ನ್ಯೂಸ್ 18 ಕನ್ನಡ
ಮಾಸ್ಕೋ (ಜೂ. 20): ಫಿಫಾ ವಿಶ್ವಕಪ್ನಲ್ಲಿ ಇಂದು ನಡೆದ ಮೊರಾಕ್ಕೊ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ತಂಡ 1-0 ಅಂತರದಲ್ಲಿ ಜಯಗಳಿಸಿ ಗೆಲುವಿನ ಖಾತೆ ತೆರೆದಿದೆ.
ರಷ್ಯಾದ ಲುಜ್ನಿಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪೋರ್ಚುಗಲ್ನ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ಅವರು ಸಿಡಿಸಿದ ಒಂದು ಗೋಲು ತಂಡದ ಗೆಲುವಿಗೆ ಕಾರಣವಾಯಿತು. ಪಂದ್ಯ ಆರಂಭವಾದ ಕೇವಲ 4ನೇ ನಿಮಿಷದಲ್ಲಿ ರೊನಾಲ್ಡೋ ಅವರು ಚೆಂಡನ್ನು ನೆಟ್ನೊಳಗೆ ಅಟ್ಟುವ ಮುಲಕ ಪೋರ್ಚುಗಲ್ನ ಖಾತೆ ತೆರೆದರು. ಬಳಿಕ ದ್ವೀತಿಯಾರ್ಧದಲ್ಲಿ ಗೋಲು ಹೊಡೆಯಲು ಎರಡೂ ತಂಡಗಳ ನಡುವೆ ಕಠಿಣ ಪೈಪೋಟಿ ನಡೆಯಿತು. 46ನೇ ನಿಮಿಷದಲ್ಲಿ ಮೊರಾಕ್ಕೊ ತಂಡಕ್ಕೆ ಫ್ರೀ ಕಿಕ್ ಅವಕಾಶ ಸಿಕ್ಕಿತಾದರು, ಅದನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿ ಕೈಚೆಲ್ಲಿತು.
ಪಂದ್ಯ ಕೊನೆಯ ಹಂತಕ್ಕೆ ತಲುಪಿತ್ತಿರುವಾಗ ಮೊರಾಕ್ಕೊ ತಂಡ ಗೋಲಿಗಾಗಿ ಎಷ್ಟು ಶ್ರಮ ವಹಿಸಿದರು ಪೋರ್ಚುಗಲ್ ಗೋಲಿಗೆ ಎಡೆಮಾಡಿಕೊಟ್ಟಿಲ್ಲ. ಅಂತಿಮಾಗಿ ರೊನಾಲ್ಡೋ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಪೋರ್ಚುಗಲ್ ಜಯ ದಾಖಲಿಸಿದೆ.
Victory for #POR thanks to another goal from @Cristiano! #PORMOR pic.twitter.com/lLlQIU7WSt
— FIFA World Cup 🏆 (@FIFAWorldCup) June 20, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ