ನೆರೆದಿದ್ದ ಧೋನಿ ಅಭಿಮಾನಿಗಳು ಫುಲ್​ ಥ್ರಿಲ್​ ಆಗಿದ್ದಾರೆ. ರನ್​ ಕಲೆಹಾಕಲು ತಿಣುಕಾಡುತ್ತಿದ್ದ ಸಿಎಸ್​ಕೆ ತಂಡಕ್ಕೆ ಧೋನಿ ಆಸರೆಯಾದರು.
Published by:shrikrishna bhat
First published: